Tamil Nadu: ಏಕಾಏಕಿ ಪೊಲೀಸರ ದಾಳಿ; ರೈಲಿನಲ್ಲಿ 16 ಕೆಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದ ಇಬ್ಬರು ಯುವಕರು

ಗಾಬರಿಗೊಂಡ ಈ ಇಬ್ಬರು ಯುವಕರಲ್ಲಿ ಪೊಲೀಸರು ವಿವರ ಕೇಳಿದಾಗ ಇಬ್ಬರೂ ಅಸಮಂಜಸ ಉತ್ತರ ನೀಡಿದ್ದಾರೆ. ಬಳಿಕ ಪೊಲೀಸರ ತಂಡ ತಪಾಸಣೆ ನಡೆಸಿದಾಗ ಎಂಟು ಪ್ಯಾಕೆಟ್‌ಗಳಲ್ಲಿ ಗಾಂಜಾ ಪತ್ತೆಯಾಗಿದೆ. ಬಂಧಿತರು ಒಡಿಶಾದ ಎಸ್. ಕಾಂಚಿಪುರಂನ ಅರ್ಜುನ್ ಮಲಿಕ್ (24) ವಿ. ಮಣಿಕಂದನ್ (37) ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

Tamil Nadu: ಏಕಾಏಕಿ ಪೊಲೀಸರ ದಾಳಿ; ರೈಲಿನಲ್ಲಿ 16 ಕೆಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದ ಇಬ್ಬರು ಯುವಕರು

Updated on: May 19, 2024 | 5:45 PM

ತಮಿಳುನಾಡಿನ ರಾಣಿಪೇಟ್ ಬಳಿಯ ಅರಕ್ಕೋಣಂ ರೈಲು ನಿಲ್ದಾಣದಲ್ಲಿ ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಪೊಲೀಸರು ಏಕಾಏಕಿ ದಾಳಿ ನಡೆಸಿದಾಗ ಇಬ್ಬರು ಯುವಕರು 16 ಕೆಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ರೈಲಿನ ಕಾಯ್ದಿರಿಸದ ಬೋಗಿಗಳಲ್ಲಿ ಹಠಾತ್​​​ ಶೋಧ ನಡೆಸಿದ್ದಾರೆ. ಈ ವೇಳೆ ರೈಲ್ಲಿನಲ್ಲಿದ್ದ ಇಬ್ಬರು ಯುವಕರು ಪೊಲೀಸರನ್ನು ಕಂಡು ಗಾಬರಿಯಾಗಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರು ಯುವಕರ ಬಳಿ ಸುಮಾರು 16 ಕೆಜಿ ಗಾಂಜಾ ಪತ್ತೆಯಾಗಿದ್ದು, ಪ್ರಯಾಣಿಕರು ಶಾಕ್​ ಆಗಿದ್ದಾರೆ.

ಗಾಬರಿಗೊಂಡ ಈ ಇಬ್ಬರು ಯುವಕರಲ್ಲಿ ಪೊಲೀಸರು ವಿವರ ಕೇಳಿದಾಗ ಇಬ್ಬರೂ ಅಸಮಂಜಸ ಉತ್ತರ ನೀಡಿದ್ದಾರೆ. ಬಳಿಕ ಪೊಲೀಸರ ತಂಡ ತಪಾಸಣೆ ನಡೆಸಿದಾಗ ಎಂಟು ಪ್ಯಾಕೆಟ್‌ಗಳಲ್ಲಿ ಗಾಂಜಾ ಪತ್ತೆಯಾಗಿದೆ. ಬಂಧಿತರು ಒಡಿಶಾದ ಎಸ್. ಕಾಂಚಿಪುರಂನ ಅರ್ಜುನ್ ಮಲಿಕ್ (24) ವಿ. ಮಣಿಕಂದನ್ (37) ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸೋಶಿಯಲ್​​ ಮೀಡಿಯಾದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಯುವತಿಯ ಶವ ಪತ್ತೆ

ಇವರಿಬ್ಬರೂ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಿಂದ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರು ಅಲ್ಲಿ ಕಡಿಮೆ ದರದಲ್ಲಿ ಗಾಂಜಾವನ್ನು ಖರೀದಿಸಿ, ಬಳಿಕ ಕಾಂಚೀಪುರಂ, ವೆಲ್ಲೂರು, ಅರಕ್ಕೋಣಂ ಮತ್ತು ತಿರುವಣ್ಣಾಮಲೈ ಮುಂತಾದ ಪಟ್ಟಣಗಳಲ್ಲಿ ಸ್ಥಳೀಯ ವಿತರಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಪೊಲೀಸರ ತನಿಖೆಯ ವೇಳೆ ತಿಳಿದುಬಂದಿದೆ. ಇನ್ನು ಮುಂದೆ ರೈಲುಗಳನ್ನು ಸಹ ನಿಯಮಿತವಾಗಿ ತಪಾಸಣೆ ಮಾಡಲಾಗುವುದು ಎಂದು ನಿಷೇಧಾಜ್ಞೆ ಜಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಪೊಲೀಸ್ ಶ್ವಾನಗಳಿಗೂ ವಿಶೇಷ ತರಬೇತಿ ನೀಡಲಾಗುತ್ತದೆ ಎಂದಿದ್ದಾರೆ. ಇದಲ್ಲದೇ ರೈಲಿನಲ್ಲಿ ಗಾಂಜಾ ಸಾಗಾಟ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿರುವುದು ವರದಿಯಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ