Viral Video : ‘ಅಮ್ಮಾ ನಂಗೆ ಈ ಸ್ಮಾರ್ಟ್ಫೋನ್ ಬೇಕೇಬೇಕು’
Monkey : ಹಟತೊಟ್ಟು ಕುಳಿತಿರುವ ಈ ಕೋತಿಮರಿಗೆ, ಅಮ್ಮಕೋತಿ ಸ್ಮಾರ್ಟ್ಫೋನ್ ಕೊಡಿಸುವಲ್ಲಿ ಸಫಲವಾಗುತ್ತಾ? ನೋಡಿ ವಿಡಿಯೋ...
Viral : ಸಾಕು ಬಾ ಏನು ಮಾಡ್ತೀಯಾ ಅದನ್ನು ತಗೊಂಡು. ಕಡ್ಲೆಕಾಯಿ ತಿನ್ನು ಬಾ ಇಲ್ಲಿ… ಅಂತ ಅಮ್ಮಕೋತಿ ಮಗುವನ್ನು ಎಳೆಯುತ್ತಲೇ ಇದೆ. ಆದರೆ ತನ್ನ ಫೋಟೋ ತೆಗೆಯಲು ಬಂದವರ ಸ್ಮಾರ್ಟ್ ಫೋನ್ ತನಗೆ ಬೇಕೆಂದು ಗಂಟುಬಿದ್ದಿದೆ ಮರಿಕೋತಿ. ಅಮ್ಮಕೋತಿ ಅದೆಷ್ಟು ಸಲ ಅದನ್ನು ಹಿಡಿದೆಳೆದರೂ ಅದು ಮತ್ತೆ ಮತ್ತೆ ಸ್ಮಾರ್ಟ್ಫೋನ್ ತನಗೆ ಬೇಕೇಬೇಕೆಂದು ಹಟ ಮಾಡುತ್ತಿದೆ. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಂಸಾಂತಾ ನಂದಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ವಿಡಿಯೋ ನೋಡಿ,
Young generation is mad with smart phones ☺️ pic.twitter.com/hFg8SH9VyZ
— Susanta Nanda IFS (@susantananda3) August 10, 2022
ಹೊಸ ಪೀಳಿಗೆ ಇದೆಲ್ಲವನ್ನೂ ತಿಳಿಯಬೇಕಾದದ್ದು ಅವಶ್ಯವೇ! ಎಂದು ಒಬ್ಬರು ಪ್ರತಿಕ್ರಿಯಿಸಿದ್ಧಾರೆ. ಅನೇಕರು ಅಚ್ಚರಿ ಮತ್ತು ಖುಷಿ ವ್ಯಕ್ತಪಡಿಸುತ್ತ ಕೋತಿಯೊಂದಿಗಿನ ಒಡನಾಟದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಮಕ್ಕಳಿಂದ ಈ ಚಟ ಬಿಡಿಸುವುದಕ್ಕೆ ವಿಫಲರಾದ ನಾವುಗಳು ಇನ್ನು ಈ ಕೋತಿಗಳಿಗೆ…
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:36 pm, Thu, 11 August 22