AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಾತ್ರಿ ಕೆಲಸ ಮುಗಿಯುತ್ತಿದ್ದಂತೆ 10 ಕಿಮೀ ಓಡಿಕೊಂಡೇ ಹೋಗಿ ಮನೆ ಸೇರುವ ಯುವಕ; ಕಾರಣ ಕೇಳಿ ಸೆಲ್ಯೂಟ್​​ ಹೊಡೆದ ನೆಟ್ಟಿಗರು

ಸದ್ಯ ನಾನು ನನ್ನ ಅಣ್ಣನೊಂದಿಗೆ ಇದ್ದೇನೆ, ತಾಯಿಗೆ ಹುಷಾರಿಲ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದನ್ನೂ ಪ್ರದೀಪ್​ ಮೆಹ್ರಾ, ವಿನೋದ್​ ಕಪ್ರಿಯವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದ್ದಾರೆ.

Video: ರಾತ್ರಿ ಕೆಲಸ ಮುಗಿಯುತ್ತಿದ್ದಂತೆ 10 ಕಿಮೀ ಓಡಿಕೊಂಡೇ ಹೋಗಿ ಮನೆ ಸೇರುವ ಯುವಕ; ಕಾರಣ ಕೇಳಿ ಸೆಲ್ಯೂಟ್​​ ಹೊಡೆದ ನೆಟ್ಟಿಗರು
ಓಡಿಯೇ ಮನೆ ಸೇರುವ ಯುವಕ
TV9 Web
| Updated By: Lakshmi Hegde|

Updated on:Mar 21, 2022 | 8:12 AM

Share

ಅಂಗಿ, ಚಡ್ಡಿ ಬೆನ್ನಿಗೊಂದು ಬ್ಯಾಗ್​ ಹಾಕಿಕೊಂಡ ಯುವಕನೊಬ್ಬ ಮಧ್ಯರಾತ್ರಿ ನೊಯ್ಡಾದ ರಸ್ತೆಯಲ್ಲಿ ಓಡುವ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಈ ಯುವಕ ರಾತ್ರಿ ಕೆಲಸ ಮುಗಿಸಿ ವಾಪಸ್​ ಮನೆಗೆ ಹೋಗುವಾಗ ಹೀಗೆ ಓಡಿಕೊಂಡೇ ಹೋಗುತ್ತಾನಂತೆ. ಅದಕ್ಕೆ ಒಂದು ಕಾರಣವೂ ಇದೆ. ಹುಡುಗ ಓಡುತ್ತ ಹೋಗುವ ವಿಡಿಯೋವನ್ನು ಸಿನಿಮಾ ನಿರ್ಮಾಪಕ, ಲೇಖಕ ವಿನೋದ್​ ಕಪ್ರಿ ತಮ್ಮ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ವಿನೋದ್​ ಕಪ್ರಿ ಕಾರಿನಲ್ಲಿ ಕುಳಿತೇ, ಓಡುತ್ತಿದ್ದ ಹುಡುಗನ ಜತೆ ಸಾಗುತ್ತ ಆತನನ್ನು ಸಂದರ್ಶಿಸಿದ್ದಾರೆ. ಬಾ, ನಾನು ನಿನ್ನ ಮನೆಗೆ ಡ್ರಾಪ್​ ಮಾಡುತ್ತೇನೆ, ಯಾಕೆ ಹೀಗೆ ಈ ರಾತ್ರಿಯಲ್ಲಿ ಓಡಿ ಹೋಗುತ್ತಿದ್ದೀಯಾ ಎಂದು ಕೇಳಿದ್ದಕ್ಕೆ, ಆ ಹುಡುಗ ತಿರುಗಿ ನೀಡಿದ ಉತ್ತರಕ್ಕೆ ವಿನೋದ್ ಕಪ್ರಿ ಮಾತ್ರವಲ್ಲ, ಇದೀಗ ನೆಟ್ಟಿಗರೂ ಫುಲ್​ ಫಿದಾ ಆಗಿದ್ದಾರೆ.

ಅಂದಹಾಗೆ ಯುವಕನ ಹೆಸರು ಪ್ರದೀಪ್​ ಮೆಹ್ರಾ. ಮೊದಲು ಮೆಹ್ರಾ ಹಿಂದಿರುಗಿ ತನ್ನನ್ನೊಂದು ಕಾರು ಹಿಂಬಾಲಿಸುತ್ತಿದೆ ಎಂಬುದನ್ನು ನೋಡುವುದಿಲ್ಲ. ಒಂದೇ ಸಮ ಓಡುತ್ತಲೇ ಹೋಗುತ್ತಿರುತ್ತಾರೆ. ವಿನೋದ್​ ಕಪ್ರಿ ಹುಡುಗನಿಗೆ ಸಮಾನಾಂತರವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿ, ಬಾ ನಿನ್ನನ್ನು ಮನೆಗೆ ಬಿಡುತ್ತೇನೆ ಎಂದರೆ ಬೇಡ, ನನಗೆ ಓಡಬೇಕು ಎನ್ನುತ್ತಾರೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಆಗ ವಿನೋದ್ ಕಪ್ರಿ, ಯಾಕೆ ಓಡಬೇಕು ಹೀಗೆ ಎಂದು ಕೇಳಿದಾಗ, ನಾನು ಸೇನೆಯನ್ನು ಸೇರಬೇಕು. ನನಗೆ ಹಗಲಿಗೆ, ಬೆಳಗ್ಗೆ ಓಡಲು ಸಮಯ ಸಿಗುವುದಿಲ್ಲ. ಹೀಗಾಗಿ ಕೆಲಸ ಮುಗಿಸಿ ಮಧ್ಯರಾತ್ರಿ ಓಡಿಯೇ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.

ಅದನ್ನು ಕೇಳಿ ವಿನೋದ್​ ಕಪ್ರಿ ಸಿಕ್ಕಾಪಟೆ ಖುಷಿಯಾಗಿದ್ದಾರೆ. ಹಾಗೇ, ಯುವಕನ ಬಳಿ ಆತನ ಬಗ್ಗೆ ವಿಚಾರಿಸಿದ್ದಾರೆ. ವಿನೋದ್​ ಕೇಳಿದ ಎಲ್ಲ ಪ್ರಶ್ನೆಗೂ ಯುವಕ ಓಡುತ್ತಲೇ ಉತ್ತರ ಕೊಟ್ಟಿದ್ದಾರೆ. ತಾವು ನೊಯ್ಡಾದ ಸೆಕ್ಟರ್​ 16ರಿಂದ ಬರೋಲಾದಲ್ಲಿರುವ ಮನೆಗೆ 10 ಕಿಮೀ ದೂರ ಪ್ರತಿದಿನವೂ ಓಡಿಕೊಂಡೇ ಹೋಗುವುದಾಗಿ ಹೇಳಿದ್ದಾರೆ. ಸದ್ಯ ನಾನು ನನ್ನ ಅಣ್ಣನೊಂದಿಗೆ ಇದ್ದೇನೆ, ತಾಯಿಗೆ ಹುಷಾರಿಲ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದನ್ನೂ ವಿನೋದ್​ ಕಪ್ರಿಯವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದ್ದಾರೆ. ಊಟ ಆಗಿದೆಯಾ ಎಂದು ಕೇಳಿದ್ದಕ್ಕೆ, ಇಲ್ಲ ಈಗ ನಾನು ಮನೆಗೆ ಹೋಗಿ ಅಡುಗೆ ಮಾಡಬೇಕು ಎನ್ನುತ್ತಾರೆ. ಬಾ ನನ್ನ ಜತೆ, ನನ್ನೊಂದಿಗೆ ಊಟ ಮಾಡು ಎಂದಿದ್ದಕ್ಕೆ, ಇಲ್ಲ ನಾನು ಹಾಗೆ ಮಾಡಿದರೆ ಮನೆಯಲ್ಲಿರುವ ನನ್ನ ಅಣ್ಣ ಹಸಿದುಕೊಂಡೇ ಇರಬೇಕಾಗುತ್ತದೆ ಎಂದು ಪ್ರದೀಪ್ ಹೇಳುತ್ತಾರೆ. ಯಾಕೆ ಅವರು ಅಡುಗೆ ಮಾಡುವುದಿಲ್ಲವಾ ಎಂದು ವಿನೋದ್​ ಕಪ್ರಿ ಕೇಳಿದ್ದಕ್ಕೆ, ಇಲ್ಲ ಅವರಿಗೆ ಈಗ ರಾತ್ರಿ ಡ್ಯೂಟಿ ಇದೆ. ನಾನು ಹೋಗಿ ಅಡುಗೆ ಮಾಡಬೇಕು ಎಂಬ ಉತ್ತರವನ್ನು ನೀವು ಕೇಳಬಹುದು.

ಆ ವಿಡಿಯೋವನ್ನು ಒಂದು ಚೆಂದನೆಯ ಕ್ಯಾಪ್ಷನ್​ ಜತೆ ಸೋಷಿಯಲ್ ಮೀಡಿಯಾಕ್ಕೆ ಪೋಸ್ಟ್ ಮಾಡಿದ ವಿನೋದ್​ ಕಪ್ರಿ, ಪ್ರದೀಪ್​ ಮೆಹ್ರಾರರನ್ನು ಶುದ್ಧವಾದ ಬಂಗಾರ (Pure Gold) ಎಂದಿದ್ದಾರೆ. ಅಷ್ಟೇ ಅಲ್ಲ, ಕಾರಿನಲ್ಲೇ ಕುಳಿತು ವಿಡಿಯೋ ಶೇರ್​ ಮಾಡಿದ ಅವರು ಮತ್ತೆ ಪ್ರದೀಪ್​ ಬಳಿ, ನೀನು ಓಡುತ್ತಿರುವ ವಿಡಿಯೋ ಸಿಕ್ಕಾಪಟೆ ವೈರಲ್​ ಆಗುತ್ತಿದೆ ಎನ್ನುತ್ತಾರೆ. ಆಗ ನಗುವ ಪ್ರದೀಪ್​, ಯಾರು ನನ್ನನ್ನು ಗುರುತಿಸುತ್ತಾರೆ? ಇರಲಿ ವೈರಲ್​ ಆಗಲಿ ಯಾಕೆಂದರೆ ನಾನೇನೂ ತಪ್ಪು ಮಾಡುತ್ತಿಲ್ಲ ಎನ್ನುತ್ತಾರೆ. ಸದ್ಯ ವಿಡಿಯೋವಂತೂ ಭರ್ಜರಿ ವೈರಲ್​ ಆಗುತ್ತಿದೆ. ಅನೇಕ ಜನರು ಇದನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Health Tips: ಬೇಸಿಗೆಯಲ್ಲಿ ಆರೋಗ್ಯವಾಗಿರಲು ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

Published On - 8:10 am, Mon, 21 March 22

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್