Aishwarya Rai Bachchan
ಐಶ್ವರ್ಯ ರೈ ಬಚ್ಚನ್ 1973ರ ನವೆಂಬರ್ 1ರಂದು ಭಾರತದ ಮಂಗಳೂರಿನಲ್ಲಿ ಜನಿಸಿದರು. ಅವರು ಪ್ರಸಿದ್ಧ ನಟಿ, ರೂಪದರ್ಶಿ ಮತ್ತು ಮಾಜಿ ವಿಶ್ವ ಸುಂದರಿ. ಅವರು ತಂದೆ ಕೃಷ್ಣರಾಜ್ ರೈ ಸಮುದ್ರ ಜೀವಶಾಸ್ತ್ರಜ್ಞರಾಗಿದ್ದರೆ, ತಾಯಿ ವೃಂದಾ ರೈ ಗೃಹಿಣಿಯಾಗಿದ್ದರು. ಐಶ್ವರ್ಯಾ ಅವರು ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟರು. ಅವರು 1994ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದ ನಂತರ ಜಾಗತಿಕ ಮನ್ನಣೆಯನ್ನು ಗಳಿಸಿದರು. ಐಶ್ವರ್ಯ ಅವರು ‘ಔರ್ ಪ್ಯಾರ್ ಹೋಗಯಾ’ (1997) ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ‘ಹಮ್ ದಿಲ್ ದೇ ಚುಕೆ ಸನಮ್’ (1999) ಅವರಿಗೆ ಜನಪ್ರಿಯತೆ ನೀಡಿತು. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಐಶ್ವರ್ಯಾ ಅವರು ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಆರಾಧ್ಯಾ ಹೆಸರಿನ ಮಗಳಿದ್ದಾರೆ. ಐಶ್ವರ್ಯಾ ಭಾರತೀಯ ಮತ್ತು ಅಂತರರಾಷ್ಟ್ರೀಯ ಚಿತ್ರರಂಗದಲ್ಲಿ ಪ್ರಮುಖ ವ್ಯಕ್ತಿಯಾಗಿ ಗಮನ ಸೆಳೆದಿದ್ದಾರೆ.
ಪ್ರಧಾನಿ ಮೋದಿ ಕಾಲುಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ
ಪುಟ್ಟಪರ್ಥಿಯಲ್ಲಿ ನಡೆದ ಸತ್ಯ ಸಾಯಿ ಬಾಬಾ ಜನ್ಮದಿನಾಚರಣೆಯಲ್ಲಿ ಐಶ್ವರ್ಯಾ ರೈ ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ವಿಡಿಯೋ ಸಖತ್ ವೈರಲ್ ಆಗಿದೆ. ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಮಾನವೀಯತೆಯ ಬಗ್ಗೆ ಮಾತನಾಡಿದ ಐಶ್ವರ್ಯಾ, ಮೋದಿ ಉಪಸ್ಥಿತಿಗೆ ಧನ್ಯವಾದ ಅರ್ಪಿಸಿ, ಸಾಯಿ ಬಾಬಾ ಸಂದೇಶ ಸ್ಮರಿಸಿದರು.
- Rajesh Duggumane
- Updated on: Nov 19, 2025
- 3:12 pm