ಮುಂಬೈ: ಕಾಡಿನ ಮಧ್ಯೆ ಇರುವ ರಸ್ತೆಗಳನ್ನು ದಾಟಲು ಹೋಗಿ ಕಾಡು ಪ್ರಾಣಿಗಳು ಸಾಯುವ ಘಟನೆ ಬಹಳಷ್ಟು ವರದಿಯಾಗುತ್ತವೆ. ಜಿಂಕೆಗಳು ನಾಡಿಗೆ ಬಂದು ನಾಯಿಗಳ ಬಾಯಿಗೆ ಆಹಾರವಾಗುವುದೂ ಇದೆ. ಆದರೆ, ಸೇತುವೆಯಿಂದ ಕೆಳಗೆ ಹಾರಿ 12 ಕೃಷ್ಣಮೃಗಗಳು (Blackbucks) ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯದಲ್ಲಿ ಸಂಭವಿಸಿದೆ.
ಸೋಲಾಪುರ್ ಜಿಲ್ಲೆಯಲ್ಲಿ ಮಾಂದರುಪ್ ಬೈಪಾಸ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಕೇಗಾಂವದಿಂದ ಬಿಜಾಪುರ ರಸ್ತೆಗೆ ಹೋಗುವ ಈ ಹೆದ್ದಾರಿಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಹಿಂಡಾಗಿ ಬರುತ್ತಿದ್ದ ಕೃಷ್ಣಮೃಗಗಳು ರಸ್ತೆ ದಾಟುವ ಪ್ರಯತ್ನದಲ್ಲಿ ಕೃಷ್ಣ ಮೇಲ್ಸೇತುವೆಯಿಂದ 30 ಅಡಿ ಕೆಳಗೆ ಬಿದ್ದಿವೆ. ಹೀಗೆ ಬಿದ್ದ ಎಲ್ಲಾ 15 ಕೃಷ್ಣಮೃಗಗಳು ಗಂಭೀರವಾಗಿ ಗಾಯಗೊಂಡಿವೆ. ಇವುಗಳ ಪೈಕಿ 12 ಪ್ರಾಣಿಗಳು ಸತ್ತುಹೋಗಿವೆ.
ಸೋಲಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಈ ಪ್ರಾಣಿಗಳ ಕಳೆಬರವನ್ನು ಹೆದ್ದಾರಿಯಿಂದ ತೆರವುಗೊಳಿಸಿದ್ದಾರೆ. ದುರ್ಘಟನೆ ನಡೆದ ಸ್ಥಳದಲ್ಲಿ ರಸ್ತೆಯನ್ನು ಗುಡ್ಡ ಕತ್ತರಿಸಿ ನಿರ್ಮಿಸಿದ್ದು ನಾಲ್ಕು ತಿಂಗಳ ಹಿಂದೆ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಈ ಸ್ಥಳದ ಸುತ್ತ ಹಸಿರು ಪ್ರದೇಶಗಳಿದ್ದು ಇಲ್ಲಿ ಜಿಂಕೆ ಇತ್ಯಾದಿ ವನ್ಯಜೀವಿಗಳು ಆಹಾರಕ್ಕಾಗಿ ತಿರುಗಾಡುತ್ತಿರುತ್ತವೆ. ಇವುಗಳ ಸಹಜ ಪರಿಸರದಲ್ಲಿ ರಸ್ತೆ ನಿರ್ಮಾಣ ಆಗಿರುವುದು ಈ ಪ್ರಾಣಿಗಳಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಈ ಹಿಂದೆಯೂ ಹೀಗೆ ರಸ್ತೆ ಸೇತುವೆಯಿಂದ ಬಿದ್ದು ಪ್ರಾಣಿಗಳು ಸಾವನ್ನಪ್ಪಿದ ಘಟನೆ ವರದಿಯಾಗಿದ್ದಿದೆ.
12 blackbucks died on newly constructed Kegaon to Bijapur road highway in Solapur dist. The blackbucks fell 30 feet while crossing the newly constructed underpass bridge.@ben_ifs @ranjeetnature @tweetsvirat @RoadkillsIndia @AndreaPhillott @shardulbajikar @bahardutt @singh_sonu pic.twitter.com/5nYEQB5Oxh
— Akshay Mandavkar? (@akshay_journo) January 28, 2023
ಕೃಷ್ಣಮೃಗ ಮತ್ತು ಜಿಂಕೆ
ಕೃಷ್ಣಮೃಗ ಎಂದರೆ ಸಾಮಾನ್ಯವಾಗಿ ಸಲ್ಮಾನ್ ಖಾನ್ ಬೇಟೆ ಪ್ರಕರಣ ನೆನಪಿಗೆ ಬರುತ್ತದೆ. ಕೃಷ್ಣಮೃಗ ಮತ್ತು ಜಿಂಕೆ ಎರಡೂ ಒಂದೇ. ಕೃಷ್ಣಮೃಗ ಗಂಡು ಜಿಂಕೆ ಎಂಬುದಷ್ಟೇ ವ್ಯತ್ಯಾಸ. ಗಂಡು ಜಿಂಕೆಗೆ ಕೋಡುಗಳಿರುತ್ತವೆ. ಜಿಂಕೆಗೆ ಕೋಡು ಇರುವುದಿಲ್ಲ.
Published On - 4:05 pm, Sun, 29 January 23