AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi 12T: 200MP ಕ್ಯಾಮೆರಾದ ಶವೋಮಿ 12T ಸರಣಿ ಬಿಡುಗಡೆಗೆ ದಿನಾಂಕ ಫಿಕ್ಸ್: ಯಾವಾಗ?, ಬೆಲೆ ಎಷ್ಟು?

ಶವೋಮಿ ಕಂಪನಿ ತನ್ನ ಶವೋಮಿ 12T ಸರಣಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಮುಂದಿನ ತಿಂಗಳು ಅಕ್ಟೋಬರ್ 4 ರಂದು ನಡೆಯಲಿರುವ ಮೇಕ್ ಮೂಮೆಂಟ್ಸ್ ಮೆಗಾ ಎಂಬ ಕಾರ್ಯಕ್ರಮದಲ್ಲಿ ಶವೋಮಿ 12T ಹಾಗೂ ಶವೋಮಿ 12T ಪ್ರೊ ಫೋನ್ ರಿಲೀಸ್ ಆಗಲಿದೆ.

Xiaomi 12T: 200MP ಕ್ಯಾಮೆರಾದ ಶವೋಮಿ 12T ಸರಣಿ ಬಿಡುಗಡೆಗೆ ದಿನಾಂಕ ಫಿಕ್ಸ್: ಯಾವಾಗ?, ಬೆಲೆ ಎಷ್ಟು?
Xiaomi 12T Pro
TV9 Web
| Edited By: |

Updated on: Sep 29, 2022 | 2:11 PM

Share

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯಲ್ಲಿ ಕ್ಯಾಮೆರಾ ಮೊಬೈಲ್​ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶವೋಮಿ ಮೊದಲ ಬಾರಿಗೆ ಅದುಕೂಡ ಅತ್ಯಂತ ಕಡಿಮೆ ಬೆಲೆಗೆ 108 ಮೆಗಾಫಿಕ್ಸೆಲ್ ಕ್ಯಾಮೆರಾ ಫೋನ್ ಪರಿಚಯಿಸಿದ್ದೇ ತಡ ಇತರೆ ಬಹುತೇಕ ಬ್ರ್ಯಾಂಡ್​ಗಳು ಮೊಬೈಲ್​​ನಲ್ಲಿನ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಮುಖ್ಯವಾಗಿ ಭಾರತದಲ್ಲಿ (Xiaomi) ಶವೋಮಿ ಕಂಪನಿಯ ಫೋನ್​ಗಳಿಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲೂ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನ್​ಗಳು ದೇಶದಲ್ಲಿ ಎಗ್ಗಿಲ್ಲದೆ ಮಾರಾಟ ಆಗುತ್ತಿದೆ. ಆದರೆ ಇನ್ನು ನೀವು ಈ 108 ಮೆಗಾಫಿಕ್ಸೆಲ್​ನ ಸ್ಮಾರ್ಟ್​​ಫೋನನ್ನು ಮರೆತು ಬಿಡಿ. ಯಾಕೆಂದರೆ ಈಗಾಗಲೇ ಮಾರುಕಟ್ಟೆಗೆ 200 ಮೆಗಾಫಿಕ್ಸೆಲ್ ಕ್ಯಾಮೆರಾದ (200MP Camera) ಸ್ಮಾರ್ಟ್​​ಫೋನ್ ಲಗ್ಗೆಯಿಡುತ್ತಿದೆ.

ಇತ್ತೀಚೆಗಷ್ಟೆ ಮೋಟೋ ಕಂಪನಿ ವಿಶ್ವದ ಮೊಟ್ಟ ಮೊದಲ 200 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಮೋಟೋರೊಲಾ ಎಡ್ಜ್ 30 ಅಲ್ಟ್ರಾ​ ಸ್ಮಾರ್ಟ್​​ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಶವೋಮಿ ಸರದಿ. ಇದೇ ಅಕ್ಟೋಬರ್ 4 ರಂದು ಮಾರುಕಟ್ಟೆಗೆ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನ್ ಅಪ್ಪಳಿಸಲಿದೆ.

ಇದನ್ನೂ ಓದಿ
Image
WhatsApp: ವಾಟ್ಸ್​ಆ್ಯಪ್​ನಿಂದ ಬಂದಿದೆ ತುರ್ತು ಸಂದೇಶ: ಕೂಡಲೇ ಅಪ್ಡೇಟ್ ಮೂಡುವಂತೆ ಸೂಚನೆ
Image
ರೋಚಕತೆ ಸೃಷ್ಟಿಸಿದ ಜಿಯೋ ಫೋನ್ 5G: ಸೋರಿಕೆಯಾಗಿದೆ ಫೀಚರ್ಸ್
Image
Duplicate contacts: ಮೊಬೈಲ್​ನಲ್ಲಿರುವ ಡುಪ್ಲಿಕೇಟ್ ಕಾಂಟೆಕ್ಟ್​ಗಳನ್ನು ಡಿಲೀಟ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Image
ಒಪ್ಪೋದಿಂದ ಬಜೆಟ್ ಬೆಲೆಗೆ ಒಪ್ಪೋ A17 ಸ್ಮಾರ್ಟ್‌ಫೋನ್‌ ಬಿಡುಗಡೆ

ಹೌದು, ಶವೋಮಿ ಇದೀಗ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು ಪರಿಚಯಿಸಲು ಮುಂದಾಗಿದೆ. ಶವೋಮಿ ಕಂಪನಿ ತನ್ನ ಶವೋಮಿ 12T ಸರಣಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಮುಂದಿನ ತಿಂಗಳು ಅಕ್ಟೋಬರ್ 4 ರಂದು ನಡೆಯಲಿರುವ ಮೇಕ್ ಮೂಮೆಂಟ್ಸ್ ಮೆಗಾ ಎಂಬ ಕಾರ್ಯಕ್ರಮದಲ್ಲಿ ಶವೋಮಿ 12T ಹಾಗೂ ಶವೋಮಿ 12T ಪ್ರೊ ಫೋನ್ ರಿಲೀಸ್ ಆಗಲಿದೆ. ಶವೋಮಿ 12T ಪ್ರೊ 200 ಮೆಗಾಫಿಕ್ಸೆಲ್ ಕ್ಯಾಮೆರಾದೊಂದಿಗೆ ಬಿಡುಗಡೆ ಆಗಲಿದೆ. ಸ್ವತಃ ಶವೋಮಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಖಚಿತ ಪಡಿಸಿದೆ.

ಶವೋಮಿ 12T ಪ್ರೊ ಸ್ಮಾರ್ಟ್​​ಫೋನ್​ನಲ್ಲಿ ಅತ್ಯಂತ ಬಲಿಷ್ಠವಾದ ಸ್ನಾಪ್​ಡ್ರಾಗನ್ 8+ Gen 1 ಪ್ರೊಸೆಸರ್ ಇರಲಿದೆಯಂತೆ. 200MP ಮೈನ್ ಕ್ಯಾಮೆರಾದೊಂದಿಗೆ 8 ಮೆಗಾಫಿಕ್ಸೆಲ್ ವೈಡ್ ಆ್ಯಂಗಲ್ ಕ್ಯಾಮೆರಾ ಹಾಗೂ 2 ಮೆಗಾಫಿಕ್ಸೆಲ್ ಮ್ಯಾಕ್ರೊ ಸೆನ್ಸಾರ್ ಕ್ಯಾಮೆರಾ ಅಳವಡಿಸಲಾಗಿದೆಂತೆ. ಈ ಕ್ಯಾಮೆರಾ ಮೂಲಕ ಲೋ ಲೈಟ್ ಇರುವ ಜಾಗದಲ್ಲಿ ತೆಗೆದ ಫೋಟೋ ಕೂಡ ಅದ್ಭುವಾಗಿ ಮೂಡಿಬರುತ್ತಂತೆ. 6.67 ಇಂಚಿನ ಫುಲ್ ಹೆಚ್​ಡಿ+ ಅಮೋಲೆಡ್ ಡಿಸ್​ಪ್ಲೇ ಇರಲಿದೆ ಎಂಬ ಮಾತುಕೂಡ ಇದೆ.

MIUI 13 ಮೂಲಕ ಆಂಡ್ರಾಯ್ಡ್ 12 ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆಯಂತೆ. 12GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯ ಇರಲಿದೆ. ಮೂಲಗಳ ಪ್ರಕಾರ ಇದು 5000mAh ನ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಹೊಂದಿರಲಿದೆ. ಇದಕ್ಕೆ ಪೂರಕವಾಗಿ 120W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇರಲಿದೆ. ಇನ್​ಡಿಸ್​ಪ್ಲೇ ಫಿಂಗರ್ ಪ್ರಿಂಟ್ ಅಳವಡಿಸಲಾಗಿದೆಯಂತೆ. ಇದರ ಬೆಲೆ 65,000 ರೂ. ಇರಬಹುದೆಂದು ಅಂದಾಜಿಸಲಾಗಿದೆ.

Follow Us
TV9 Web
TV9 Web

TV9 Kannada

Read More