ಇಯರ್ಬಡ್ ಕದ್ದೊಯ್ದ ಹಳದಿಹಕ್ಕಿಯ ಮೇಲೆ ಈಕೆ ಕಂಪ್ಲೇಂಟ್ ಕೊಡುವಳೇ?
Earbud : ಅಕ್ಕೋವ್, ಬಾಳೆಅಣ್ಣಲ್ಲ ಕಲ್ಲಂಗಡಿ ಆಸೆ ತೋರ್ಸಿದ್ರೂ ನಾ ನಿನ್ನ ಇಯರ್ಬಡ್ ಕೊಡಾಕಿಲ್ಲ. ಯಾಕ್ಹೇಳು? ನಿನ್ನಂಗೆ ನಾನು ಆನ್ಲೈನ್ ಆರ್ಡರ್ ಮಾಡಕ್ಕಾಗಲ್ಲ. ಅಂಗಾಗಿ ನೀನು ಇದನ್ನಾ ನಂಗೆ ಗಿಪ್ಟ್ ಕೊಟ್ಟಿದೀಯಾ ಅನ್ಕಂಬಿಡು.
Viral Video : ಯಾರಿಗೇ ಆಗಲಿ ಹೊಸ ವಸ್ತು ಎಂದರೆ ಕುತೂಹಲವೇ. ಇದಕ್ಕೆ ಪ್ರಾಣಿ ಪಕ್ಷಿಗಳೂ ಹೊರತಾಗಿಲ್ಲ. ಈ ವಿಷಯದಲ್ಲಿ ಮಕ್ಕಳೂ ಒಂದೇ ಪ್ರಾಣಿ ಪಕ್ಷಿಗಳೂ ಒಂದೇ. ಆತನಕ ನೋಡಿರದ ವಸ್ತುಗಳನ್ನು ಮಕ್ಕಳು ನೋಡಿದಾಗ ಹೇಗೆ ಅವರಲ್ಲೊಂದು ಸಂಚಲನ ಮೂಡುತ್ತದೆಯೋ ಮತ್ತು ಅದನ್ನು ತಮ್ಮದಾಗಿಸಿಕೊಳ್ಳಲು ಹೇಗೆ ಹವಣಿಸುತ್ತಾರೋ ಹಾಗೆಯೇ ಪ್ರಾಣಿ ಪಕ್ಷಿಗಳೂ ವರ್ತಿಸುತ್ತವೆ. ಈ ಯುವತಿ ಏನೋ ಹಾಡು ಕೇಳುತ್ತ ತನ್ನ ಜಗತ್ತಿನಲ್ಲಿ ತಾನು ಮುಳುಗಿದ್ದಾಳೆ. ಆದರೆ ಈ ಹಳದಿಹಕ್ಕಿಗೆ ಅವಳ ಕಿವಿಯಲ್ಲಿರುವ ಇಯರ್ಬಡ್ ಮೇಲೆ ಕಣ್ಣುಬಿದ್ದಿದೆ. ಬಿಟ್ಟೀತಾ?
Sound Police from AnimalsBeingJerks
ಇದನ್ನೂ ಓದಿ
ಮೊದಲು ಈ ವಿಡಿಯೋ ಕಾಣಿಸಿಕೊಂಡಿದ್ದು ಟಿಕ್ಟಾಕ್ನಲ್ಲಿ. ಆನಂತರ ರೆಡ್ಇಟ್ನಲ್ಲಿ ಮರುಹಂಚಿಕೆ ಮಾಡಿಕೊಂಡಾಗ ಹೆಚ್ಚು ಜನರ ಕಣ್ಣಿಗೆ ಬಿದ್ದಿದೆ. ಹೀಗೆ ಅವಳ ಕಿವಿಯಿಂದ ಇಯರ್ಬಡ್ ಕದ್ದುಕೊಂಡು ಹೋಗುವ ಹಕ್ಕಿ ಆಕಾಶದೆಡೆ ಹಾರುತ್ತದೆ. ಎಲೆಕ್ಟ್ರಿಕ್ ತಂತಿಯ ಮೇಲೆ ಕುಳಿತುಕೊಳ್ಳುತ್ತದೆ. ನಂತರ ಮರಕ್ಕೆ ಹಾರುತ್ತದೆ. ಕೊನೆಗೆ ನೆಲದೆಡೆ ಬರುತ್ತದೆ. ಅದನ್ನು ವಾಪಾಸ್ ಇಸಿದುಕೊಳ್ಳಲು ಈ ಯುವತಿ ಬಾಳೆಹಣ್ಣಿನ ಆಸೆ ತೋರಿಸುತ್ತಾಳೆ. ಜಾಣ ಹಕ್ಕಿಗೆ ಗೊತ್ತು, ಗಿಡಗಳಲ್ಲಿ ಬಾಳೆಹಣ್ಣು ತಿನ್ನಬಹುದು. ಆದರೆ ಆನ್ಲೈನ್ನಲ್ಲಿ ಆರ್ಡರ್ ಮಾಡಿ ತಾನು ಇಯರ್ಬಡ್ ಖರೀದಿಸಲು ಸಾಧ್ಯವಿಲ್ಲವೆಂದು. ಹಾಗಾಗಿ ಆಕೆಗೆ ಅದನ್ನು ಅದು ಮರಳಿಸುವುದಿಲ್ಲ.
ಮೂರುದಿನಗಳ ಹಿಂದೆ ಇದನ್ನು ಪೋಸ್ಟ್ ಮಾಡಲಾಗಿದೆ. ಈತನಕ 650ಜನರು ವೋಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸುತ್ತಿದ್ದಾರೆ.
ಇಯರ್ಬಡ್ಗೆ ಬದಲಾಗಿ ಬಾಳೆಹಣ್ಣು, ಪಕ್ಷಿಗಳಿಗೆ ಬಾಳೆಹಣ್ಣು ಇಷ್ಟವಾ? ಇಲ್ಲವೆನ್ನಿಸುತ್ತೆ ಎಂದಿದ್ದಾರೆ ಒಬ್ಬರು. ಸುಮ್ಮನಿದ್ದೆರೆ ಹಕ್ಕಿ ವಾಪಸ್ ಬರುತ್ತಿತ್ತು ತಾನಾಗಿಯೇ. ಈ ಬಾಳೆಹಣ್ಣಿನ ತಂತ್ರ ಮಾಡಿ ಎಲ್ಲ ಕೆಟ್ಟುಹೋಯಿತು ಎಂದಿದ್ದಾರೆ ಇನ್ನೊಬ್ಬರು. ಎಂಥ ನಯವಾದ ಮತ್ತ ಒಂದೇ ಬಣ್ಣದ ಗರಿಗಳನ್ನು ಹೊಂದಿದೆ ಈ ಹಕ್ಕಿ, ರಬ್ಬರ್ನಿಂದ ಮಾಡಿದಂತೆ ಅನ್ನಿಸುತ್ತೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:34 am, Tue, 1 November 22