ಬೆಳಕು, ಬಣ್ಣ ಯಾರ ಮನಸ್ಸನ್ನು ಅರಳಿಸದೇ ಇರವು? ಅದರಲ್ಲೂ ಎಳೆಮಕ್ಕಳ ಹರ್ಷ ಹೇಳತೀರದು. ಒಂದು ಕ್ಷಣದಲ್ಲೇ ಎಂಥ ಮೂಡ್ ಅನ್ನು ಬದಲಾಯಿಸುವಂಥ ಶಕ್ತಿ ಬೆಳಕು ಮತ್ತು ಬಣ್ಣಕ್ಕಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿರುವ ವಿಡಿಯೋ ನೋಡಿ. ಹನ್ನೊಂದು ತಿಂಗಳ ಹೆಣ್ಣುಮಗು ಪಟಾಕಿಗಳ ಮೆರಗನ್ನು ನೋಡಲು ತನ್ನ ಪೋಷಕರೊಂದಿಗೆ ಬಂದಿದೆ. ಮೊದಲ ಸಲ ಈ ದೃಶ್ಯವನ್ನು ನೋಡಲು ಬಂದಿರುವುದರಿಂದ ಕಿವಿಗಳಿಗೆ ಹಾನಿಯಾಗದಿರಲೆಂದು ಮಗುವಿನ ತಂದೆ ಗಟ್ಟಿಯಾಗಿ ಕಿವಿಗಳನ್ನು ಮುಚ್ಚಿಹಿಡಿದಿದ್ದಾರೆ. ಆಕಾಶಕ್ಕೆ ಮುಖಮಾಡಿ ಅಲ್ಲಿ ಅರಳುವ ಬಣ್ಣ ಬೆಳಕಿನ ಚಿತ್ತಾರವನ್ನು ಮಗು ಅಚ್ಚರಿಯಿಂದ ನೋಡುತ್ತಿದೆ. ಅದರ ಕಂಗಳಲ್ಲಿ ವ್ಯಕ್ತವಾಗುತ್ತಿರುವ ಭಾವವನ್ನು ಗಮನಿಸುವುದೇ ಅಮೂಲ್ಯ ಮತ್ತು ಅಪೂರ್ವ.
ಈ ವಿಡಿಯೋವನ್ನು ಲೋ ಬೀಸ್ಟೊನ್ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಇದು 3 ಮಿಲಿಯನ್ ವೀಕ್ಷಣೆಗೆ ಒಳಪಟ್ಟಿದೆ. ಸುಮಾರು 2.4 ಲಕ್ಷ ಲೈಕ್ಸ್, 952 ಪ್ರತಿಕ್ರಿಯೆಗಳನ್ನು ಹೊಂದಿದೆ.
ಮತ್ತಷ್ಟು ಇಂಥ ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:04 pm, Fri, 12 August 22