Viral News: ಕಾರು ಓಡಿಸುವ ಕ್ರೇಜ್ ಯುವಕರಲ್ಲಿ ಸಾಮಾನ್ಯವಾಗಿರುತ್ತದೆ. ಅದರಲ್ಲೂ ದುಬಾರಿ ಕಾರು, ಸ್ಪೋರ್ಟ್ಸ್ ಕಾರುಗಳನ್ನ ಚಲಿಸಲು ಯುವಕರು ಹಾತೊರೆಯುತ್ತಾರೆ. ಹೊಸ ಕಾರುಗಳ ಮಾಡೆಲ್ನಿಂದ ಎಂಜಿನ್ ಪವರ್, ಸ್ಪೀಡ್, ಟಾರ್ಕ್ ಹೀಗೆ ಇಂಚಿಂಚು ಮಾಹಿತಿಯನ್ನು ತಿಳಿದುಕೊಂಡಿರುತ್ತಾರೆ. ಆದರೆ ಇಲ್ಲೊಬ್ಬ 3 ವರ್ಷದ ಬಾಲಕ ಫೆರಾರಿ ಕಾರನ್ನು ಓಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಹೌದು.. ಅಚ್ಚರಿ ಅನ್ನಿಸಿದರೂ ಸತ್ಯ. ಟರ್ಕಿ ಮೂಲದ ಝೈನ್ ಸೊಫುಗ್ಲು (Zayn Sofuoglu) ಎನ್ನುವ ಪುಟ್ಟ ಬಾಲಕ ಫೆರಾರಿ SF90 ಸ್ಟ್ರಾಡೇಲ್ (Ferrari SF90 S stradale) ಸ್ಪೋರ್ಟ್ಸ್ ಕಾರನ್ನು ಚಲಾಯಿಸಿ ಗಮನಸೆಳೆದಿದ್ದಾನೆ.
V8 ಎಂಜಿನ್ ಹೊಂದಿರುವ ಈ ಕಾರು 2.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ. ಕಾರಿನ ಬಗ್ಗೆ ಎಷ್ಟೇ ಆಸಕ್ತಿ ಇದ್ದರು ಭಾರತದಲ್ಲಿ 16 ರಿಂದ 18 ವರ್ಷ ತುಂಬುವಾಗ ಮಕ್ಕಳು ಕಾರನ್ನು ಕಲಿಯುವ ಪ್ರಾರಂಭಿಸುತ್ತಾರೆ. ಇನ್ನು ಕಾರು ಓಡಿಸುವ ಕನಿಷ್ಟ ವಯೋಮಿತಿ 18 ವರ್ಷ. ಆದ್ರೆ ಇಲ್ಲೊಂದು ವಿಡಿಯೋ ನೆಟ್ಟಿಗರನ್ನು ಮುಖಸ್ಥಬ್ಧಗೊಳಿಸಿದೆ.
ಈ ವಿಡಿಯೋದಲ್ಲಿ, ಮೂರು ವರ್ಷದ ಹುಡುಗ ಸಂಪೂರ್ಣವಾಗಿ ಕುಶಲತೆಯಿಂದ 769-ಎಚ್‌ಪಿ ಫೆರಾರಿ SF90 ಸ್ಟ್ರಾಡೇಲ್ ಸ್ಪೋರ್ಟ್ಸ್ ಕಾರನ್ನು ಓಡಿಸಿದ್ದಾನೆ. ಫೆರಾರಿ SF90 ಸ್ಟ್ರಾಡೇಲ್‌ನ ಭಾರತದಲ್ಲಿ 7.50 ಕೋಟಿ ರೂ. ಬೆಲೆ ಬಾಳುತ್ತದೆ.
ಪವರ್-ಪ್ಯಾಕ್ಡ್ ಸ್ಪೋರ್ಟ್ಸ್ ಕಾರನ್ನು ಚಾಲನೆ ಮಾಡುವುದರ ಜೊತೆಗೆ, ಝೈನ್ ಗೇರ್‌ಲೆಸ್ ದ್ವಿಚಕ್ರ ವಾಹನಗಳು, ATVಗಳು, ಸ್ಟೀಮರ್‌ಗಳು ಮತ್ತು ಹಲವಾರು ವಾಹನಗಳನ್ನು ಓಡಿಸುತ್ತಾನೆ. ಇಂತಹ ಒಂದು ಅದ್ಬುತ ಪ್ರತಿಭೆ ಈ ಪುಟ್ಟ ಚಾಲಕನಿಗೆ ರಕ್ತದಲ್ಲೇ ಬಂದಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಝೈನ್ ಸೊಫುಗ್ಲು ಮೋಟಾರ್‌ಸೈಕಲ್ ಸೂಪರ್ ಸ್ಪೋರ್ಟ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಐದು ಬಾರಿ ವಿಜೇತರಾದ ಕೆನಾನ್ ಸೊಫುಗ್ಲು ಅವರ ಮಗ.
ಇದನ್ನೂ ಓದಿ: ಮೂರು ಕೊಂಬುಗಳನ್ನು ಹೊಂದಿರುವ ಹಸುವನ್ನು ಎಂದಾದರೂ ನೋಡಿದ್ದೀರಾ! ವಿಡಿಯೋ ವೈರಲ್
ಫೆರಾರಿ ಸ್ಪೋರ್ಟ್ಸ್ ಕಾರನ್ನು ಚಲಾಯಿಸುತ್ತಿರುವ ವಿಡಿಯೋವನ್ನು ಝೈನ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಝಯ್ ತನ್ನ ಪಾದಗಳನ್ನು ಆಕ್ಸಿಲೇಟರ್ ಮತ್ತು ಬ್ರೇಕ್ ಮೇಲೆ ಇಡಲು ಸಾಧ್ಯವಾಗುತ್ತಿಲ್ಲ ಎಂಬುದು ಸುಲಭವಾಗಿ ಗೋಚರಿಸುತ್ತದೆ. ಅದಲ್ಲದೆ, 3 ವರ್ಷದ ಮಗುವಿಗೆ ಕಾರಿನ ಡ್ಯಾಶ್‌ಬೋರ್ಡ್‌ನ ಮೇಲೆ ಏನನ್ನೂ ನೋಡಲಾಗುವುದಿಲ್ಲ. ಎಲ್ಲಿಗೆ ಚಾಲನೆ ಮಾಡುತ್ತಿದ್ದಾನೆ ಎಂಬುದೂ ಸಹ ಈ ಬಾಲಕನಿಗೆ ಕಾಣುವುದಿಲ್ಲ. ಆದರೆ ತನ್ನ ಕಾರು ಯಾವ ಕಡೆ ಸಾಗುತ್ತಿದೆ ಎಂದು ನೋಡಲು ಈ ಪುಟ್ಟ ಬಾಲಕ ಕಾರಿನ ಟಾಪ್ ಮೇಲೆ ಇರಿಸಲಾದ ಕ್ಯಾಮರಾ ಸೆರೆ ಹಿಡಿಯುವ ದೃಶ್ಯದ ಫೀಡ್ ಅನ್ನು ತೋರಿಸುವ ಮಾನಿಟರ್ ಅನ್ನು ತನ್ನ ಬಳಿ ಇರಿಸಿಕೊಂಡು ಕಾರನ್ನು ಚಲಾಯಿಸುತ್ತಾನೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ