ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆಯಲ್ಲೀಗ ಕ್ಯಾಮೆರಾ ಮೊಬೈಲ್ಗಳ ಹಾವಳಿ ಹೆಚ್ಚಾಗಿದೆ. ಶವೋಮಿ ಮೊದಲ ಬಾರಿಗೆ ಅದುಕೂಡ ಅತ್ಯಂತ ಕಡಿಮೆ ಬೆಲೆಗೆ 108 ಮೆಗಾಫಿಕ್ಸೆಲ್ ಕ್ಯಾಮೆರಾ ಫೋನ್ ಪರಿಚಯಿಸಿದ್ದೇ ತಡ ಇತರೆ ಬಹುತೇಕ ಬ್ರ್ಯಾಂಡ್ಗಳು ಮೊಬೈಲ್ನಲ್ಲಿನ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಮುಖ್ಯವಾಗಿ ಭಾರತದಲ್ಲಿ (Xiaomi) ಶವೋಮಿ ಕಂಪನಿಯ ಫೋನ್ಗಳಿಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲೂ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನ್ಗಳು ದೇಶದಲ್ಲಿ ಎಗ್ಗಿಲ್ಲದೆ ಮಾರಾಟ ಆಗುತ್ತಿದೆ. ಆದರೆ ಇನ್ನು ನೀವು ಈ 108 ಮೆಗಾಫಿಕ್ಸೆಲ್ನ ಸ್ಮಾರ್ಟ್ಫೋನನ್ನು ಮರೆತು ಬಿಡಿ. ಯಾಕೆಂದರೆ ವಿಶ್ವ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಶವೋಮಿ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು (200MP Camera Phone) ಪರಿಚಯಿಸಲು ಮುಂದಾಗಿದೆ.
ಹೌದು, ಶವೋಮಿ ಕಂಪನಿ ತನ್ನ ರೆಡ್ಮಿ ಬ್ರ್ಯಾಂಡ್ನ ಅಡಿಯಲ್ಲಿ 200 ಮೆಗಾಫಿಕ್ಸೆಲ್ ಕ್ಯಾಮೆರಾ ಇರುವ ಫೋನನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಫೋನಿನ ಹೆಸರು ರೆಡ್ಮಿ K50S ಪ್ರೊ ಆಗಿರಲಿದೆಯಂತೆ. ಪ್ರಸಿದ್ಧ ಟೆಕ್ ಮಾಹಿತಿಗಾರ ಯೋಗೇಶ್ ಬ್ರಾರ್ ಈ ಬಗ್ಗೆ ಖಚಿತ ಪಡಿಸಿದ್ದು, ರೆಡ್ಮಿ K50S ಪ್ರೊ ಸ್ಮಾರ್ಟ್ಫೋನ್ನ ಮುಖ್ಯ ಕ್ಯಾಮೆರಾ 200 ಮೆಗಾಫಿಕ್ಸೆಲ್ನಿಂದ ಕೂಡಿರಲಿದೆ ಎಂದು ಹೇಳಿದ್ದಾರೆ. ಈ ಕ್ಯಾಮೆರಾ ಮೂಲಕ ಲೋ ಲೈಟ್ ಇರುವ ಜಾಗದಲ್ಲಿ ತೆಗೆದ ಫೋಟೋ ಕೂಡ ಅದ್ಭುವಾಗಿ ಮೂಡಿಬರುತ್ತಂತೆ.
ರೆಡ್ಮಿ K50S ಪ್ರೊ ಸ್ಮಾರ್ಟ್ಫೋನ್ನಲ್ಲಿ ಅತ್ಯಂತ ಬಲಿಷ್ಠವಾದ ಸ್ನಾಪ್ಡ್ರಾಗನ್ 8+ Gen 1 ಪ್ರೊಸೆಸರ್ ಇರಲಿದೆಯಂತೆ. 200MP ಮೈನ್ ಕ್ಯಾಮೆರಾದೊಂದಿಗೆ 8 ಮೆಗಾಫಿಕ್ಸೆಲ್ ವೈಡ್ ಆ್ಯಂಗಲ್ ಕ್ಯಾಮೆರಾ ಹಾಗೂ 2 ಮೆಗಾಫಿಕ್ಸೆಲ್ ಮ್ಯಾಕ್ರೊ ಸೆನ್ಸಾರ್ ಕ್ಯಾಮೆರಾ ಅಳವಡಿಸಲಾಗಿದೆಂತೆ. 6.67 ಇಂಚಿನ ಫುಲ್ ಹೆಚ್ಡಿ+ ಅಮೋಲೆಡ್ ಡಿಸ್ಪ್ಲೇ ಇರಲಿದೆ ಎಂಬ ಮಾತುಕೂಡ ಇದೆ.
MIUI 13 ಮೂಲಕ ಆಂಡ್ರಾಯ್ಡ್ 12 ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆಯಂತೆ. 12GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯ ಇರಲಿದೆ. ಮೂಲಗಳ ಪ್ರಕಾರ ಇದು 5000mAh ನ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಹೊಂದಿರಲಿದೆ. ಇದಕ್ಕೆ ಪೂರಕವಾಗಿ 120W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇರಲಿದೆ. ಇನ್ಡಿಸ್ಪ್ಲೇ ಫಿಂಗರ್ ಪ್ರಿಂಟ್ ಅಳವಡಿಸಲಾಗಿದೆಯಂತೆ. ಇದರ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ.