Viral News: 52ರ ಶಿಕ್ಷಕನಿಗೆ ಪ್ರಪೋಸ್ ಮಾಡಿ ಮದುವೆಯಾದ 20 ವರ್ಷದ ವಿದ್ಯಾರ್ಥಿನಿ..!

52 ವರ್ಷದ ಶಿಕ್ಷಕನಿಗೆ 20 ವರ್ಷದ ವಿದ್ಯಾರ್ಥಿನಿ ಲವ್ ಪ್ರಪೋಸ್ ಮಾಡಿ ಕೊನೆಗೆ ಮದುವೆಯಾಗಿದ್ದು, ಹುಡುಗಿಯ ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ.

Viral News: 52ರ ಶಿಕ್ಷಕನಿಗೆ ಪ್ರಪೋಸ್ ಮಾಡಿ ಮದುವೆಯಾದ 20 ವರ್ಷದ ವಿದ್ಯಾರ್ಥಿನಿ..!
20 year student marries 52 year old teacher
Updated By: ರಮೇಶ್ ಬಿ. ಜವಳಗೇರಾ

Updated on: Nov 01, 2022 | 9:27 PM

ಇಸ್ಲಾಮಾಬಾದ್: ಇತ್ತೀಚೆಗೆ ಕೆಲ ಅಚ್ಚರಿಯ ಘಟನೆಗಳು ನಡೆಯುತ್ತಿವೆ. ಅದರಲ್ಲೂ ಈ ಪ್ರೀತಿ-ಪ್ರೇಮದ ಸುದ್ದಿಯಂತೂ ಓದುಗರ ಹುಬ್ಬೇರುವಂತೆ ಮಾಡುತ್ತವೆ. ಅದರಂತೆ 52 ವರ್ಷದ ಶಿಕ್ಷಕನಿಗೆ 20 ವರ್ಷದ ವಿದ್ಯಾರ್ಥಿನಿಯೇ ಮೇಲೆ ಬಿದ್ದು ಲವ್​ ಪ್ರಪೋಸ್ ಮಾಡಿ ಮದ್ವೆಯಾಗಿರುವ ಸುದ್ದಿ ಸಂಚಲನ ಮೂಡಿಸಿದೆ. 52 ವರ್ಷದ ಶಿಕ್ಷಕನಿಗೆ 20 ವರ್ಷದ ವಿದ್ಯಾರ್ಥಿನಿ ಲವ್ ಪ್ರಪೋಸ್ ಮಾಡಿ ಕೊನೆಗೆ ಮದುವೆಯಾಗಿರುವ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ಬೇರೆ-ಬೇರೆಯಾಗಿ ಚರ್ಚೆಯಾಗುತ್ತಿದೆ.

ಹೌದು…ಪಾಕಿಸ್ತಾನ ಮೂಲದವರಾದ ಜೊಯಾ ನೂರ್ ಎನ್ನುವ ವಿದ್ಯಾರ್ಥಿನಿ ಸಾಜಿದ್ ಅಲಿ ಎನ್ನುವ 52 ವರ್ಷದ ಶಿಕ್ಷಕನಿಗೆ ಲವ್ ಪ್ರಪೋಸ್ ಮಾಡಿ ಮದ್ವೆ ಮಾಡಿಕೊಂಡಿದ್ದಾಳೆ. ಇವರಿಬ್ಬರ ನಡುವೆ ಬರೋಬ್ಬರಿ 32 ವರ್ಷ ವಯಸ್ಸಿನ ಅಂತರವಿದೆ. ಪೋಷಕರ ವಿರೋಧದ ನಡುವೆಯೂ ಶಿಕ್ಷಕ ಸಾಜಿದ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೊಯಾ, ಯುಟ್ಯೂಬ್ ಚಾನೆಲ್​​ವೊಂದರಲ್ಲಿ ಸಂದರ್ಶನದಲ್ಲಿ ತಮ್ಮ ಲವ್​ ಮ್ಯಾರೇಜ್ ಬಗ್ಗೆ ಹೇಳಿಕೊಂಡಿದ್ದು, ಅದು ಈ ಕೆಳಗಿನಂತಿದೆ.

70ರ ಮದುಮಗ 20ರ ಮದುಮಗಳು; ಮದುವೆಗಳು ಭೂಮಿಯ ಮೇಲೆಯೇ ಹೀಗೆ ನಿಶ್ಚಯಿಸಿಯೇ ನಡೆಯುತ್ತವೆ

ಶಿಕ್ಷಕ ಸಾಜಿದ್​ ವಿಭಿನ್ನ ವ್ಯಕ್ತಿತ್ವವೇ ಅವರ ಪ್ರೀತಿಯ ಬಲೆಯಲ್ಲಿ ನಾನು ಬೀಳಲು ಪ್ರಮುಖ ಕಾರಣ. ಮದುವೆಯಾಗುವ ಬಯಕೆಯನ್ನು ನಾನೇ ಮೊದಲು ಅವರ ಮುಂದೆ ಪ್ರಸ್ತಾಪಿಸಿದ್ದೆ. ಆದರೆ, ಆರಂಭದಲ್ಲಿ ಸಾಜಿದ್ ನನ್ನ ಪ್ರೀತಿಯನ್ನು ನಿರಾಕರಿಸಿದ್ದರು. ನಮ್ಮಿಬ್ಬರ ನಡುವೆ 32 ವರ್ಷ ವಯಸ್ಸಿನ ಅಂತರವಿದೆ. ಹೀಗಾಗಿ ಮದುವೆಯಾಗಲು ಸಾಧ್ಯವಿಲ್ಲವೆಂದು ಹೇಳಿದ್ದರು. ಇದಾದ ಬಳಿಕ 1 ವಾರ ನನಗೆ ಸಮಯ ಕೇಳಿದ್ದರು. ಬಳಿಕ ಅವರು ನನ್ನನ್ನು ಒಪ್ಪಿಕೊಂಡರು. ಆದರೆ, ಇಬ್ಬರ ಪ್ರೀತಿಗೆ ಎರಡೂ ಮನೆಯವರಿಂದ ವಿರೋಧವಿತ್ತು. ಎಲ್ಲಾ ವಿರೋಧಗಳ ನಡುವೆಯೇ ನಾವಿಬ್ಬರು ಮದುವೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾಳೆ.

ಅಲ್ಲದೇ ಮದುವೆಯಾದ ನಂತರ ಅಮೆಜಾನ್ ಎಫ್​ಬಿಎ ಟ್ರೈನಿಂಗ್ ಪಡೆದುಕೊಂಡು, ಇದೀಗ ಉತ್ತಮ ಸಂಪಾದನೆ ಮಾಡುತ್ತಿದ್ದೇವೆ. ಮುಂದೆ ಒಳ್ಳೆ ಆದಾಯ ಸಂಪಾದನೆಯೊಂದಿಗೆ ನಾವಿಬ್ಬರು ಸುಖದಿಂದ ಜೀವ ಸಾಗಿಸುತ್ತಿದ್ದೇವೆ ಎಂದಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ