ಬೆಳಗಾವಿ: ರೈಲಿನಲ್ಲಿ ಟಿಸಿ ಸೇರಿದಂತೆ ಐವರ ಮೇಲೆ ಮುಸುಕುಧಾರಿ ಹಲ್ಲೆ, ಓರ್ವ ಸಾವು

ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಳಗಾವಿ(Belagavi) ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಬಳಿ ಟಿಕೆಟ್ ತೋರಿಸಿ ಎಂದಿದ್ದಕ್ಕೆ ಟಿಸಿ(Ticket Collector) ಸೇರಿ ಐವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರಿಗೂ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಿಸದೇ ಕೋಚ್ ಅಟೆಂಡರ್ ಕೊನೆಯುಸಿರೆಳೆದಿದ್ದಾರೆ.

ಬೆಳಗಾವಿ: ರೈಲಿನಲ್ಲಿ ಟಿಸಿ ಸೇರಿದಂತೆ ಐವರ ಮೇಲೆ ಮುಸುಕುಧಾರಿ ಹಲ್ಲೆ, ಓರ್ವ ಸಾವು
ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಟಿಸಿ ಸೇರಿ ಐವರ ಮೇಲೆ ಮಾರಣಾಂತಿಕ ಹಲ್ಲೆ
Follow us
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್

Updated on:May 16, 2024 | 6:46 PM

ಬೆಳಗಾವಿ, ಮೇ.16: ಟಿಕೆಟ್ ತೋರಿಸಿ ಎಂದಿದ್ದಕ್ಕೆ ಟಿಸಿ(Ticket Collector) ಸೇರಿ ಐವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಳಗಾವಿ(Belagavi) ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಬಳಿ ನಡೆದಿದೆ. ನಾಲ್ವರು ಅಪರಿಚಿತ ಮುಸುಕುಧಾರಿ ಪ್ರಯಾಣಿಕರು ಸೇರಿ ಟಿಸಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಟಿಸಿ ಮತ್ತು ನಾಲ್ವರು ಪ್ರಯಾಣಿಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರಿಗೂ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಿಸದೇ ಓರ್ವ ಮೃತಪಟ್ಟಿದ್ದಾರೆ.

ಚಿಕಿತ್ಸೆ ಫಲಿಸದೆ ಕೋಚ್ ಅಟೆಂಡರ್ ಸಾವು

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಚಿಕಿತ್ಸೆ ಫಲಿಸದೆ ಕೋಚ್ ಅಟೆಂಡರ್ ದೇವ‌ಋಷಿ ವರ್ಮಾ(23) ಎಂಬುವವರು ಸಾವನ್ನಪ್ಪಿದ್ದಾರೆ. ಪಾಂಡಿಚೇರಿ ಯಿಂದ ಮುಂಬಯಿ ಮಾರ್ಗವಾಗಿ ಚಲಿಸುತ್ತಿದ್ದ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನ ಎಸ್ 8 ಬೋಗಿಯಲ್ಲಿ ಟಿಸಿ ಮೇಲಿನ ಹಲ್ಲೆ ತಡೆಯಲು ಹೋಗಿದ್ದ ಕೋಚ್ ಅಟೆಂಡರ್​ಗೆ ಮುಸುಕುಧಾರಿ ಮನಸೋ ಇಚ್ಚೆ ಚಾಕು ಇರಿದಿದ್ದ. ಇದೀಗ ಕೊನೆಯುಸಿರೆಳೆದಿದ್ದಾರೆ. ಇನ್ನು ಟಿಸಿ ಸೇರಿ ಉಳಿದ ಮೂವರಿಗೆ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ:ಹಣಕ್ಕೆ ಬೇಡಿಕೆ: ಸೆಕೆಂಡ್ ​ಹ್ಯಾಂಡ್ ಕಾರು ವ್ಯಾಪಾರಿಯನ್ನ ಬೆತ್ತಲೆ ಮಾಡಿ ಹಲ್ಲೆ, ಆರೋಪಿಗಳು ಅಂದರ್​

ಸರಣಿ ಅಪಘಾತ, ಬೈಕ್​ ಸವಾರ ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿ ಗೇಟ್ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಬಸ್​​ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಸ್ ಹಿಂದೆ ಬರುತ್ತಿದ್ದ 2 ಕಾರು, ಮತ್ತೊಂದು ಬಸ್​ ಡಿಕ್ಕಿಯಾಗಿದ್ದು, ಹಲವರಿಗೆ ಗಾಯವಾಗಿದೆ. ಕೂಡಲೇ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Thu, 16 May 24