ಮುಟ್ಟಿನ ನೋವು ತಡೆಯಲಾರದೆ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುತ್ತಿದ್ದ 16ರ ಹರೆಯದ ಬಾಲಕಿ ಸಾವು

|

Updated on: Dec 20, 2023 | 11:32 AM

ಋತುಸ್ರಾವದ ಸಮಯದಲ್ಲಿ ಹೊಟ್ಟೆಯ ನೋವು, ಸೆಳೆತವನ್ನು ತಡೆಯಲಾರದೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಅಭ್ಯಾಸ ನಿಮಗಿದೆಯಾ? ಈ ನೋವು ನಿವಾರಕಗಳು ತಕ್ಷಣಕ್ಕೆ ನೋವಿನಿಂದ ಮುಕ್ತಿ ನೀಡಿದರೂ ಸಹ ಕಾಲ ಕ್ರಮೇಣ ನಿಮ್ಮ ಪ್ರಾಣಕ್ಕೆ ಕಂಟಕವಾಗಬಹುದು. ಅಂತದ್ದೇ ಘಟನೆಯೊಂದು ಇದೀಗಾ ಭಾರೀ ಸುದ್ದಿಯಲ್ಲಿದೆ.

ಮುಟ್ಟಿನ ನೋವು ತಡೆಯಲಾರದೆ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುತ್ತಿದ್ದ 16ರ ಹರೆಯದ ಬಾಲಕಿ ಸಾವು
Layla
Follow us on

ವಿಪರೀತ ಮುಟ್ಟಿನ ನೋವಿನಿಂದ ಬಳಲುತ್ತಿದ್ದ ಲೈಲಾ(16) ತನ್ನ ಸ್ನೇಹಿತರ ಸಲಹೆಯ ಮೇರೆಗೆ ಪ್ರತೀ ತಿಂಗಳು ನೋವು ನಿವಾರಕ ಮಾತ್ರೆ ಸೇವಿಸುತ್ತಿದ್ದ ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ದಾರುಣ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಸ್ನೇಹಿತರ ಸಲಹೆಯಂತೆ ನವೆಂಬರ್ 25ರಂದು ಋತು ಸ್ರಾವದ ಮೊದಲ ದಿನದಿಂದ ಲೈಲಾ ಮಾತ್ರೆ ಸೇವಿಸಲು ಪ್ರಾರಂಭಿಸಿದ್ದಾಳೆ. ಆದರೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ದಿನಗಳಲ್ಲಿ ಮಹಿಳೆಯರಲ್ಲಿ ನೋವು ಕಡಿಮೆಯಾಗುತ್ತದೆ. ಆದರೆ ಈಕೆಯ ಮುಟ್ಟಿನ ನೋವು ಉಲ್ಬಣಗೊಂಡಿದೆ. ಪರಿಣಾಮ ಡಿಸೆಂಬರ್​​​ 05ರ ವೇಳೆಗೆ ಲೈಲಾ ವಿಪರೀತ ವಾಂತಿ ಭೇದಿ ಹಾಗೂ ತಲೆನೋವಿನಿಂದ ಬಳಲುತ್ತಿರುವುದನ್ನು ಕಂಡು ಪೋಷಕರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಲಕಿಯ ತೀವ್ರ ಒದ್ದಾಟವನ್ನು ಕಂಡು ಸಿಟಿ ಸ್ಕ್ಯಾನ್ ಮಾಡಿಸಿದಾಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದೆ. ತಕ್ಷಣ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ, ಮೆದುಳು ನಿಷ್ಕ್ರಿಯಗೊಂಡು  ಡಿಸೆಂಬರ್ 13 ರಂದು ಲೈಲಾ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.

ಇದನ್ನೂ ಓದಿ: ರೈಲಿನ ಕಿಟಕಿ ಬದಿ ಕುಳಿತಿದ್ದ ಯುವಕ ಚಳಿಯಿಂದ ಸಾವು; 300 ಕಿ.ಮಿ ಪ್ರಯಾಣಿಸುವವರೆಗೂ ಯಾರಿಗೂ ಗೊತ್ತೇಯಿಲ್ಲ

ಬಾಲಕಿಯ ಸಾವಿನ ಸುದ್ದಿ ಕುಟುಂಬಕ್ಕೆ ಅಘಾತ ಉಂಟುಮಾಡಿದೆ. ಕುಟುಂಬ ಸಾವಿನ ದುಃಖದ ನುಡುವೆಯೂ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮರೆದಿದೆ.  ಕ್ರಿಸ್‌ಮಸ್‌ಗೂ ಮುನ್ನ ಇನ್ನೂ ಐವರ ಜೀವ ಉಳಿಸಲು ನಿಸ್ವಾರ್ಥವಾಗಿ ಲೈಲಾ ಕುಟುಂಬ ಮುಂದಾಗಿರುವುದು ‘ದಿ ಟೆಲಿಗ್ರಾಫ್‌’ನಲ್ಲಿ ವರದಿಯಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: