ಯೂಟ್ಯೂಬ್ ಹೋಮ್ ಪೇಜ್ ಬ್ಲಾಂಕ್ ಆಗಿ ಕಾಣಿಸುತ್ತಾ?: ಹಾಗಿದ್ರೆ ಸೆಟ್ಟಿಂಗ್​ನಲ್ಲಿ ಬದಲಾವಣೆ ಮಾಡಿ

|

Updated on: Aug 10, 2023 | 11:41 AM

YouTube: ಹೊಸ ವೀಕ್ಷಕರ ಅನುಭವ ಎಂಬ ಟ್ಯಾಗ್​ಲೈನ್ ಅಡಿಯಲ್ಲಿ ಯೂಟ್ಯೂಬ್ ಈ ನೂತನ ಆಯ್ಕೆಯನ್ನು ತರಲು ಮುಂದಾಗಿದೆ. ಕೆಲವೇ ದಿನಗಳಲ್ಲಿ ಈ ಆಯ್ಕೆ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಗೂಗಲ್ ಬ್ಲಾಗ್ ಪೋಸ್ಟ್​ನಲ್ಲಿ ಹೇಳಿದೆ.

ಯೂಟ್ಯೂಬ್ ಹೋಮ್ ಪೇಜ್ ಬ್ಲಾಂಕ್ ಆಗಿ ಕಾಣಿಸುತ್ತಾ?: ಹಾಗಿದ್ರೆ ಸೆಟ್ಟಿಂಗ್​ನಲ್ಲಿ ಬದಲಾವಣೆ ಮಾಡಿ
ಯೂಟ್ಯೂಬ್
Follow us on

ಸ್ಟ್ರೀಮಿಂಗ್ ದೈತ್ಯ ಯೂಟ್ಯೂಬ್ (YouTube) ತನ್ನ ಆ್ಯಪ್​ನಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಇನ್ನುಂದೆ ಬಳಕೆದಾರರ ವಾಚ್ ಹಿಸ್ಟರಿ ಆಫ್ ಇದ್ದರೆ ಅವರಿಗೆ ಹೋಮ್ ಪೇಜ್​ನಲ್ಲಿ ಯಾವುದೇ ರೀತಿಯ ಸಜೆಸ್ಟ್ ವಿಡಿಯೋ ಕಾಣಿಸುವುದಿಲ್ಲ. ನೀವು ಸಬ್​ಸ್ಕ್ರೈಬ್ (Subscribe) ಮಾಡಿದವರ ವಿಡಿಯೋ (Video) ಕೂಡ ಕಾಣಿವುದಿಲ್ಲ. ಬದಲಾಗಿ ಪೇಜ್ ಖಾಲಿ ಆಗಿರುತ್ತದಂತೆ. ನಿಮಗೆ ಯಾವುದಾದರು ವಿಡಿಯೋ ನೋಡಬೇಕು ಎಂದಲ್ಲಿ ಸರ್ಚ್ ಬಾರ್​ನಲ್ಲಿ ಹುಡುಕಬೇಕು. ಅಥವಾ ನೀವು ಸಬ್​ಸ್ಕ್ರೈಬ್ ಮಾಡಿದವರ ಚಾನೆಲ್​ಗೆ ಭೇಟಿ ನೀಡಿ ಅಲ್ಲಿ ಹುಡುಕಬೇಕು.

‘ಹೊಸ ವೀಕ್ಷಕರ ಅನುಭವ’ ಎಂಬ ಟ್ಯಾಗ್​ಲೈನ್ ಅಡಿಯಲ್ಲಿ ಯೂಟ್ಯೂಬ್ ಈ ನೂತನ ಆಯ್ಕೆಯನ್ನು ತರಲು ಮುಂದಾಗಿದೆ. ಕೆಲವೇ ದಿನಗಳಲ್ಲಿ ಈ ಆಯ್ಕೆ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಗೂಗಲ್ ಬ್ಲಾಗ್ ಪೋಸ್ಟ್​ನಲ್ಲಿ ಹೇಳಿದೆ. “ವಿಡಿಯೋ ರೆಕಮಂಡೇಶನ್ ಯೂಟ್ಯೂಬ್​ನ ಹೊಸ ವೈಶಿಷ್ಟ್ಯವಾಗಿದ್ದು ಇದು ವೀವ್ ಹಿಸ್ಟರ್ ಮೇಲೆ ಅವಲಂಬಿತವಾಗಿದೆ. ನಾವು ಈ ಹೊಸ ಅನುಭವವನ್ನು ಬಳಕೆದಾರರಿಗೆ ನೀಡುತ್ತಿದ್ದೇವೆ. ಸಜೆಸ್ಟ್ ವಿಡಿಯೋವನ್ನು ಇಷ್ಟಪಡದವರು, ಸರ್ಚ್ ಮಾಡಿ ಹುಡುಕುವವರಿಗೆ ಇದು ಹೆಚ್ಚು ಅನುಕೂಲವಾಗಿದೆ” ಎಂದು ಗೂಗಲ್ ಹೇಳಿದೆ.

Amazon Great Freedom Festival: ಅಮೆಜಾನ್ ಸೇಲ್​ನಲ್ಲಿ ದೊರೆಯುತ್ತಿದೆ ವಿಶೇಷ ಆಫರ್

ಇದನ್ನೂ ಓದಿ
Fever Detector App: ಜ್ವರ ಬಂದರೆ ಸ್ಮಾರ್ಟ್‌ಫೋನ್ ಮೂಲಕವೇ ಪರೀಕ್ಷೆ ಮಾಡಲು ಹೊಸ ಅಪ್ಲಿಕೇಶನ್
ಅತಿ ಕಡಿಮೆ ಬೆಲೆಯ ಬೆಸ್ಟ್ 5G ಫೋನ್ ಪೋಕೋ M6 ಪ್ರೊ ಮಾರಾಟಕ್ಕೆ ಕ್ಷಣಗಣನೆ: ಭರ್ಜರಿ ಸೇಲ್ ಖಚಿತ
ಭಾರತದಲ್ಲಿ ಒಪ್ಪೋ A58 ಸ್ಮಾರ್ಟ್​ಫೋನ್ ಬಿಡುಗಡೆ: ಇದು ಬಜೆಟ್ ಬೆಲೆಯ ಬಂಪರ್ ಫೋನ್
Flipkart Big Saving Days: ವಿಶೇಷ ಆಫರ್ ಸೇಲ್ ನಡೆಸುತ್ತಿದೆ ಫ್ಲಿಪ್​ಕಾರ್ಟ್, ಇಲ್ಲಿದೆ ಡೀಟೇಲ್ಸ್!

ಈ ಹೊಸ ಅನುಭವ ಮುಂಬರುವ ತಿಂಗಳುಗಳಲ್ಲಿ ಹಂತ ಹಂತಗಳಲ್ಲಿ ಬಿಡುಗಡೆ ಆಗುತ್ತದೆ. ಯೂಟ್ಯೂಬ್ ಬಳಕೆದಾರರು ತಮ್ಮ ವೀವ್ ಹಿಸ್ಟರಿ ಸೆಟ್ಟಿಂಗ್‌ಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ. ಯೂಟ್ಯೂಬ್​ನಲ್ಲಿ ವೀಕ್ಷಣೆ ಇತಿಹಾಸವನ್ನು ಸಕ್ರಿಯಗೊಳಿಸಲು, ಜನರು myactivity.google.com ಗೆ ಭೇಟಿ ನೀಡಬೇಕು. ಇಲ್ಲಿ, ಯೂಟ್ಯೂಬ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿ “ಆನ್” ಮೋಡ್‌ಗೆ ಬದಲಾಯಿಸಬೇಕು.

ಭಾರತದಲ್ಲಿ 50 ಕೋಟಿ ದಾಟಿದ ಯೂಟ್ಯೂಬ್ ಬಳಕೆದಾರರ ಸಂಖ್ಯೆ:

ಭಾರತದಲ್ಲಿ ಯೂಟ್ಯೂಬ್ ಬಳಕೆದಾರರ ಸಂಖ್ಯೆ ಇದೀಗ 50 ಕೋಟಿ ದಾಟಿದೆ. ಯೂಟ್ಯೂಬ್​ಗೆ ಅತಿಹೆಚ್ಚು ಬಳಕೆದಾರರು ಇರುವ ದೇಶ ಇದೀಗ ಭಾರತ ಆಗಿದೆ. ಯೂಟ್ಯೂಬ್ ಬಳಕೆದಾರರ ಸಂಖ್ಯೆ 2017ರಲ್ಲಿ 12.2 ಕೊಟಿಯಷ್ಟಿತ್ತು. 2022ರಲ್ಲಿ ಇದರ ಸಂಖ್ಯೆ 56.7 ಕೋಟಿ ಆಗಿದೆ. ಐದು ವರ್ಷದಲ್ಲಿ 44 ಕೋಟಿಗೂ ಹೆಚ್ಚು ಮಂದಿ ಹೊಸ ಯೂಟ್ಯೂಬ್ ಬಳಕೆದಾರರು ಸೃಷ್ಟಿಯಾಗಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:38 am, Thu, 10 August 23