Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವನನ್ನು ಹೆತ್ತ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದೇನೆ:ಅಂಜಲಿ ಹತ್ಯೆ ಆರೋಪಿಯ ತಾಯಿ

ವಿಶ್ವನನ್ನು ಹೆತ್ತ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದೇನೆ:ಅಂಜಲಿ ಹತ್ಯೆ ಆರೋಪಿಯ ತಾಯಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 18, 2024 | 4:14 PM

ಕಾನೂನು ಅವನಿಗೆ ಸೂಕ್ತ ಶಿಕ್ಷೆ ನೀಡಲಿ ಎಂದು ಹೋಟೆಲೊಂದರಲ್ಲಿ ಕೆಲಸ ಮಾಡುತ್ತಾ ಕುಟುಂಬದ ಜೊತೆ ವಿಶ್ವನನ್ನೂ ಸಲಹುತ್ತಿರುವ ಅವನ ತಾಯಿ ಹೇಳುತ್ತಾರೆ. ಸುಮಾರು ಆರು ತಿಂಗಳಿಂದ ಮನೆ ಕಡೆ ಅವನು ಬಂದಿರಲಿಲ್ಲ ಮತ್ತು ಅವನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ಗೊತ್ತಾದ ಮೇಲೂ ಮಾತಾಡಿಸಲು ಹೋಗಿಲ್ಲವೆಂದು ಆಕೆ ಹೇಳುತ್ತಾರೆ.

ಹುಬ್ಬಳ್ಳಿ: ಅಂಜಲಿ ಅಂಬೀಗೇರ್ (Anjali Ambiger) ಕೊಲೆ ಆರೋಪಿ ವಿಶ್ವನಾಥ್ ಅಲಿಯಾಸ್ ಗಿರೀಶ್ ಸಾವಂತ್ ನನ್ನು (Girish Sawant) ಪೊಲೀಸರು ಬಂಧಿಸಿದ್ದರೂ ತಲೆಗೆ ಪೆಟ್ಟು ಬಿದ್ದಿರುವ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ (KIMS, Hubballi) ಚಿಕಿತ್ಸೆ ಪಡೆಯುತ್ತಿದ್ದಾನೆ. ಏತನ್ಮಧ್ಯೆ, ಅವನನ್ನು ಹೆತ್ತ ತಾಯಿಯೊಂದಿಗೆ ಟಿವಿ9 ಹುಬ್ಬಳ್ಳಿ ವರದಿಗಾರ ಮಾತಾಡಿದ್ದಾರೆ. ಮಗನ ಕೃತ್ಯದಿಂದ ಈಕೆ ಆಘಾತಕ್ಕೊಳಗಾಗಿದ್ದರೂ ಸ್ಥಿತಪ್ರಜ್ಞರಾಗಿದ್ದಾರೆ. ಕಾನೂನು ಅವನಿಗೆ ಸೂಕ್ತ ಶಿಕ್ಷೆ ನೀಡಲಿ ಎಂದು ಹೋಟೆಲೊಂದರಲ್ಲಿ ಕೆಲಸ ಮಾಡುತ್ತಾ ಕುಟುಂಬದ ಜೊತೆ ವಿಶ್ವನನ್ನೂ ಸಲಹುತ್ತಿರುವ ಅವನ ತಾಯಿ ಹೇಳುತ್ತಾರೆ. ಸುಮಾರು ಆರು ತಿಂಗಳಿಂದ ಮನೆ ಕಡೆ ಅವನು ಬಂದಿರಲಿಲ್ಲ ಮತ್ತು ಅವನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ಗೊತ್ತಾದ ಮೇಲೂ ಮಾತಾಡಿಸಲು ಹೋಗಿಲ್ಲವೆಂದು ಆಕೆ ಹೇಳುತ್ತಾರೆ. ಅವನನ್ನು ಹೆತ್ತ ತಪ್ಪಿಗೆ ಪಶ್ಚಾತ್ತಾಪ ಪಡುವ ಸ್ಥಿತಿ ತನಗೆ ಬಂದೊದಗಿದೆ ಎಂದು ಹೇಳುವ ಆಕೆ ಅಂಜಲಿಯನ್ನು ಮದುವೆ ಮಾಡಿಕೊಳ್ಳುವುದಾಗಿ ವಿಶ್ವ ಆಕೆಗೆ ಹೇಳಿದ್ದನಂತೆ. ಒಮ್ಮೆ ಕಳುವು ಮಾಡಿ ಜೈಲಿಗೆ ಹೋಗಿದ್ದ ವಿಶ್ವನನ್ನು ಆಕೆಯೇ ಬಿಡಿಸಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಂಜಲಿಯನ್ನು ಹತ್ಯೆಗೈದು, ರೈಲಿನಲ್ಲಿ ಮಹಿಳೆಗೂ ಚಾಕುವಿನಿಂದ ಚುಚ್ಚಿದ್ದ ಆರೋಪಿ ವಿಶ್ವನ ಟ್ರಾವೆಲ್​ ಹಿಸ್ಟ್ರಿ ಇಲ್ಲಿದೆ