ಚೀನಾ ಮೂಲದ ಶವೋಮಿ (Xiaomi) ಕಂಪೆನಿಯ ರೆಡ್ಮಿ ಸ್ಮಾರ್ಟ್ಫೋನ್ಗಳಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಅದಕ್ಕಾಗಿಯೇ ಕಡಿಮೆ ಬೆಲೆಗೆ ಶವೋಮಿ ಆಕರ್ಷಕ ಫೀಚರ್ಗಳುಳ್ಳ ರೆಡ್ಮಿ ಫೋನನ್ನು ದೇಶದಲ್ಲಿ ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ ಇದೇ ಸಾಲಿಗೆ ಮತ್ತೊಂದು ಸ್ಮಾರ್ಟ್‌ಫೋನ್ ಸೇರ್ಪಡೆಯಾಗಲಿದೆ. ನಾಳೆ ಸೆ. 3 ರಂದು ಭಾರತದಲ್ಲಿ ರೆಡ್ಮಿ 10 ಪ್ರೈಮ್ (Redmi 10 Prime) ಸ್ಮಾರ್ಟ್‌ಫೋನ್ ಅನಾವರಣಗೊಳ್ಳಲಿದೆ. ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗಲೇ ಇದರ ಫೀಚರ್ಸ್ ಮೊಬೈಲ್ ಪ್ರಿಯರಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.
ರೆಡ್ಮಿ ತನ್ನ ಈ ಸ್ಮಾರ್ಟ್‌ಫೋನ್ ಬಿಡುಗಡೆ ಬಗ್ಗೆ ಟ್ವಿಟ್ಟರ್ನಲ್ಲಿ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದು, ಸೆ. 3 ರಂದು ಮಧ್ಯಾಹ್ನ 12 ಗಂಟೆಗೆ ಅನಾವರಣಗೊಳ್ಳಲಿದೆ ಎಂದು ಹೇಳಿದೆ. ಜೊತೆಗೆ ಬರೋಬ್ಬರಿ 6000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ನೊಂದಿಗೆ ಬರಲಿದೆ ಎಂಬುದನ್ನೂ ಖಚಿತ ಪಡಿಸಿದೆ.
With just 2⃣ days to go, we are all charged up ⚡️
For the grand entry of the #AllRoundSuperstar!Bringing another first, in ⏪ESREVER⏩!
All hail the ⬇️
? Lightest 6000mAh Battery
From the house of ‘Redmi’! ⭐️#Redmi10Prime ➡️ https://t.co/Of2joULE0B
03.09.21, 12PM pic.twitter.com/6ZWZRRTFdI— Redmi India – #Redmi10Prime | All-round Superstar (@RedmiIndia) September 1, 2021
ಮೂಲಗಳ ಪ್ರಕಾರ ರೆಡ್ಮಿ 10 ಪ್ರೈಮ್ ಸ್ಮಾರ್ಟ್‌ಫೋನ್‌ನಲ್ಲಿ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ 88 SoC ಪ್ರೊಸೆಸರ್ ಹೊತ್ತು ಬರಲಿದೆ ಎನ್ನಲಾಗಿದೆ. 6.5 ಇಂಚಿನ ಪೂರ್ಣ ಹೆಚ್ಡಿ ಪ್ಲಸ್ (1,080×2,400 ಪಿಕ್ಸೆಲ್ಗಳು) ಅಡಾಪ್ಟಿವ್ ಸಿಂಕ್ ಡಿಸ್ಪ್ಲೇ, 90Hz ರಿಫ್ರೆಶ್ ರೇಟ್ನಿಂದ ಕೂಡಿದೆ.
ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿರಬಹುದು. ಅಲ್ಟ್ರಾ ವೈಡ್ ಗಾಗಿ ಕಂಪನಿಯು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಿದೆ. ಇನ್ನು ಫ್ರಂಟ್‌ನಲ್ಲಿ ಸೆಲ್ಫಿಗಾಗಿ ಕಂಪನಿಯು 8 ಮೆಗಾ ಪಿಕ್ಸೆಲ್ ಕಲ್ಪಿಸಿರಬಹುದು ಎಂದು ಹೇಳಲಾಗುತ್ತಿದೆ. ಹಾಗೂ ಇದು 6GB RAM ಮತ್ತು ಗರಿಷ್ಠ 128GB ಆನ್‌ಬೋರ್ಡ್ ಸಂಗ್ರಹಣೆಯನ್ನು ಒಳಗೊಂಡಿದೆ ಎಂದು ವರದಿಯಾಗಿದೆ.
ಗ್ರಾಹಕರ ಆಯ್ಕೆಯಲ್ಲಿ ಯಾವಾಗಲೂ ಮುಂದಿರುವ ರೆಡ್ಮಿ 10 ಪ್ರೈಮ್ ಸ್ಮಾರ್ಟ್‌ಫೋನಿನಲ್ಲಿ 18W ವೇಗದ ಚಾರ್ಜಿಂಗ್ ಮತ್ತು 9W ರಿವರ್ಸ್ ವೈರ್ಡ್ ಚಾರ್ಜಿಂಗ್‌ನೊಂದಿಗೆ 6000mAh ಬ್ಯಾಟರಿಯನ್ನು ಸಹ ಅಳವಡಿಸಿದೆ.
ಇನ್ನೂ ರೆಡ್ಮಿ 10 ಸ್ಮಾರ್ಟ್ಫೋನಿನ ನಿಖರ ಬೆಲೆ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ 13000-15000 ರೂ. ಬೆಲೆಗಳಲ್ಲಿ ಈ ಸ್ಮಾರ್ಟ್‌ಫೋನ್ ಗ್ರಾಹಕ ಖರೀದಿಗೆ ಸಿಗಬಹುದು ಎಂದು ವರದಿಗಳು ಹೇಳಿವೆ.
Instagram Down: ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ಇನ್ಸ್ಟಾಗ್ರಾಮ್ ಡೌನ್
ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರ: ಹೊಸ ಅಪ್ಡೇಟ್ನಲ್ಲಿ ಅಚ್ಚರಿಯ ಫೀಚರ್
(Xiaomi Redmi 10 Prime launch tomorrow teased to be lightest 6000mAh battery phone)
Published On - 3:27 pm, Thu, 2 September 21