Mi Fan Festival 2022: ಶವೋಮಿಯಿಂದ ಎಂಐ ಫ್ಯಾನ್ ಫೆಸ್ಟಿವಲ್ 2022: ಆಫರ್, ಡಿಸ್ಕೌಂಟ್ ಬಗ್ಗೆ ಇಲ್ಲಿದೆ ಮಾಹಿತಿ

ಇದೇ ಏಪ್ರಿಲ್ 6 ರಂದು ಎಂಐ ಫ್ಯಾನ್ ಫೆಸ್ಟಿವಲ್ 2022 ಶುರುವಾಗಿದ್ದು ಏಪ್ರಿಲ್ 18ರ ವರೆಗೆ ಈ ಅದ್ಧೂರಿ ಮೇಳ ನಡೆಯಲಿದೆ. ಈ ಸೇಲ್ ನಲ್ಲಿ ರೆಡ್ಮಿ ಫೋನ್ (Redmi Phone) ಸೇರಿದಂತೆ ಇತರೆ ಪ್ರೊಡಕ್ಟ್ ಗಳು ಕಡಿಮೆ ಬೆಲೆಯಲ್ಲಿ ಸಿಗಲಿದೆ.

Mi Fan Festival 2022: ಶವೋಮಿಯಿಂದ ಎಂಐ ಫ್ಯಾನ್ ಫೆಸ್ಟಿವಲ್ 2022: ಆಫರ್, ಡಿಸ್ಕೌಂಟ್ ಬಗ್ಗೆ ಇಲ್ಲಿದೆ ಮಾಹಿತಿ
Xiaomi Mi Fan Festival 2022
Follow us
TV9 Web
| Updated By: Vinay Bhat

Updated on:Apr 09, 2022 | 2:54 PM

ಶವೋಮಿಯ ಎಂಐ ಫ್ಯಾನ್ ಫೆಸ್ಟಿವಲ್ 2022 (Mi Fan Festival 2022) ಆರಂಭವಾಗಿದೆ. ಇದೇ ಏಪ್ರಿಲ್ 6 ರಂದು ಶುರುವಾಗಿದ್ದು ಏಪ್ರಿಲ್ 18ರ ವರೆಗೆ ಈ ಅದ್ಧೂರಿ ಮೇಳ ನಡೆಯಲಿದೆ. ಈ ಸೇಲ್ ನಲ್ಲಿ ರೆಡ್ಮಿ ಫೋನ್ (Redmi Phone) ಸೇರಿದಂತೆ ಇತರೆ ಪ್ರೊಡಕ್ಟ್ ಗಳು ಕಡಿಮೆ ಬೆಲೆಯಲ್ಲಿ ಸಿಗಲಿದೆ. ಶವೋಮಿ (Xiaomi) ತನ್ನ ಪ್ರೊಡಕ್ಟ್ ಗಳನ್ನು ಕೇವಲ ಒಂದು ರುಪಾಯಿ ಬೆಲೆಗೆ ಮಾರಾಟ ಮಾಡುವ ಫ್ಲ್ಯಾಶ್ ಸೇಲ್ ಮತ್ತು ಹೊಸ ಮಿಸ್ಟ್ರಿ ಬಾಕ್ಸ್ ಸೇಲ್ ಗಳನ್ನು ಕೂಡ ಈ ಸಮಯದಲ್ಲಿ ನಡೆಸಲಿದೆ. ಎಂಐ.ಕಾಮ್ ಮತ್ತು ಅದರ ಸಹಯೋಗದ ಎಂಐ ಹೋಮ್, ಎಂಐ ಸ್ಟೋರ್ ಮತ್ತು ಪಾರ್ಟ್ನರ್ ಆಫ್ ಲೈನ್ ಸ್ಟೋರ್ ಗಳಲ್ಲಿ ಇದು ನಡೆಯಲಿದೆ. ಎರಡು ವಾರಗಳವರೆಗೆ ಈ ಮಾರಾಟ ಉತ್ಸವ ನಡೆಯುತ್ತಿದ್ದು, ಗ್ರಾಹಕರು 45 ಲಕ್ಷ ರೂಪಾಯಿಗಳವರೆಗಿನ ಉಡುಗೊರೆಗಳು ಮತ್ತು ಕೂಪನ್‌ಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ ಎಂದು ಸಂಸ್ಥೆ ತಿಳಿಸಿದೆ.

ಇನ್ನು ಈ ಸೇಲ್ ಲೈವ್ ನಡೆಯುವ ಸಂದರ್ಭದಲ್ಲಿ ಎಂಐ ಸ್ಟೋರ್ ಮತ್ತು ಅಪ್ಲಿಕೇಶನ್‌ಗೆ ಭೇಟಿ ನೀಡುವ ಮತ್ತು ಶಾಪಿಂಗ್ ಮಾಡುವವರು 15,000 ರೂ. ವರೆಗಿನ ಕೂಪನ್‌ಗಳು, ಎರಡು ಚಿನ್ನದ ನಾಣ್ಯಗಳು (2 ಗ್ರಾಂ), 80,000 ರೂ.ವರೆಗಿನ ಗಿಫ್ಟ್ ಹ್ಯಾಂಪರ್‌ಗಳು, ರೆಡ್ ಮಿ X42 ಟಿವಿ ಮತ್ತು 100 ಪ್ರತಿಶತ ಕ್ಯಾಶ್‌ಬ್ಯಾಕ್ ಅನ್ನು ಸಹ ಗೆಲ್ಲುವ ಅವಕಾಶ ಹೊಂದಿದ್ದಾರೆಂದು ಸಂಸ್ಥೆ ತಿಳಿಸಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ, ಗ್ರಾಹಕರು ತಮ್ಮ ಅದೃಷ್ಟವನ್ನು ಜಾಕ್‌ಬಾಟ್ ಡೀಲ್‌ಗಳ ಮೂಲಕ ಪ್ರಯತ್ನಿಸಬಹುದು, ಅಲ್ಲಿ ಅವರು ಬೊಂಬಾಟ್ ಸ್ಮಾರ್ಟ್​ಫೋನ್ ಆದ ಶವೋಮಿ 11i ಹೈಪರ್‌ಚಾರ್ಜ್ 5G ಅನ್ನು ಕೇವಲ 8,999 ರೂ. ಗಳಲ್ಲಿ, ರೆಡ್ಮಿ ಸ್ಮಾರ್ಟ್ ಟಿವಿಯನ್ನು 6,999 ರೂ. ಗಳಲ್ಲಿ, Mi ರೋಬೋಟ್ ವ್ಯಾಕ್ಯೂಮ್ – ಮಾಪ್ P ಅನ್ನು 9,999 ರೂ. ಗಳ ವಿಶೇಷ ಬೆಲೆಗಳಿಗೆ ಖರೀದಿಸಬಹುದಾಗಿದೆ.

ಅಲ್ಲದೆ ಶವೋಮಿ 11i 5G ಮಾರುಕಟ್ಟೆ ಬೆಲೆ 29,999 ರೂ. ನೀವು ಇದನ್ನು ಫ್ಲಿಪ್​ಕಾರ್ಟ್​ನಿಂದ ಖರೀದಿಸಿದರೆ, ಈ ಸ್ಮಾರ್ಟ್​ಫೋನ್ ಅನ್ನು 16% ರಿಯಾಯಿತಿಯ ನಂತರ ರೂ 24,999 ಗೆ ಪಡೆಯುತ್ತೀರಿ. ಇದನ್ನು ಖರೀದಿಸುವಾಗ, ಅದನ್ನು ಐಸಿಐಸಿಐ ಬ್ಯಾಂಕ್​ನ  ಕ್ರೆಡಿಟ್ ಕಾರ್ಡ್​ನೊಂದಿಗೆ ಪಾವತಿಸಿದರೆ, ಎರಡು ಸಾವಿರ ರೂಪಾಯಿಗಳ ತ್ವರಿತ ರಿಯಾಯಿತಿ ಸಿಗುತ್ತದೆ. ಒಟ್ಟಾರೆ 22,999 ರೂ.ಗೆ ಖರೀದಿಸಬಹುದಾಗಿದೆ. ಎಕ್ಸ್​ಚೇಂಜ್ ಆಫರ್ ಅನ್ನು ಸಹ ನೀಡಲಾಗುತ್ತಿದ್ದು, ನಿಮ್ಮ ಹಳೆಯ ಸ್ಮಾರ್ಟ್​ಫೋನ್​ಗೆ ಬದಲಾಗಿ ಈ 5G ಫೋನ್ ಅನ್ನು ಖರೀದಿಸುವ ಮೂಲಕ 13 ಸಾವಿರ ರೂಪಾಯಿಗಳವರೆಗೆ ಉಳಿಸಬಹುದು. ಈ ಎಕ್ಸ್​ಚೇಂಜ್ ಆಫರ್​ನ ಸಂಪೂರ್ಣ ಪ್ರಯೋಜನವನ್ನು ಪಡೆದರೆ, ನೀವು ಈ ಸ್ಮಾರ್ಟ್ಫೋನ್ ಅನ್ನು ರೂ 22,999 ಬದಲಿಗೆ ಕೇವಲ 9,999 ರೂಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.

ಪ್ರತಿದಿನ ರಾತ್ರಿ 8 ಗಂಟೆಗೆ, ಗ್ರಾಹಕರು ತಮಗಾಗಿ ವೈಯಕ್ತೀಕರಿಸಬಹುದಾದ ಒಂದಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಹೆಚ್ಚುವರಿ ರಿಯಾಯಿತಿ ದರಗಳಲ್ಲಿ ಪಡೆಯಲು ‘ಪಿಕ್ ಎನ್’ ಚೂಸ್’ ಅನ್ನು ಬಳಸಬಹುದು. ಈ ಉತ್ಸವದ ಸಂದರ್ಭದಲ್ಲಿ ದಿನದ ವಿವಿಧ ಸಮಯಗಳನ್ನು ವಿಶೇಷ ಕೊಡುಗೆಗಳಡಿಯಲ್ಲಿ ವಿಭಾಗಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ಆಡಿಯೋ ಉತ್ಪನ್ನಗಳು, ಪವರ್ ಬ್ಯಾಂಕ್‌ಗಳು, ಟ್ರಿಮ್ಮರ್‌ಗಳು ಮತ್ತು ಇತರ ಉತ್ಪನ್ನಗಳ ಮೇಲೆ ದೈನಂದಿನ ಆಶ್ಚರ್ಯಕರ ದರಗಳು ಇರುತ್ತವೆ.

WhatsApp: ಆಂಡ್ರಾಯ್ಡ್ ಮತ್ತು ಐಒಎಸ್​​ನಲ್ಲಿ ವಾಟ್ಸ್​ಆ್ಯಪ್ ಲಾಕ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ

Published On - 2:52 pm, Sat, 9 April 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ