ಮೈಸೂರು: ಕ್ಯಾಂಟೀನ್ ನಡೆಸ್ತಿದ್ದ ದಂಪತಿ ಅನುಮಾನಾಸ್ಪದ ಸಾವು
ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ(Periyapatna) ಗೊಲ್ಲರ ಬೀದಿಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈವರೆಗೂ ಪತಿ ಹಾಗೂ ಪತ್ನಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೈಸೂರು, ಮೇ.18: ಜಿಲ್ಲೆಯ ಪಿರಿಯಾಪಟ್ಟಣದ(Periyapatna) ಗೊಲ್ಲರ ಬೀದಿಯಲ್ಲಿರುವ ಮನೆಯೊಂದರಲ್ಲಿ ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪ್ರಕಾಶ್(51) ಮತ್ತು ಪತ್ನಿ ಯಶೋಧ(48) ಮೃತರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈವರೆಗೂ ಪತಿ ಹಾಗೂ ಪತ್ನಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ಮೃತದೇಹಗಳ ಮೇಲೆ ಯಾವುದೇ ಗಾಯದ ಗುರುತು ಇಲ್ಲ. ಪತಿ ಪ್ರಕಾಶ್ ರಸ್ತೆ ಬದಿ ಕ್ಯಾಂಟೀನ್ ನಡೆಸುತ್ತಿದ್ದರೆ, ಪ್ರಕಾಶ್ ಪತ್ನಿ ಯಶೋಧ ಫ್ಲೋರ್ ಮಿಲ್ ನಡೆಸುತ್ತಿದ್ದರು. ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತರ ಜೊತೆ ಈಜಲು ತೆರಳಿದ್ದ ಯುವಕ ನೀರುಪಾಲು
ಕೊಪ್ಪಳ: ಗಂಗಾವತಿ ತಾಲೂಕಿನ ಸಾಣಾಪುರ ಕೆರೆಯಲ್ಲಿ ಸ್ನೇಹಿತರ ಜೊತೆ ಈಜಲು ತೆರಳಿದ್ದ ಯುವಕ ನೀರು ಪಾಲಾದ ಘಟನೆ ನಡೆದಿದೆ. ಮಂಜುನಾಥ್ (19) ನೀರುಪಾಲಾದ ಯುವಕ. ಸಾಣಾಪುರ ಕೆರೆಯಲ್ಲಿ ಈಜಲು ಇಳಿದಿದ್ದ ಮಂಜುನಾಥ್, ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಮೃತರ ಮೃತದೇಹ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಈ ಘಟನೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ಹಾಸನ, ರಾಮನಗರ ಆಯ್ತು ಇದೀಗ ಉತ್ತರ ಕನ್ನಡದಲ್ಲಿ ಹೊಳೆಯಲ್ಲಿ ಮುಳುಗಿ ಇಬ್ಬರು ಸಾವು
ನದಿಯಲ್ಲಿ ಮುಳುಗಿ ನಾಲ್ವರ ಸಾವು ಪ್ರಕರಣ; ನಾಪತ್ತೆಯಾಗಿದ್ದ ಮತ್ತೋರ್ವನ ಶವ ಪತ್ತೆ
ಬೆಳಗಾವಿ: ಮಹಾರಾಷ್ಟ್ರದ ಕಾಗಲ್ ತಾಲೂಕಿನ ಬಸ್ತವಾಡೆ ಗ್ರಾಮದ ಬಳಿಯ ವೇದಗಂಗಾ ನದಿಯಲ್ಲಿ ಮುಳುಗಿ ನಾಲ್ವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಯಶ್ ಎಳಮಲ್ಲೆ(17) ಎಂಬಾತನ ಶವ ಪತ್ತೆಯಾಗಿದೆ. ನಿನ್ನೆ(ಮೇ.17) ತಾಯಿ ಉಳಿಸಲು ಹೋಗಿ ಮಗ ಯಶ್ ಕೂಡ ನದಿಗಿಳಿದಿದ್ದ. ಈ ವೇಳೆ ಒಬ್ಬರನ್ನೊಬ್ಬರು ಉಳಿಸಲು ಹೋಗಿ ನಾಲ್ಕು ಜನ ಜಲಸಮಾಧಿಯಾಗಿದ್ದರು. ಇದೀಗ ಅಥಣಿ ಮೂಲದ ಯಶ್ ಎಳಮಲ್ಲೆ ಶವ ಪತ್ತೆಯಾಗಿದೆ. ಮುಳುಗಿದ ಜಾಗದಿಂದ ಅರ್ಧ ಕಿಮೀ ದೂರದಲ್ಲಿ ಶವ ಸಿಕ್ಕಿದೆ. ಈಗಾಗಲೇ ಎನ್‌ಡಿಆರ್‌ಎಫ್ ತಂಡದ ಸಿಬ್ಬಂದಿ ಹೊರಕ್ಕೆ ತೆಗೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Sat, 18 May 24