ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡುವ ದೇವರಾಜೇಗೌಡ ಯಾವ ಸ್ಥಿತಿಯಲ್ಲಿದ್ದಾರೆ? ಮಧು ಬಂಗಾರಪ್ಪ
ಅಸಲಿಗೆ ನಡೆಯುತ್ತಿರುವ ಸಂಗತಿಯೇನೆಂದರೆ ಮುಖ್ಯ ವಿಷಯದಿಂದ ಜನರ ಗಮನವನ್ನು ಬೇರೆಡೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಪ್ರಕರಣದ ಬಹುಮುಖ್ಯ ಭಾಗವೆಂದರೆ ಸಂತ್ರಸ್ತೆಯರು. ಅವರ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ, ಅವರಿಗೆ ನ್ಯಾಯ ಕೊಡಿಸುವ ಕೆಲಸ ಮೊದಲು ನಡೆಯಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಚಿಕ್ಕಮಗಳೂರು: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತನಗೆ ₹100 ಕೋಟಿ ಆಫರ್ ನೀಡಿದ್ದರು ಅಂತ ಈಗ ಪೊಲೀಸ್ ವಶದಲ್ಲಿರುವ ವಕೀಲ ಮತ್ತು ಬಿಜೆಪಿ ಮುಖಂಡ ಡಿ ದೇವರಾಜೇಗೌಡ (D Devarajegowda) ಹೇಳಿರುವುದು ರಾಜ್ಯದಲ್ಲಿ ಹೊಸ ಚರ್ಚೆಯನ್ನು ಸೃಷ್ಟಿಸಿದೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa), ಇಂಥ ಹೇಳಿಕೆಗಳನ್ನು ನೀಡುತ್ತಿರುವ ದೇವರಾಜೇಗೌಡರು ಯಾವ ಸ್ಥಿತಿಯಲ್ಲಿದ್ದಾರೆ ಅನ್ನೋದನ್ನು ಅರ್ಥಮಾಡಿಕೊಳ್ಳಬೇಕು, ಇಡೀ ಪ್ರಕರಣದಲ್ಲಿ ಕಾನೂನಿಗಿಂತ ಮಿಗಿಲಾದವರು ಯಾರೂ ಇಲ್ಲ, ವ್ಯಕ್ತಿ ಯಾರೇ ಆಗಿರಲಿ ಅವರಿಂದ ತಪ್ಪಾಗಿದ್ದರೆ ಕಾನೂನು ನಿಶ್ಚಿತವಾಗಿ ಕ್ರಮ ತೆಗೆದುಕೊಳ್ಳುತ್ತದೆ. ಅಸಲಿಗೆ ನಡೆಯುತ್ತಿರುವ ಸಂಗತಿಯೇನೆಂದರೆ ಮುಖ್ಯ ವಿಷಯದಿಂದ ಜನರ ಗಮನವನ್ನು ಬೇರೆಡೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಪ್ರಕರಣದ ಬಹುಮುಖ್ಯ ಭಾಗವೆಂದರೆ ಸಂತ್ರಸ್ತೆಯರು. ಅವರ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ, ಅವರಿಗೆ ನ್ಯಾಯ ಕೊಡಿಸುವ ಕೆಲಸ ಮೊದಲು ನಡೆಯಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೋದಿ ಹೆಸರು ಹೇಳೋದು ಬಿಟ್ಟು ನಳಿನ್ ಕುಮಾರ್ ಕಟೀಲ್ ಏನು ಅಭಿವೃದ್ಧಿ ಮಾಡಿದ್ದಾರೆ: ಮಧು ಬಂಗಾರಪ್ಪ ವಾಗ್ದಾಳಿ