Xiaomi Robot Vacuum-Mop 2i: ಸ್ಮಾರ್ಟ್ ಆಗಿ ಮನೆ ಕ್ಲೀನ್ ಮಾಡಲು ಶಓಮಿ ರೊಬಾಟ್ ವಾಕ್ಯೂಮ್ ಮಾಪ್

|

Updated on: Apr 17, 2023 | 9:30 AM

ಶಓಮಿ ರೆಡ್ಮಿ ಕಂಪನಿ ಅಭಿವೃದ್ಧಿಪಡಿಸಿರುವ ಸ್ಮಾರ್ಟ್ Robot Vacuum Mop 2 ಭಾರತದಲ್ಲಿ ಬಿಡುಗಡೆಯಾಗಿದೆ. ಆ್ಯಪ್ ಮೂಲಕ ಕಾರ್ಯನಿರ್ವಹಿಸುವ ಈ ರೊಬಾಟ್ ವಾಕ್ಯೂಮ್ ಮಾಪ್, ಮನೆಯ ಮೂಲೆಮೂಲೆಗೂ ತೆರಳಿ ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತದೆ.

ಈಗಿನ ಬ್ಯುಸಿ ದಿನಚರಿಯಲ್ಲಿ ಮನೆ ಕಡೆ ಗಮನ ಕೊಡಲು ಸಮಯವೇ ಸಾಲುತ್ತಿಲ್ಲ ಎಂದು ಹಲವರು ಹೇಳುತ್ತಿರುತ್ತಾರೆ. ಅದರಲ್ಲೂ, ಆಫೀಸ್ ಕೆಲಸಕ್ಕೆ ಹೋಗುವವರು ಇದ್ದರೆ ಮನೆಯನ್ನು ಸ್ವಚ್ಛಗೊಳಿಸುವುದು, ಶುಭ್ರವಾಗಿ ನೀಟಾಗಿ ಇಟ್ಟುಕೊಳ್ಳುವುದು ಒಂದು ಸವಾಲೇ ಸರಿ. ಅದಕ್ಕಾಗಿಯೇ ಹತ್ತು ಹಲವು ಸ್ಮಾರ್ಟ್ ಗ್ಯಾಜೆಟ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಶಓಮಿ ರೆಡ್ಮಿ ಕಂಪನಿ ಅಭಿವೃದ್ಧಿಪಡಿಸಿರುವ ಸ್ಮಾರ್ಟ್ Robot Vacuum Mop 2 ಭಾರತದಲ್ಲಿ ಬಿಡುಗಡೆಯಾಗಿದೆ. ಆ್ಯಪ್ ಮೂಲಕ ಕಾರ್ಯನಿರ್ವಹಿಸುವ ಈ ರೊಬಾಟ್ ವಾಕ್ಯೂಮ್ ಮಾಪ್, ಮನೆಯ ಮೂಲೆಮೂಲೆಗೂ ತೆರಳಿ ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತದೆ. ಸ್ವಯಂಚಾಲಿತ ಮತ್ತು ಲೊಕೇಷನ್ ಆಧಾರಿತ ಕೆಲಸ ಮಾಡುವುದರಿಂದ, ಸುಲಭದಲ್ಲಿ ಮನೆಯಲ್ಲಿನ ಪೀಠೋಪಕರಣ, ವಸ್ತುಗಳನ್ನು ಗುರುತಿಸುತ್ತದೆ. ನೂತನ ರೊಬಾಟ್ ವಾಕ್ಯೂಮ್ ಮಾಪ್ ಕುರಿತು ಹೆಚ್ಚಿನ ಮಾಹಿತಿ ನಿಮಗಾಗಿ. ಸ್ಮಾರ್ಟ್​ ಆಗಿ ಮನೆ ಕ್ಲೀನ್ ಮಾಡುವ ಶಓಮಿ ರೊಬಾಟ್ ವಾಕ್ಯೂಮ್ ಮಾಪ್ 2-ಇನ್-1 ಫಂಕ್ಷನ್ ಹೊಂದಿದೆ. ಶಓಮಿ ರೊಬಾಟ್ ವಾಕ್ಯೂಮ್ ಮಾಪ್ 2i, 450ml ಡಸ್ಟ್ ಕಂಪಾರ್ಟ್​ಮೆಂಟ್ ಹೊಂದಿದೆ. ಶಓಮಿ ರೊಬಾಟ್ ವಾಕ್ಯೂಮ್ ಮಾಪ್ 1200 ಚದರಡಿ ಮತ್ತು 100 ನಿಮಿಷಗಳ ರನ್ ಟೈಮ್ ಬ್ಯಾಟರಿ ಹೊಂದಿದ್ದು, ರಿಮೋಟ್ ಕಂಟ್ರೋಲ್ ಬೆಂಬಲ ಹೊಂದಿದೆ. ಅಲ್ಲದೆ, ರೊಬಾಟ್ ವಾಕ್ಯೂಮ್ ಮಾಪ್
ಗೂಗಲ್ ಅಸಿಸ್ಟೆಂಟ್ ಮತ್ತು ಅಮೆಜಾನ್ ಅಲೆಕ್ಸಾ ಬೆಂಬಲದಲ್ಲಿ ಕಾರ್ಯನಿರ್ವಹಿಸುತ್ತದೆ. ಎಂಐ ಹೋಮ್ ಆ್ಯಪ್ ಮೂಲಕ ಕಾರ್ಯನಿರ್ವಹಿಸುವ ರೊಬಾಟ್ ವಾಕ್ಯೂಮ್ ಮಾಪ್, ಶಓಮಿ ಫ್ಯಾನ್ ಫೆಸ್ಟಿವಲ್​ನಲ್ಲಿ ₹15,999 ದರಕ್ಕೆ ಲಭ್ಯ.

Follow us on