Viral: ‘ಅಯ್ಯೋ, ಮಳೆ ಇದೆ ಬಾ ಇಲ್ಲಿ ಕೊಡೆಯೊಳಗೆ’
Dog Love : ಮಳೆ ಬಂದರೆ ಮೊದಲು ಎಲ್ಲಿ ನಿಲ್ಲಲು ಆಶ್ರಯ ಸಿಕ್ಕೀತು ಎಂದು ಜಾಗ ಹುಡುಕುತ್ತೇವೆ, ಅದಕ್ಕೆ ನಾವು ‘ದೊಡ್ಡವರು’. ಆದರೆ ಮಕ್ಕಳು? ಈ ವಿಡಿಯೋ ನೋಡಿ.
Viral : ಮಕ್ಕಳ ಮನಸೇ ಹಾಗೆ. ಪ್ರೀತಿ, ಕಾಳಜಿ, ಅಂತಃಕರಣ, ಬೆರಗು, ಮುಗ್ಧತೆ ಬಿಟ್ಟರೆ ಬೇರೇನೂ ಅಲ್ಲಿನ್ನೂ ಮೊಳೆತಿರುವುದಿಲ್ಲ. ತಮಗನಿಸಿದ್ದನ್ನು ಮಾಡಲು ಯಾರ ಅನುಮತಿಯನ್ನೂ ಕೇಳುವುದಿಲ್ಲ. ಈಗಿಲ್ಲಿ ನೋಡಿ ರಾತ್ರಿ ಮಳೆ ಸುರಿಯುತ್ತಿದೆ. ರೇನ್ಕೋಟ್ ಹಾಕಿಕೊಂಡ ಈ ಪುಟ್ಟ ಹುಡುಗಿಯೊಬ್ಬಳು ನಾಯಿಯೊಂದಕ್ಕೆ ತನ್ನ ಕೊಡೆ ಹಿಡಿದು ಮಳೆಯಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದಾಳೆ. ಹೃದಯಸ್ಪರ್ಶಿಯಾದ ಈ ವಿಡಿಯೋ 6.2 ಮಿಲಿಯನ್ ನೆಟ್ಟಿಗರ ಮನಸ್ಸನ್ನು ಕದ್ದಿದೆ. 4.3ಸಾವಿರ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡವರು ತನ್ಸು ಎಗೆನ್ ಎಂಬ ಟ್ವಿಟರ್ ಖಾತೆದಾರರು. ಆಗಾಗ ಇವರು ಇಂಥ ಅಪರೂಪದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವುದನ್ನು ಗಮನಿಸಿರಬಹುದು.
Sweetest thing I have seen today?
ಇದನ್ನೂ ಓದಿ— Tansu YEĞEN (@TansuYegen) August 10, 2022
‘ಹಣದ ವ್ಯಾಮೋಹ, ದುರಾಸೆ, ದ್ವೇಷ, ಸಾಮಾಜಿಕ ಕಟ್ಟಳೆಗಳು, ಗಡಿಗಳು ಇಲ್ಲದಲ್ಲಿ ಹೇಗೆ ಪ್ರೀತಿ ಮತ್ತು ಸ್ವಾತಂತ್ರ್ಯ ಅರಳುತ್ತದೆ ನೋಡಿ, ಜಗತ್ತು ಇರಬೇಕಾದದ್ದು ಹೀಗೆ’ ಆನಂದ ಎನ್ನುವ ಟ್ವಿಟರ್ ಖಾತೆದಾರರು ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದೈನಂದಿನ ಜಂಜಡಗಳಲ್ಲಿ ಮತ್ತು ಸ್ವಕೇಂದ್ರಿತ ಮನಸ್ಥಿತಿಗಳಲ್ಲಿ ಕಳೆದುಹೋಗುವವರನ್ನು ಹಿಡಿದು ನಿಲ್ಲಿಸಿ ಕ್ಷಣಮಾತ್ರವಾದರೂ ಪ್ರೀತಿ, ಮಾನವೀಯತೆಯ ಬಗ್ಗೆ ಯೋಚಿಸುವಂತೆ ಮಾಡುತ್ತವೆ ಮಕ್ಕಳ, ಪ್ರಾಣಿಗಳ ಇಂಥ ವಿಡಿಯೋಗಳು.
ಮತ್ತಷ್ಟು ಇಂಥ ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ