Redmi Note 12 Pro Plus: ಬರೋಬ್ಬರಿ 210W ಫಾಸ್ಟ್ ಚಾರ್ಜರ್: ಟೆಕ್ ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸಲು ಮುಂದಾದ ಶವೋಮಿ

ರೆಡ್ಮಿ ನೋಟ್ 12 ಅಡಿಯಲ್ಲಿ ಮೂರು ಫೋನುಗಳು ಬಿಡುಗಡೆ ಆಗಲಿದೆ. ಇದು ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೊ, ರೆಡ್ಮಿ ನೋಟ್ 12 ಪ್ರೊ ಪ್ಲಸ್ ಫೋನುಗಳಾಗಿವೆ. ಇದರಲ್ಲಿ ರೆಡ್ಮಿ ನೋಟ್ 12 ಪ್ರೊ+ 210W ನ ಫಾಸ್ಟ್ ಚಾರ್ಜರ್​ನೊಂದಿಗೆ ಬಿಡುಗಡೆ ಆಗಲಿದೆಯಂತೆ.

Redmi Note 12 Pro Plus: ಬರೋಬ್ಬರಿ 210W ಫಾಸ್ಟ್ ಚಾರ್ಜರ್: ಟೆಕ್ ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸಲು ಮುಂದಾದ ಶವೋಮಿ
Redmi Note 12 Pro Plus
Edited By:

Updated on: Oct 03, 2022 | 1:29 PM

ಚೀನಾ ಮೂಲದ ಪ್ರಸಿದ್ಧ ಟೆಕ್ ಕಂಪನಿ ಶವೋಮಿ (Xiaomi) ಈ ವರ್ಷ ಹೆಚ್ಚಿನ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿಲ್ಲ. ಅಪರೂಪಕ್ಕೆ ರಿಲೀಸ್ ಮಾಡಿದ ಫೋನ್​ಗಳಲ್ಲಿ ಒಂದೊಂದು ವಿಶೇಷತೆ ಇರುತ್ತಿತ್ತು. ಸಮಯ ತೆಗೆದುಕೊಂಡು ವಿಶೇಷ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಿರುವ ಶವೋಮಿ ಇದೀಗ ಟೆಕ್ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ತನ್ನ ಸಬ್​ ಬ್ರ್ಯಾಂಡ್ ರೆಡ್ಮಿ ಅಡಿಯಲ್ಲಿ ರೆಡ್ಮಿ ನೋಟ್ 12 (Redmi Note 12 Series) ಎಂಬ ನೂತನ ಫೋನೊಂದನ್ನು ಲಾಂಚ್ ಮಾಡಲು ತಯಾರಿ ನಡೆಸುತ್ತಿದ್ದು, ಇದರಲ್ಲಿ ಬರೋಬ್ಬರಿ 210W ನ ಫಾಸ್ಟ್ ಚಾರ್ಜರ್ ಇರಲಿದೆಯಂತೆ. ರೆಡ್ಮಿ ನೋಟ್ 12 ಅಡಿಯಲ್ಲಿ ಮೂರು ಫೋನುಗಳು ಬಿಡುಗಡೆ ಆಗಲಿದೆ. ಇದು ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೊ, ರೆಡ್ಮಿ ನೋಟ್ 12 ಪ್ರೊ ಪ್ಲಸ್ (Redmi Note 12 Pro Plus) ಫೋನುಗಳಾಗಿವೆ. ಇದರಲ್ಲಿ ರೆಡ್ಮಿ ನೋಟ್ 12 ಪ್ರೊ+ 210W ನ ಫಾಸ್ಟ್ ಚಾರ್ಜರ್​ನೊಂದಿಗೆ ಬಿಡುಗಡೆ ಆಗಲಿದೆಯಂತೆ.

ಸದ್ಯಕ್ಕೆ ಮಾರುಕಟ್ಟೆಯಲ್ಲಿ 200W ನ ಫಾಸ್ಟ್ ಚಾರ್ಜರ್ ಇರುವ ಫೋನ್ ಐಕ್ಯೂ 10 ಪ್ರೊ ಆಗಿದೆ. ಇದನ್ನು ಆದಷ್ಟು ಬೇಗ ಶವೋಮಿ ಹಿಂದಿಕ್ಕಲಿದೆ. ರೆಡ್ಮಿ ನೋಟ್ 12 ಪ್ರೊ ನಲ್ಲಿ 120W ನ ಫಾಸ್ಟ್ ಚಾರ್ಜರ್ ಇರಲಿದೆಯಂತೆ. ಅಂತೆಯೆ ನೋಟ್ 12 ನಲ್ಲಿ 67W ಫಾಸ್ಟ್ ಚಾರ್ಜರ್ ಸೇರಿಸಲಾಗಿದೆ. ಈ ಸ್ಮಾರ್ಟ್​ಫೋನ್​ಗಳು 3ಸಿ ಸೆರ್ಟಿಫಿಕೇಟ್ ಪಡೆದುಕೊಂಡಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಅಪ್ಪಳಿಸಲಿದೆ.

ಬರುತ್ತಿದೆ 200MP ಕ್ಯಾಮೆರಾದ ಫೋನ್:

ಇದನ್ನೂ ಓದಿ
Vivo Y52 5G: 5000mAh ಬ್ಯಾಟರಿ, 50MP ಕ್ಯಾಮೆರಾ: ವಿವೋದಿಂದ ಮಧ್ಯಮ ಬೆಲೆಗೆ ಬೊಂಬಾಟ್ ಸ್ಮಾರ್ಟ್​ಫೋನ್ ಬಿಡುಗಡೆ
5G ಸೇವೆಗಳ ನಂತರ ಇದೀಗ 6G ವಿಭಾಗದಲ್ಲಿ ಮುನ್ನಡೆ ಸಾಧಿಸಲಿರುವ ಭಾರತ
WhatsApp: ಆಂಡ್ರಾಯ್ಡ್ ಮತ್ತು ಐಫೋನ್​ನಲ್ಲಿ ವಾಟ್ಸ್​ಆ್ಯಪ್ ಡಿಸಪಿಯರಿಂಗ್ ಮೆಸೇಜ್ ಸಕ್ರಿಯಗೊಳಿಸುವುದು ಹೇಗೆ?
Paytm: ಪೇಟಿಯಂ ಆ್ಯಪ್ ಮೂಲಕ ರೈಲು ಎಲ್ಲಿದೆ ಎಂದು ಟ್ರ್ಯಾಕ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

ಶವೋಮಿ ಇದೀಗ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು ಪರಿಚಯಿಸಲು ಮುಂದಾಗಿದೆ. ಶವೋಮಿ ಕಂಪನಿ ತನ್ನ ಶವೋಮಿ 12T ಸರಣಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಅಕ್ಟೋಬರ್ 4 ರಂದು ನಡೆಯಲಿರುವ ಮೇಕ್ ಮೂಮೆಂಟ್ಸ್ ಮೆಗಾ ಎಂಬ ಕಾರ್ಯಕ್ರಮದಲ್ಲಿ ಶವೋಮಿ 12T ಹಾಗೂ ಶವೋಮಿ 12T ಪ್ರೊ ಫೋನ್ ರಿಲೀಸ್ ಆಗಲಿದೆ. ಶವೋಮಿ 12T ಪ್ರೊ 200 ಮೆಗಾಫಿಕ್ಸೆಲ್ ಕ್ಯಾಮೆರಾದೊಂದಿಗೆ ಬಿಡುಗಡೆ ಆಗಲಿದೆ. ಸ್ವತಃ ಶವೋಮಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಖಚಿತ ಪಡಿಸಿದೆ.

ಶವೋಮಿ 12T ಪ್ರೊ ಸ್ಮಾರ್ಟ್​​ಫೋನ್​ನಲ್ಲಿ ಅತ್ಯಂತ ಬಲಿಷ್ಠವಾದ ಸ್ನಾಪ್​ಡ್ರಾಗನ್ 8+ Gen 1 ಪ್ರೊಸೆಸರ್ ಇರಲಿದೆಯಂತೆ. 200MP ಮೈನ್ ಕ್ಯಾಮೆರಾದೊಂದಿಗೆ 8 ಮೆಗಾಫಿಕ್ಸೆಲ್ ವೈಡ್ ಆ್ಯಂಗಲ್ ಕ್ಯಾಮೆರಾ ಹಾಗೂ 2 ಮೆಗಾಫಿಕ್ಸೆಲ್ ಮ್ಯಾಕ್ರೊ ಸೆನ್ಸಾರ್ ಕ್ಯಾಮೆರಾ ಅಳವಡಿಸಲಾಗಿದೆಂತೆ. ಈ ಕ್ಯಾಮೆರಾ ಮೂಲಕ ಲೋ ಲೈಟ್ ಇರುವ ಜಾಗದಲ್ಲಿ ತೆಗೆದ ಫೋಟೋ ಕೂಡ ಅದ್ಭುವಾಗಿ ಮೂಡಿಬರುತ್ತಂತೆ.

Published On - 1:29 pm, Mon, 3 October 22