‘ವಿಕಿ’ಪೀಡಿಯಾದ ಮುದ್ದುಕುಮಾರ್ ರಮ್ಮಿ ಆಡಿ ಬೀದಿಗೆ ಬರುವ ಮೊದಲಿನ ಕಥೆ ಇದು

Kannada Reels : ‘ಮಲ್ಲೇಶ್ ಪಾಳ್ಯದ ಹುಡುಗರ ಪೀಕಲಾಟಗಳು, ಪ್ರಮೀಳಾ ಆಂಟಿಯ ಟಿಪ್ಸುಗಳು, ಸುಶೀಲಾಳ ನೋವಿನ ಸ್ವಗತಗಳು, ಮಾಲತಿಯ ಗಡಿಬಿಡಿ, ಇಂದಿನ ರಿಪೋರ್ಟರ್ಸ್​, ಕ್ರಿಪ್ಪೋಕರೆನ್ಸಿ.. ಏನುಂಟು, ಏನಿಲ್ಲ ಈ ಮುದ್ದುಕುಮಾರರ ಕಂಟೆಂಟ್​ನಲ್ಲಿ.

‘ವಿಕಿ’ಪೀಡಿಯಾದ ಮುದ್ದುಕುಮಾರ್ ರಮ್ಮಿ ಆಡಿ ಬೀದಿಗೆ ಬರುವ ಮೊದಲಿನ ಕಥೆ ಇದು
ಕಲಾವಿದರಾದ ವಿಕಾಸ್ (ಮುದ್ದುಕುಮಾರ್) ಶಯನ ಭಟ್ಟಾಚಾರ್ಯ ಮತ್ತು ಅಮಿತ್ ಚಿಟ್ಟೆ
Follow us
ಶ್ರೀದೇವಿ ಕಳಸದ
|

Updated on:Nov 01, 2022 | 5:55 PM

Viral Video : ಈವತ್ತು ಸಾಮಾಜಿಕ ಜಾಲತಾಣದಲ್ಲಿ ಮನೋರಂಜನೆಗೆ ಸಾಕಷ್ಟು ಸರಕಿನ ಹರಿವಿದೆ. ಹಾಗಾಗಿ ಉತ್ತಮ ಅಭಿರುಚಿಯಿಂದ ಕೂಡಿದ ಪ್ರಸ್ತುತಿಯನ್ನು ಹುಡುಕಿ ನೋಡಬೇಕಾದಂಥ ಅನಿವಾರ್ಯತೆ ಸೃಷ್ಟಿಯಾಗಿದೆ. ಹರಿವಿನಲ್ಲಿ ಹಗೂರವಾದದ್ದು ಬೇಗನೇ ತೇಲಿಬಂದುಬಿಡುತ್ತದೆ. ಆದರೆ ಗಟ್ಟಿಯಾಗಿದ್ದು ನಿಧಾನ. ಏಕೆಂದರೆ ನಿಧಾನವೇ ಅದರ ಸ್ವಭಾವ; ಅದು ತನ್ನದೇ ಆದ ಶ್ರಮ, ತ್ಯಾಗ, ಪರಿಶ್ರಮದಿಂದ ಕೂಡಿದ ಅನುಭವವನ್ನು ನೆಚ್ಚಿಕೊಂಡಿರುತ್ತದೆ ಮತ್ತು ಅಧ್ಯಯನವನ್ನೂ. ಆದರೆ ಒಮ್ಮೆ ಅದಕ್ಕೊಂದು ಸೂಕ್ತ ವೇದಿಕೆ ಸಿಕ್ಕಿತೋ ಆ ಪ್ರಯಾಣದ ಸೊಬಗೇ ಬೇರೆ. ಈಗ ಇಂಥ ಸೊಬಗಿನ ಪ್ರಯಾಣದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ ‘ವಿಕಿ’ಪೀಡಿಯಾ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ರಂಗಭೂಮಿ ಕಲಾವಿದರಾದ ವಿಕಾಸ್, ಅಮಿತ್ ಚಿಟ್ಟೆ, ಶಾಯನ್​ ಭಟ್ಟಾಚಾರ್ಯ ಈ ಮೂವರು ಸೇರಿ ರೂಪಿಸಿದ ಪುಟವಿದು. ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಈ ಮೂವರು ಕಾಮಿಡಿ ರೀಲ್ಸ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ಅಲ್ಲ ನಿಜಜೀವನದಲ್ಲಿಯೂ ವಿಕಾಸ್ ಅವರನ್ನು ಜನ ಮುದ್ದುಕುಮಾರ್​ ಎಂದೇ ಗುರುತಿಸಲಾರಂಭಿಸಿದ್ದಾರೆ. ರಮ್ಮಿ ರೀಲ್ಸ್​ಗೆ ಸಂಬಂಧಿಸಿದಂತೆ ವಿಕಾಸ್​, ‘ನಿಜ ಜೀವನದಲ್ಲಿ ರಮ್ಮಿ ಆಡಿ ಆಡಿ ಸೋತು ಕಂಗಾಲಾಗಿದ್ದೇನೆ ಎಂದೇ ಜನ ಭಾವಿಸಿದ್ದಾರೆ. ಈಗಲೂ ರಸ್ತೆ ಮೇಲೆ ಹೊರಟಾಗ ಮುದ್ದುಕುಮಾರ್ ಎಂದೇ ಕರೆಯುತ್ತಾರೆ. ಪ್ರತಿಯೊಬ್ಬರಿಗೂ ಅದು ಕಾಮಿಡಿ ರೀಲ್ಸ್​ ಎಂದು ಹೇಳಿಹೇಳಿ ಸಾಕಾಗಿದೆ’ ಎನ್ನುತ್ತಾರೆ.

Vicky Pedia ಇದು ಮುದ್ದುಕುಮಾರರ ಫೇಸ್​ಬುಕ್​ ಪುಟ. ಬ್ಲ್ಯಾಕ್​ ಟೀಶರ್ಟ್​ ಮತ್ತು ಹವಾಯಿ ಚಪ್ಪಲಿ ಇದು ಅವರ ಬಯೋ. ಉಳಿದಂತೆ ಅವರ ವ್ಯಕ್ತಿತ್ವದ ಪರಿಚಯವನ್ನು ಅವರ ರೀಲ್ಸ್​ಗಳೇ ಹೇಳುತ್ತವೆ. ಈ ‘ವಿಕಿ’ಪೀಡಿಯಾದ ಮುದ್ದುಕುಮಾರರ ನಿಜವಾದ ಹೆಸರು ವಿಕಾಸ್. ಚಿತ್ರದುರ್ಗದ ಜವಾಹರ ನವೋದರ ವಿದ್ಯಾಲಯದಲ್ಲಿ ಇವರ ಶಾಲಾಭ್ಯಾಸ. ನಂತರ ಎಂಜಿನಿಯರಿಂಗ್​ನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ. ದೆಹಲಿಯ ಅಶೋಕ ವಿಶ್ವವಿದ್ಯಾಲಯದಿಂದ ಲಿಬರಲ್​ ಆರ್ಟ್ಸ್​ನಲ್ಲಿ ಸ್ನಾತಕೋತ್ತರ ಪದವಿ. 2013-14ರ ತನಕ ಸಾಫ್ಟ್​ವೇರ್ ಎಂಜಿನಿಯರ್ ಉದ್ಯೋಗ. ಆದರೆ ಅವರನ್ನು ಬಹುವಾಗಿ ಸೆಳೆದಿದ್ದು ರಂಗಭೂಮಿ. 15 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಇವರು 2010ರಿಂದಲೇ ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡರು. ಆರು ವರ್ಷಗಳ ಹಿಂದೆ ಅಮಿತ್ ಚಿಟ್ಟೆ ಮತ್ತು ಶಾಯನ್ ಭಟ್ಟಾಚಾರ್ಯರೊಂದಿಗೆ ‘ಇಂಪ್ರೋ​ ಟ್ರೈಬ್’​ ಎಂಬ ತಂಡವನ್ನು ಕಟ್ಟಿಕೊಂಡರು;  ಮ್ಯಾಡ್​ ಆ್ಯಡ್ಸ್​, ಸ್ಟ್ರೀಟ್ ಪ್ಲೇ, ರ್ಯಾಡಿಕಲ್​ ಮೈಮ್​, ಬೀಟ್​ಬಾಕ್ಸಿಂಗ್​, ಸ್ಟ್ಯಾಂಡ್​ಅಪ್​ ಕಾಮಿಡಿ, ಇಂಪ್ರೋ ಪ್ರದರ್ಶನಗಳನ್ನು ಪ್ರಸ್ತುತ ಪಡಿಸಿದರು. 2020ರಲ್ಲಿ ದುಬೈನಲ್ಲಿ ಕೂಡ ಪ್ರದರ್ಶನ ನೀಡಿದರು.

ಉಡುಪಿಯ ವನಿತಾ ಡಿ.ಎಸ್. ಮುದ್ದುಕುಮಾರವರ ಅಭಿಮಾನಿಗಳಲ್ಲೊಬ್ಬರು. ‘ಸಾಮಾಜಿಕ ಜವಾಬ್ದಾರಿಯನ್ನು ಮರೆತು ಸೆಲೆಬ್ರಿಟಿಗಳೇ ಖುದ್ದಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಕಾಲದಲ್ಲಿ ನಾವಿದ್ದೇವೆ. ಆದರೆ ಮುದ್ದುಕುಮಾರ್​ ಮಾಡಿದ ರಮ್ಮಿ ಗೇಮಿನ ರೀಲ್ ಮಾತ್ರ ಅದ್ಭುತ. ಸಮಾಜದ ಅಂಕುಡೊಂಕುಗಳನ್ನು ಹಾಸ್ಯಭರಿತ ಮೊನಚು ಬರಹಗಳಿಂದ ಚುಚ್ಚುತ್ತಿದ್ದ ಕೈಲಾಸಂ, ಬೀಚಿ, ವೈಎನ್ಕೆಯವರು ಈ ಮುದ್ದುಕುಮಾರನ ಕಂಟೆಂಟುಗಳಲ್ಲಿ ನುಸುಳಿಹೋಗುತ್ತಿರುತ್ತಾರೇನೋ ಅನ್ನಿಸುವುದುಂಟು. ಅವರ ಕ್ರಿಯಾಶೀಲತೆ,  ಅಭಿನಯ ಚತುರತೆ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸೂಚ್ಯವಾಗಿ ಯುವಪೀಳಿಗೆಯನ್ನು ಎಚ್ಚರಿಸುವಲ್ಲಿ ಸಣ್ಣಗೆ ಕಿವಿಮಾತು, ವೈಚಾರಿಕ ಚಿಂತನೆಗಳು ಗಮನಾರ್ಹ. ಈಗಿನ ಟಿವಿಯ ಹಾಸ್ಯ ಕಾರ್ಯಕ್ರಮಗಳು ಜನಮಾನಸದಿಂದ ಶುದ್ಧ ಹಾಸ್ಯವನ್ನೇ ಮರೆಯಿಸುತ್ತಿವೆ. ಇಂಥ ಹೊತ್ತಿನಲ್ಲಿ ಈ ತಂಡದ ರೀಲ್​ಗಳು ನಿತ್ಯದುಗುಡವನ್ನು ಮರೆಸುತ್ತಿವೆ ಎಂದರೆ ಅತಿಶಯೋಕ್ತಿಯಾಗಲಾರದು’ ಎನ್ನುವುದು ವನಿತಾ ಅವರ ಅಭಿಪ್ರಾಯ.

ಕೊವಿಡ್​ ಅಪ್ಪಳಿಸುವತನಕ ಸಾರ್ವಜನಿಕ  ಪ್ರದರ್ಶನಗಳಲ್ಲಿ ಮುಳುಗಿದ್ದ ವಿಕಾಸ್​ ಮತ್ತು ತಂಡ ಆನಂತರ ಸಾಮಾಜಿಕ ಜಾಲತಾಣವನ್ನು ಅವಲಂಬಿಸುವುದು ಅನಿವಾರ್ಯವಾಯಿತು ಮತ್ತು ಇದು ಇನ್ನೊಂದು ರೀತಿಯ ಐಡೆಂಟಿಟಿಯನ್ನೂ ಈ ತಂಡಕ್ಕೆ ಕಟ್ಟಿಕೊಟ್ಟಿತು. ‘ಮನರಂಜನೆ’ಯನ್ನು ಉತ್ತಮ ಅಭಿರುಚಿಯೊಂದಿಗೆ ಹೇಗೆ ಕಟ್ಟಿಕೊಡಬೇಕು ಎನ್ನುವುದರತ್ತಲೇ ನಾನು ಸದಾ ಆಲೋಚಿಸುತ್ತಿರುತ್ತೇನೆ. ಆ ಪ್ರಯತ್ನದಲ್ಲಿ ಇಂಥ ರಿಲ್ಸ್​ ಮಾಡಿ ಸೋಶಿಯಲ್ ಮೀಡಿಯಾಗೆ ಅಪ್​ಲೋಡ್ ಮಾಡುತ್ತಿರುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಲಾಪ್ರಕಾರಗಳಲ್ಲಿ ತೊಡಗಿಕೊಳ್ಳುವ ಆಶಯ ಖಂಡಿತ ಇದೆ. ಆದರೆ ಅದು ಜನರಿಗೂ ಇಷ್ಟವಾಗಬೇಕು ಹಾಗೆಯೇ ನನಗೂ. ಅಂದಾಗ ಮಾತ್ರ ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಕಲಾಪ್ರಕಾರವು ಔನತ್ಯ ಹೊಂದುತ್ತದೆ’ ಎನ್ನುತ್ತಾರೆ ವಿಕಾಸ್.

ಮುದ್ದುಕುಮಾರ್​ ಅಲ್ಲಲ್ಲ ವಿಕಾಸ್​ ಮತ್ತವರ ತಂಡ ಮಾಡುತ್ತಿರುವ ಮುಂದಿನ ರೀಲ್ಸ್​ ಯಾವ ವಿಷಯದ ಮೇಲೆ? ಈ ನಿಮ್ಮ ಕುತೂಹಲದಲ್ಲಿ ನಮ್ಮ ಕಣ್ಣುಗಳೂ ಸೇರಿವೆ. ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.

ಮತ್ತಷ್ಟೂ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 3:49 pm, Tue, 1 November 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ