ಮಾರುಕಟ್ಟೆಗೆ ಬಂತು 108MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ರೆಡ್ಮಿ ನೋಟ್ 13R ಪ್ರೊ ಬಿಡುಗಡೆ

|

Updated on: Nov 20, 2023 | 2:15 PM

Redmi Note 13R Pro Phone Launched: ಶವೋಮಿ ಇದೀಗ ತನ್ನ ರೆಡ್ಮಿ ಬ್ರ್ಯಾಂಡ್​ನ ಅಡಿಯಲ್ಲಿ ಹೊಸ ರೆಡ್ಮಿ ನೋಟ್ 13R ಪ್ರೊ ಸ್ಮಾರ್ಟ್​ಫೋನನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್​ಫೋನ್​ನಲ್ಲಿ 2-ಮೆಗಾಪಿಕ್ಸೆಲ್ ಶೂಟರ್ ಜೊತೆಗೆ 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಆಗಿದೆ.

ಮಾರುಕಟ್ಟೆಗೆ ಬಂತು 108MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ರೆಡ್ಮಿ ನೋಟ್ 13R ಪ್ರೊ ಬಿಡುಗಡೆ
Redmi Note 13R Pro
Follow us on

ಶವೋಮಿ ಕಂಪನಿ ಅಪರೂಪಕ್ಕೆ ತನ್ನ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ. ಸಮಯ ತೆಗೆದುಕೊಂಡ ಒಂದೊಳ್ಳೆ ಮೊಬೈಲ್ ಅನ್ನು ಬಿಡುಗಡೆ ಮಾಡುತ್ತಿರುವ ಶವೋಮಿ ಇದೀಗ ತನ್ನ ರೆಡ್ಮಿ ಬ್ರ್ಯಾಂಡ್​ನ ಅಡಿಯಲ್ಲಿ ಹೊಸ ರೆಡ್ಮಿ ನೋಟ್ 13R ಪ್ರೊ (Redmi Note 13R Pro) ಸ್ಮಾರ್ಟ್​ಫೋನನ್ನು ಅನಾವರಣ ಮಾಡಿದೆ. ಈ ಫೋನ್ ಮೂರು ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ. ಡೈಮೆನ್ಸಿಟಿ 6080 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 108-ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಸದ್ಯಕ್ಕೆ ಚೀನಾದಲ್ಲಿ ರಿಲೀಸ್ ಆಗಿರುವ ಈ ಸ್ಮಾರ್ಟ್​ಫೋನ್​ನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ರೆಡ್ಮಿ ನೋಟ್ 13R ಪ್ರೊ ಬೆಲೆ:

ಹೊಸದಾಗಿ ಬಿಡುಗಡೆಯಾದ ರೆಡ್ಮಿ ನೋಟ್ 13R ಪ್ರೊ ಚೀನಾದಲ್ಲಿ ಏಕೈಕ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 12GB RAM + 256GB ಸ್ಟೋರೇಜ್ ಮಾದರಿಗೆ CNY 1,999. ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 23,000 ರೂ. ಇರಬಹುದು. ಇದು ಮಿಡ್‌ನೈಟ್ ಬ್ಲ್ಯಾಕ್, ಟೈಮ್ ಬ್ಲೂ ಮತ್ತು ಮಾರ್ನಿಂಗ್ ಲೈಟ್ ಗೋಲ್ಡ್ (ಚೀನೀ ಭಾಷೆಯಿಂದ ಅನುವಾದಿಸಲಾಗಿದೆ) ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಪ್ರಸ್ತುತ Mi ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕಿದೆ.

ರೆಡ್ಮಿ ನೋಟ್ 13R ಪ್ರೊ ಫೀಚರ್ಸ್:

ರೆಡ್ಮಿ ನೋಟ್ 13R ಪ್ರೊ ಸ್ಮಾರ್ಟ್​ಫೋನ್ ಆಂಡ್ರಾಯ್ಡ್ 13-ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.67-ಇಂಚಿನ (1,080×2,400 ಪಿಕ್ಸೆಲ್‌ಗಳು) OLED ಡಿಸ್‌ಪ್ಲೇಯನ್ನು 120Hz ವರೆಗೆ ರಿಫ್ರೆಶ್ ರೇಟ್‌ನೊಂದಿಗೆ, 1,000 nits ವರೆಗೆ ಗರಿಷ್ಠ ಬ್ರೈಟ್​ನೊಂದಿಗೆ ನೀಡಲಾಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಯಿಂದ 12GB RAM, Mali G57 GPU ಮತ್ತು 256GB ಯ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಚಾಲಿತವಾಗಿದೆ.

ಇದನ್ನೂ ಓದಿ
ಗೂಗಲ್ ಕಂಪನಿಯಿಂದ ಮತ್ತೊಂದು ​ಫೋನ್: ಪಿಕ್ಸೆಲ್ 8a ಸದ್ಯದಲ್ಲೇ ಬಿಡುಗಡೆ
ಸ್ಯಾಮ್ ಆಲ್ಟ್​ಮ್ಯಾನ್ ವಜಾಗೊಂಡಿದ್ದು ಯಾಕೆ? ಮೈಕ್ರೋಸಾಫ್ಟ್ ನಡೆ ಏನು?
ಭಾರತೀಯರು 2023 ರಲ್ಲಿ ಹೆಚ್ಚಾಗಿ ಬಳಸಿರುವ ಪಾಸ್​ವರ್ಡ್ ಯಾವುದು ಗೊತ್ತೇ?
ಭಾರತದಲ್ಲಿ ದಾಖಲೆ ಬರೆದ ರೆಡ್ಮಿ 12 ಸರಣಿ: ಮಾರಾಟವಾಗಿದ್ದು ಎಷ್ಟು ಫೋನ್?

ChatGPT ಸೃಷ್ಟಿಕರ್ತ ಸ್ಯಾಮ್ ಆಲ್ಟ್‌ಮ್ಯಾನ್ ವಜಾ; OpenAI ಹಂಗಾಮಿ ಸಿಇಒ ಆಗಿ ಮೀರಾ ಮುರಾಟಿ ನೇಮಕ

ಕ್ಯಾಮೆರಾ ವಿಚಾರಕ್ಕೆ ಬಂದರೆ, ಈ ಸ್ಮಾರ್ಟ್​ಫೋನ್​ನಲ್ಲಿ 2-ಮೆಗಾಪಿಕ್ಸೆಲ್ ಶೂಟರ್ ಜೊತೆಗೆ 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಆಗಿದೆ. ಸೆಲ್ಫಿಗಳಿಗಾಗಿ ಮುಂಭಾಗ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ರೆಡ್ಮಿ ನೋಟ್ 13R ಪ್ರೊನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ಗ್ಲೋನಾಸ್, NFC, USB ಟೈಪ್-ಸಿ ಪೋರ್ಟ್, Wi-Fi ಮತ್ತು GPS ಆಯ್ಕೆಗಳು ಸೇರಿವೆ. 5,000mAh ಬ್ಯಾಟರಿಯನ್ನು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಮಾಡಿದೆ. ಈ ಫೋನ್ ಮುಂದಿನ ದಿನಗಳಲ್ಲಿ ಭಾರತಕ್ಕೂ ಬರುವ ಸಾಧ್ಯತೆ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ