ದೇವರಾಜೇಗೌಡ ಮಾಡಿದ ಆರೋಪಕ್ಕೆ ಡಿಕೆ ಶಿವಕುಮಾರ್ ಹೆಚ್ಚಿನ ಮಹತ್ವ ನೀಡುತ್ತಿಲ್ಲ, ಬಿಟ್ಹಾಕಿ ಅಂತ ಸನ್ನೆ ಮಾಡುತ್ತಾರೆ!

ದೇವರಾಜೇಗೌಡ ಮಾಡಿರುವ ಆರೋಪಕ್ಕೆ ಶಿವಕಮಾರ್ ಅವರಿಂದ ಸಮಂಜಸ ಮತ್ತು ಸ್ಪಷ್ಟ ಉತ್ತರ ಮಾಧ್ಯಮದವರಿಗೆ ಸಿಗಲಿಲ್ಲ. ಅವರು ಆಡಿದ ಮಾತಿನಲ್ಲಿ ಸ್ಪಷ್ಟತೆಯ ಕೊರತೆ ಇತ್ತು. ವಿಷಯದ ಬಗ್ಗೆ ಅವರು ಮಾತಾಡಲು ಅನ್ಯಮನಸ್ಕತೆ ಪ್ರದರ್ಶಿಸಿದರು. ಮಾಧ್ಯಮ ಪ್ರತಿನಿಧಿಗಳು ಪುನಃ ದೇವರಾಜೇಗೌಡ ಆಡಿರುವ ಮಾತುಗಳನ್ನು ಉಲ್ಲೇಖಿಸಲಾರಂಭಿಸಿದಾಗ ಅವರು ಬೇರೆ ವಿಷಯ ಏನಾದರೂ ಇದ್ದರೆ ಹೇಳಿ ಎನ್ನುತ್ತಾರೆ!

ದೇವರಾಜೇಗೌಡ ಮಾಡಿದ ಆರೋಪಕ್ಕೆ ಡಿಕೆ ಶಿವಕುಮಾರ್ ಹೆಚ್ಚಿನ ಮಹತ್ವ ನೀಡುತ್ತಿಲ್ಲ, ಬಿಟ್ಹಾಕಿ ಅಂತ ಸನ್ನೆ ಮಾಡುತ್ತಾರೆ!
|

Updated on: May 18, 2024 | 5:04 PM

ಬೆಂಗಳೂರು: ಪೊಲೀಸ್ ವಶದಲ್ಲಿರುವ ವಕೀಲ ಡಿ ದೇವರಾಜೇಗೌಡ (D Devarajegowda) ಪೊಲೀಸರ ಸಮಕ್ಷಮದಲ್ಲೇ ತಾನು ಅವರಿಗೆ ₹ 100 ಕೋಟಿ ಆಫರ್ ನೀಡಿದ್ದೆ ಅಂತ ಮಾಧ್ಯಮದವರಿಗೆ ಹೇಳಿದ್ದರೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಾತ್ರ ನಿರ್ಲಿಪ್ತ ಮತ್ತು ಅರೋಪದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಒಂದು ಪಕ್ಷದ ಅಧ್ಯಕ್ಷನಾಗಿರುವ (KPCC president) ತನ್ನನ್ನು ಸಾವಿರಾರು ಜನ ಭೇಟಿಯಾಗುತ್ತಾರೆ ಎಲ್ಲರನ್ನು ನೆನಪಿಟ್ಟುಕೊಳ್ಳಲಾಗುತ್ತಾ? ಯಾರು ಏನೇ ಆರೋಪ ಮಾಡಿದರು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಲ್ಲ ಮತ್ತು ಮಾಡಲು ತನಗೆ ಬೇಕಾದಷ್ಟು ಕೆಲಸಗಳಿವೆ ಎಂದು ಹೇಳಿದರು. ಕೆಲವರು ತಮ್ಮ ಮಾರ್ಕೆಟಿಂಗ್ ಮಾಡಿಕೊಳ್ಳಲು ನನ್ನ ಹೆಸರು ಉಪಯೋಗಿಸಿಕೊಳ್ಳುತ್ತಾರೆ, ಮಾಧ್ಯಮದವರಿಗೂ ನನ್ನ ಬಗ್ಗೆ ಬರೆಯಲು ಅತುರ, ಕಾತುರ ಇದ್ದೇ ಇರುತ್ತೆ ಎಂದು ಶಿವಕುಮಾರ್ ಹೇಳಿದರು. ದೇವರಾಜೇಗೌಡ ಮಾಡಿರುವ ಆರೋಪಕ್ಕೆ ಶಿವಕಮಾರ್ ಅವರಿಂದ ಸಮಂಜಸ ಮತ್ತು ಸ್ಪಷ್ಟ ಉತ್ತರ ಮಾಧ್ಯಮದವರಿಗೆ ಸಿಗಲಿಲ್ಲ. ಅವರು ಆಡಿದ ಮಾತಿನಲ್ಲಿ ಸ್ಪಷ್ಟತೆಯ ಕೊರತೆ ಇತ್ತು. ವಿಷಯದ ಬಗ್ಗೆ ಅವರು ಮಾತಾಡಲು ಅನ್ಯಮನಸ್ಕತೆ ಪ್ರದರ್ಶಿಸಿದರು. ಮಾಧ್ಯಮ ಪ್ರತಿನಿಧಿಗಳು ಪುನಃ ದೇವರಾಜೇಗೌಡ ಆಡಿರುವ ಮಾತುಗಳನ್ನು ಉಲ್ಲೇಖಿಸಲಾರಂಭಿಸಿದಾಗ ಅವರು ಬೇರೆ ವಿಷಯ ಏನಾದರೂ ಇದ್ದರೆ ಹೇಳಿ ಎನ್ನುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡುವ ದೇವರಾಜೇಗೌಡ ಯಾವ ಸ್ಥಿತಿಯಲ್ಲಿದ್ದಾರೆ? ಮಧು ಬಂಗಾರಪ್ಪ

Follow us