ಗೂಗಲ್ ಹೊಸ ಅಪ್ಡೇಟ್ ಒಂದನ್ನು ಪರಿಚಯಿಸಿದೆ. ಇದು ನಮ್ಮ ವೈಯಕ್ತಿಕ ಮಾಹಿತಿ ಅಥವಾ ಫೋಟೋಗಳನ್ನು ಸರ್ಜ್ ಇಂಜಿನ್ನಿಂದ ತೆಗೆದು ಹಾಕುತ್ತದೆ. ಗೂಗಲ್ನಲ್ಲಿ ನಾವು ಅನೇಕ ವಿಚಾರಗಳನ್ನು ಹುಡುಕಬಹುದು. ಇದನ್ನು ಕೆಲವು ಗೂಗಲ್ ಕಳ್ಳರು ದುರ್ಬಳಕೆ ಮಾಡಬಹುದು. ಅದಕ್ಕಾಗಿ ಗೂಗಲ್ ಹೊಸ ಅಪ್ಡೇಟ್ ನೀಡಿದೆ. ನಮ್ಮ ವೈಯಕ್ತಿಕ ಫೋಟೋಗಳನ್ನು ಬಳಸಿಕೊಂಡು ತಮ್ಮ ವೆಬ್ ಸೈಟ್ಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಗೂಗಲ್ ಹೊಸ ಕ್ರಮವನ್ನು ತಂದಿದೆ.
ಗೂಗಲ್ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಫೋಟೋಗಳನ್ನು ತೆಗೆದು ಹಾಕಲು ಗೂಗಲ್ ಒಂದು ಆಯ್ಕೆಯನ್ನು ನೀಡಿರುತ್ತದೆ. ಈ ಮೂಲಕ ಗೂಗಲ್ ನಿಮ್ಮ ವೈಯಕ್ತಿಕ ಫೋಟೋಗಳನ್ನು ಹಾಗೂ ಮಾಹಿತಿಗಳನ್ನು ಇತರರಿಗೆ ಉಪಯೋಗವಾಗದಂತೆ ನೋಡಿಕೊಳ್ಳುತ್ತದೆ.
ಇದು ನಿಮ್ಮ ವೈಯಕ್ತಿಕ ಫೋಟೋ, ನಿಮ್ಮ ಫೋಟೋಗಳನ್ನು ಅಶ್ಲೀಲ ಫೋಟೋಗಳ ಜತೆಗೆ ಎಡಿಟ್ ಮಾಡುವುದು, ಲೈಂಗಿಕ ಸೈಟ್ಗಳಿಗೆ ನಿಮ್ಮ ಫೋಟೋಗಳನ್ನು ಬಳಸಿದ್ದರೆ ಅದನ್ನು ತೆಗೆದು ಹಾಕಲು ಅವಕಾಶ ನೀಡಿದೆ. ಅದನ್ನು ತೆಗೆಯುವುದು ಹೇಗೆ ಇಲ್ಲಿದೆ ನೋಡಿ.
ಹಂತ 1: https://support.google.com/websearch/contact/content_removal_form?sjid=1 ಗೆ ಹೋಗಿ
ಹಂತ 2: ಈ ಪುಟದಲ್ಲಿ, ‘Google ಹುಡುಕಾಟದಿಂದ ವೈಯಕ್ತಿಕ ವಿಷಯವನ್ನು ತೆಗೆದುಹಾಕಲು ನೀವು ಏಕೆ ವಿನಂತಿಸುತ್ತಿರುವಿರಿ? ಎಂಬ ಕಾರಣ ನೀಡಿ. ಅಲ್ಲಿ ನಿಮ್ಮ ವಿಳಾಸ ಹಾಕಿ
ಹಂತ 3: ‘ಮುಂದೆ’ ಕ್ಲಿಕ್ ಮಾಡಿ.
ಹಂತ 4: ನೀವು ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕುವುದನ್ನು ಆಯ್ಕೆ ಮಾಡಿದ ನಂತರ ಮುಂದಿನ ಪುಟದಲ್ಲಿ ‘Google ಹುಡುಕಾಟ ಫಲಿತಾಂಶಗಳಿಂದ ನೀವು ತೆಗೆದುಹಾಕಲು ಬಯಸುವ ವೈಯಕ್ತಿಕ ಮಾಹಿತಿಯನ್ನು ಆಯ್ಕೆಮಾಡಿ
ಇದನ್ನೂ ಓದಿ: ಗೂಗಲ್ ವಿರುದ್ಧ ಐತಿಹಾಸಿಕ ತೀರ್ಪು ನೀಡಿದ ಭಾರತ ಮೂಲದ ಅಮೆರಿಕನ್ ನ್ಯಾಯಮೂರ್ತಿ ಅಮಿತ್ ಮೆಹ್ತಾ
ಹಂತ 5: ಹುಡುಕಾಟ ಪದ, ಪುಟ URL, Google ಹುಡುಕಾಟ ಫಲಿತಾಂಶ URL ಮತ್ತು ಇತರ ಸಂಬಂಧಿತ ಮಾಹಿತಿಯಂತಹ ಅಗತ್ಯವಿರುವ ಎಲ್ಲಾ ಡೇಟಾವನ್ನು ನಮೂದಿಸಿ.
ಹಂತ 6: ಮುಂದಿನ ಪುಟದಲ್ಲಿ, ವೈಯಕ್ತಿಕ ವಿವರಗಳಿಗಾಗಿ ನಮೂದಿ ಇಲ್ಲಿ ಕ್ಲಿಕ್ ಮಾಡಿ.
ಈ ಕ್ರಮವನ್ನು ಪಾಲಿಸಿದ ನಂತರ ನಿಮ್ಮ ಫೋಟೋ, ಮತ್ತು ವೈಯಕ್ತಿಕ ಮಾಹಿತಿಗಳನ್ನು ತೆಗೆದು ಹಾಕಬಹುದು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Wed, 7 August 24