ತಾಂಜಾನಿಯಾದಲ್ಲಿ ರಸ್ತೆ ಬಂದ್! ಹೇಗೆ ದಾಟ್ಕೊಳ್ತೀರೋ ದಾಟ್ಕೊಳ್ಳಿ ನೋಡೋಣ

Roadblock in Tanzania : ನೀವು ಬರ್ತೀರಾ ಅಂತ ನಾವು ರಸ್ತೆಬದಿ ನಿಲ್ಲಬೇಕಾ, ಅಸಾಧ್ಯ! ನಾವ್ಯಾರಂತ ಗೊತ್ತಲ್ಲ? ನಮ್ಮ ನಿದ್ದೆ ಮುಗಿಯೋವರೆಗೂ ಕಾಯ್ರಿ, ಜಗತ್ತೇನೂ ಮುಳುಗಿ ಹೋಗಲ್ಲ ಅಂತಿವೆ ಈ ಸಿಂಹಗಳು. ಅಪರೂಪದ ಈ ವಿಡಿಯೋ ನೋಡಿ.

ತಾಂಜಾನಿಯಾದಲ್ಲಿ ರಸ್ತೆ ಬಂದ್! ಹೇಗೆ ದಾಟ್ಕೊಳ್ತೀರೋ ದಾಟ್ಕೊಳ್ಳಿ ನೋಡೋಣ
Lions snuggle in the middle of the road cause a roadblock
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 01, 2022 | 5:32 PM

Viral Video : ಎರಡು ಸಿಂಹಗಳು ಆರಾಮಾಗಿ ರಸ್ತೆ ಮೇಲೆ ಮಲಗಿ ವಿರಮಿಸುತ್ತಿವೆ. ಇನ್ನೊಂದು ಸಿಂಹ ಎಂಥ ಲೀಲಾಜಾಲವಾಗಿ ಬಂದು ಅವುಗಳೊಂದಿಗೆ ಮಲಗುತ್ತದೆ ನೋಡಿ. ಜೀಪುಗಳಲ್ಲಿರುವ ಮಂದಿಗೆ ಇಂಥ ರೋಚಕವಾದ ದೃಶ್ಯ ನೋಡುವುದು ಹಬ್ಬವಲ್ಲದೆ ಇನ್ನೇನು!? ತುಪ್ಪವು ತಟ್ಟೆಗೇ ಬಂದು ಬಿದ್ದಂತೆ. ವನ್ಯಜೀವಿ ಪ್ರಿಯರಾದ ನೀವು ಇಂಥ ವಿಡಿಯೋಗಳಿಗಾಗಿ ಕಾಯುತ್ತಿರುತ್ತೀರಿ ಎಂದು ನಮಗೆ ಗೊತ್ತು! ನೋಡಿ ಹೇಗಿದೆ ಹೇಳಿ.

ಈ ವಿಡಿಯೋ ಅನ್ನು @buitengebieden ಎಂಬ ಖಾತೆಯು ಟ್ವೀಟ್ ಮಾಡಿದೆ. ಮಣ್ಣಿನ ರಸ್ತೆಯಲ್ಲಿ ಥಣ್ಣಗೆ ತಮ್ಮ ಪಾಡಿಗೆ ಮಲಗಿವೆ ಈ ಸಿಂಹಗಳು. ಪ್ರವಾಸಿಗರು ಅಚ್ಚರಿ ಭಯ ಖುಷಿಯಿಂದ ಸ್ವಲ್ಪೇ ದೂರದಲ್ಲಿ ನಿಂತು ನೋಡುತ್ತಿದ್ದಾರೆ. ಇದನ್ನು ತಾಂಜಾನಿಯಾದಲ್ಲಿ ಚಿತ್ರೀಕರಿಸಲಾಗಿದೆ. ಈಗಾಗಲೇ ಈ ವಿಡಿಯೋ 11 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಇದು ಪಡೆದುಕೊಂಡಿದೆ. ನೆಟ್ಟಿಗರು ಇದನ್ನು ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ.

ಎಂಥ ಅದ್ಭುತ ದೃಶ್ಯ ಇದು. ಈ ತನಕ ನಾನು ನೋಡಿರಲೇ ಇಲ್ಲ ಎಂದಿದ್ದಾರೆ ಒಬ್ಬರು. ಅಮೆರಿಕಾ, ಆಫ್ರಿಕಾ ಮುಂತಾದೆಡೆ ರಸ್ತೆಗಳ ಮೇಲೆ ಹೀಗೆ ಮಲಗಿ ವಿರಮಿಸುತ್ತಿರುವ ಸಿಂಹಗಳ ಫೋಟೋ, ವಿಡಿಯೋಗಳನ್ನು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

ಹೀಗೆ ಜಗತ್ತಿನ ಪರಿವೆ ಇಲ್ಲದೆ ವಿರಮಿಸಲು ಎಲ್ಲರಿಗೂ ಸಾಧ್ಯವಾಗುವುದೆ? ್

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:29 pm, Tue, 1 November 22

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ