AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral- ಮೂರು ಕೊಂಬುಗಳನ್ನು ಹೊಂದಿರುವ ಹಸುವನ್ನು ಎಂದಾದರೂ ನೋಡಿದ್ದೀರಾ! ವಿಡಿಯೋ ವೈರಲ್

Three Horned Cow: ಮೂರು ಕೊಂಬಿನ ಹಸುವನ್ನು ತೋರಿಸುವ ವೀಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಇದೀಗ ನೆಟ್ಟಿಗರು ಶಾಕ್ ಆಗಿದ್ದಾರೆ.

Viral- ಮೂರು ಕೊಂಬುಗಳನ್ನು ಹೊಂದಿರುವ ಹಸುವನ್ನು ಎಂದಾದರೂ ನೋಡಿದ್ದೀರಾ! ವಿಡಿಯೋ ವೈರಲ್
ಮೂರು ಕೊಂಬಿನ ಹಸು Image Credit source: Twitter
TV9 Web
| Updated By: Digi Tech Desk|

Updated on: Feb 12, 2023 | 1:37 PM

Share

Viral News: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಚಿತ್ರ ಫೋಟೋ, ವಿಡಿಯೋಗಳು ವೈರಲ್ ಆಗುತ್ತವೆ. ಅದೇ ರೀತಿ ಇದೀಗ ಮೂರುಕೊಂಬಿನ ಹಿಸುವಿನ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ನೀವು ಎರಡು ಕೊಂಬಿನ ಹಸುವನ್ನು ನೋಡಿರುವುದು ಸಹಜ ಸಂಗತಿ, ಆದ್ರೆ ಇಲ್ಲಿದೆ ನೋಡಿ ಮೂರು ಕೊಂಬಿನ ಹಸು. ಭಾರತದಲ್ಲಿ ಹಸುಗಳು ಸಾಮಾನ್ಯವಾಗಿ ಎಲ್ಲೆಡೆ ಕಾಣ ಸಿಗುತ್ತದೆ. ಹಸು ಒಂದು ಸಾಕು ಪ್ರಾಣಿಯಾಗಿದ್ದು ಬಹಳ ಜನ ಇದರ ಸುತ್ತವೆ ತಮ್ಮ ವೃತ್ತಿಯನ್ನು ಕಂಡುಕೊಂಡಿದ್ದಾರೆ. ಆದರೆ ಈ ಮೂರು ಕೊಂಬಿನ ಹಸು ಮೈದಾನ ಒಂದರಲ್ಲಿ ಆರಾಮವಾಗಿ ಓಡಾಡುತ್ತಿದ್ದು, ಯಾರು ಈ ವಿಶಿಷ್ಟ ಹಸುವಿನ ಮಾಲೀಕ ಎಂಬ ಕುತೂಹಲ ಸೃಷ್ಟಿಯಾಗಿದೆ.

“ಮೂರು ಕೊಂಬುಗಳನ್ನು ಹೊಂದಿರುವ ಹಸುವನ್ನು ಎಂದಾದರೂ ನೋಡಿದ್ದೀರಾ?” ಎಂಬ ಕ್ಯಾಪ್ಶನ್ ನೊಂದಿಗೆ ವಿಚಿತ್ರ ವಿಡಿಯೋ ಒಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ತನ್ನ ಮೂರು ದೊಡ್ಡ ಕೊಂಬುಗಳನ್ನು ತೋರಿಸುತ್ತಾ ಹಸು ಹೊಲದಲ್ಲಿ ತಿರುಗಾಡುವುದನ್ನು ನೋಡಬಹುದು. ಹಿಂದೂಸ್ತಾನ್ ಟೈಮ್ಸ್‌ನ 2020 ರ ಲೇಖನದಲ್ಲಿ ಇದೇ ವೀಡಿಯೊವನ್ನು ಬಳಸಿಕೊಳ್ಳಲಾಗಿದೆ. ಆ ಲೇಖನದ ಪ್ರಕಾರ ಇದು ಅಂಕೋಲೆ ತಳಿಯ ಹಸು ಎಂಬುದು ತಿಳಿಯುತ್ತದೆ.

ಇದನ್ನೂ ಓದಿ: ಧಾರೆ ಸೀರೆ, ಮೈ ತುಂಬಾ ಆಭರಣ ಧರಿಸಿ ಪರೀಕ್ಷೆ ಬರೆಯಲು ಬಂದ ಮಧುಮಗಳ ವಿಡಿಯೋ ಇಲ್ಲಿದೆ ನೋಡಿ

ಅಂಕೋಲೆ ಹಸುಗಳು (Ankole Cows) ಉದ್ದವಾದ ಬಿಳಿ ಕೊಂಬುಗಳನ್ನು ಹೊಂದಿರುತ್ತದೆ. ಆದರೆ ಈ ವಿಶಿಷ್ಟ ಗೋವು ತನ್ನ ತಲೆಯ ಮೇಲಿನ ಮೂರನೇ ಕೊಂಬಿನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನವನ್ನು ಸೆಳೆದಿದೆ. ಇದೇ ವಿಡಿಯೋವನ್ನು IFS ಸುಶಾಂತ್ ನಂದಾ (Sushant Nanda IFS) ಅವರು ಮೇ 2020 ರಲ್ಲಿ ಹಂಚಿಕೊಂಡಿದ್ದರು, ಆದ ಈ ವಿಡಿಯೋ 13 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 1000 ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದುಕೊಂಡಿತ್ತು. ಕಾಮೆಂಟ್‌ಗಳ ಮಹಾಪೂರವೇ ಸುರಿದಿತ್ತು. ಈ ವಿಡಿಯೋ ನೋಡಿ ಒಬ್ಬ “ಇದು ಆಫ್ರಿಕಾದಲ್ಲಿ ಮಾತ್ರ ಆಗಲು ಸಾಧ್ಯ, ಇದು ಮಹಿಷಾಸುರ” ಎಂದು ಕಾಮೆಂಟ್ ಮಾಡಿದರೆ ಮತ್ತೊಬ್ಬ “ನನಗೆ ಈ ವಿಡಿಯೋ ನೋಡಿ ಕತ್ತು ನೋವಾಗುತ್ತಿದೆ” ಎಂದ. ಆದರೆ ಹಲವರು ಇದು ಆನುವಂಶಿಕ ರೂಪಾಂತರ (Genetic Mutation) ಆಗಿರಬಹುದು ಎಂದು ಊಹಿಸಿದ್ದರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ