ಪ್ರೀತಿಯ ಹುಡುಗಿಗೆ ಪ್ರೊಪೋಸ್ ಮಾಡಿದ ಹುಡುಗನಿಗೆ ಕಾದಿತ್ತು ಶಾಕ್! ಏನಾಯ್ತು ನೀವೇ ನೋಡಿ

ಕೆಂಪು ಟಿ-ಶರ್ಟ್‌ನ ಹುಡುಗನೊಬ್ಬ ತರಗತಿಯೊಳಗೆ ಹುಡುಗಿಯ ಬಳಿ ನಿಂತು ಪ್ರೊಪೋಸ್ ಮಾಡುತ್ತಾನೆ. ಈ ಸಂದರ್ಭವನ್ನು ಒಬ್ಬ ಮೇಜಿನ ಮೇಲೆ ನಿಂತು ವಿಡಿಯೋ ಮಾಡಿದರೆ ಕೆಲವರು ಸುತ್ತ ಮುತ್ತ ನಿಂತು ವಿಡಿಯೋ ಮಾಡಿದ್ದಾರೆ.

ಪ್ರೀತಿಯ ಹುಡುಗಿಗೆ ಪ್ರೊಪೋಸ್ ಮಾಡಿದ ಹುಡುಗನಿಗೆ ಕಾದಿತ್ತು ಶಾಕ್! ಏನಾಯ್ತು ನೀವೇ ನೋಡಿ
ಲವ್ ಪ್ರೊಪೋಸ್ Image Credit source: Odisha TV
Follow us
TV9 Web
| Updated By: Digi Tech Desk

Updated on: Feb 12, 2023 | 5:53 PM

Viral News: ವ್ಯಾಲೆಂಟೈನ್ಸ್ ಡೇ ಹತ್ತಿರವಾಗುತ್ತಿದಂತೆ ಪ್ರಪಂಚದಾದ್ಯಂತ ಪ್ರೇಮ ಪಕ್ಷಿಗಳು ಉತ್ಸಾಹದಿಂದ ‘ಲವ್ ವೀಕ್’ ಅನ್ನು ಆಚರಿಸಲು ಪ್ರಾರಂಭಿಸಿವೆ. ಈ ‘ಪ್ರೀತಿಯ ವಾರ’ವನ್ನು ಲವ್ ಬರ್ಡ್ಸ್ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಶುಭ ಸಂದರ್ಭ ಎಂದು ಪರಿಗಣಿಸುತ್ತಾರೆ. ಇಲ್ಲಿ ನೀವು ನೋಡುವ ಕೆಂಪು ಟಿ-ಶರ್ಟ್ ಹುಡುಗನು ಕೆಂಪು ಗುಲಾಬಿಯೊಂದಿಗೆ ಹುಡುಗಿಗೆ ಪ್ರಪೋಸ್ ಮಾಡುತ್ತಾನೆ. ಆದರೆ ತಕ್ಷಣ ಆ ಹುಡುಗಿ ಅವನ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಾಳೆ. ಆದರೆ ಅದು ಅಲ್ಲಿಗೆ ನಿಲ್ಲುವುದಿಲ್ಲ ಇದು ಒಂದು ಅನಿರೀಕ್ಷಿತ ತಿರುವನ್ನು ಪಡೆದುಕೊಳ್ಳುತ್ತದೆ.

ವಿಡಿಯೋದಲ್ಲಿ ಕಂಡುಬಂದಂತೆ, ಕೆಂಪು ಟಿ-ಶರ್ಟ್‌ನ ಹುಡುಗನೊಬ್ಬ ತರಗತಿಯೊಳಗೆ ಹುಡುಗಿ ಬಳಿ ನಿಂತಿದ್ದಾನೆ ಮತ್ತು ಇನ್ನೊಬ್ಬ ಮೇಜಿನ ಮೇಲೆ ನಿಂತು ವಿಡಿಯೋ ಮಾಡುತ್ತಿದ್ದಾನೆ. ಕೆಲವರು ತರಗತಿಯಲ್ಲಿ ಕುಳಿತಿದ್ದಾರೆ. ಇತರ ಸಹಪಾಠಿಗಳು ನಡೆಯುತ್ತಿರುವ ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡುವಲ್ಲಿ ನಿರತರಾಗಿದ್ದಾರೆ.

ವಿಡಿಯೋದಲ್ಲಿರುವ ಕೆಂಪು ಟಿ-ಶರ್ಟ್ ಹುಡುಗ ಹಾಗೆ ಎಂದಿನಂತೆ ತಾನು ಪ್ರೀತಿಸುತ್ತಿರುವ ಹುಡುಗಿಯ ಬಳಿ ಮಾತನಾಡಲು ಪ್ರಾರಂಭಿಸುತ್ತಾನೆ. ಈ ಸಂದರ್ಭದಲ್ಲಿ ಈ ಹುಡುಗ ಹಿಂದೆ ಒಂದು ಕೈಯಲ್ಲಿ ಕೆಂಪು ಗುಲಾಬಿಯನ್ನು ಮರೆಮಾಚುತ್ತಿರುವುದು ಕಂಡುಬರುತ್ತದೆ. ಧ್ವನಿ ಕೇಳಿಸುತ್ತಿಲ್ಲವಾದರೂ, ಹುಡುಗ ತನ್ನ ಪ್ರೇಮ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಹುಡುಗಿಯನ್ನು ವಿನಂತಿಸುತ್ತಿದ್ದಾನೆ ಎಂಬುದೂ ಸ್ಪಷ್ಟವಾಗಿದೆ. ಆದರೆ ಆ ಹುಡುಗಿ ತಕ್ಷಣ ಅದನ್ನು ನಿರಾಕರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: 3 ವರ್ಷದ ಪುಟ್ಟ ಬಾಲಕ 7.50 ಕೋಟಿ ರೂ. ಫೆರಾರಿ ಕಾರು ಚಲಾಯಿಸುವ ವಿಡಿಯೋ ಸಖತ್ ವೈರಲ್

ಇಷ್ಟಾದರೂ ಆ ಹುಡುಗ ಒತ್ತಾಯವಾಗಿ ಹುಡುಗಿಗೆ ಗುಲಾಬಿಯನ್ನು ನೀಡಲು ತನ್ನ ಕೈ ಚಾಚುತ್ತಾನೆ. ಆದರೆ, ಇದ್ದಕ್ಕಿದ್ದಂತೆ ಹುಡುಗಿ ಕೋಪಗೊಂಡು ಹುಡುಗನ ಕೈಯಿಂದ ಹೂವನ್ನು ಕಸೆದುಕೊಳ್ಳಲು ಪ್ರಯತ್ನಿಸುತ್ತಾಳೆ, ಅದು ಸಾಧ್ಯವಾಗದಿದ್ದಾಗ ತನ್ನ ಬ್ಯಾಗ್ ಅನ್ನು ಎಸೆಯುತ್ತಾಳೆ. ಹುಡುಗಿಯ ಪ್ರತಿಕ್ರಿಯೆಯನ್ನು ಕಂಡು ಹುಡುಗ ತನ್ನ ಕೈಯಲ್ಲಿದ್ದ ಗುಲಾಬಿಯನ್ನು ಹುಡುಗಿಯ ಮೇಲೆ ಎಸೆಯುತ್ತಾನೆ. ಈ ಸಂಪೂರ್ಣ ದೃಶ್ಯವನ್ನು ಸಹಪಾಠಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಘರ್ ಕೆ ಕಾಲೇಶ್ ಎನ್ನುವ ಹೆಸರಿನ ಟ್ವಿಟರ್‌ ಅಕೌಂಟ್​ನಿಂದ ಈ ವಿಡಿಯೋವನ್ನು ಶೇರ್ ಆಗಿದೆ.  ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಹೆಚ್ಚು ವಿವ್ಸ್ ಮತ್ತು ಸಾವಿರಾರು ನೆಟ್ಟಿಗರು ಲೈಕ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ