ಆತ ತನ್ನ ಮದುವೆಗೆ ಕುಟುಂಬದೊಂದಿಗೆ ಪ್ರಯಾಣಿಸಲು ಇಡೀ ವಿಮಾನ ಬುಕ್ ಮಾಡಿದರು, ವಿಡಿಯೋ ವೈರಲ್ ಆಯ್ತು!
ಈಗ ವೈರಲ್ ಆಗಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ದಿ ಶುಭ್ ವೆಡ್ಡಿಂಗ್ ಎಂಬ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಆ ಪುಟ್ಟ ಕ್ಲಿಪ್‌ನಲ್ಲಿ, ಭುವನ್ ಅವರ ಕುಟುಂಬ ಮತ್ತು ಸಂಬಂಧಿಕರು ಕ್ಯಾಮೆರಾಗೆ ಉತ್ಸಾಹದಿಂದ ಕೈ ಬೀಸುತ್ತಿರುವುದನ್ನು ಕಾಣಬಹುದಾಗಿದೆ.
ಭುವನ್ ಎಂಬ ವ್ಯಕ್ತಿ ತನ್ನ ಮದುವೆಗಾಗಿ ( Wedding) ತನ್ನ ಎಲ್ಲ ಸಂಬಂಧಿಕರೊಂದಿಗೆ ಪ್ರಯಾಣಿಸಲು ಸಂಪೂರ್ಣವಾಗಿ ಇಡೀ ವಿಮಾನವನ್ನು (Flight) ಬುಕ್ ಮಾಡಿದ್ದಾರೆ. ಆ ವೀಡಿಯೊ ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ದಂಪತಿಯೊಂದು ಇತ್ತೀಚೆಗೆ ತಮ್ಮ ಮದುವೆಗೆ ಬರಲು ಅನುವಾಗುವಂತೆ ಎಲ್ಲ ಸಂಬಂಧಿಕರಿಗೂ (Family) ಒಂದಿಡೀ ವಿಮಾನವನ್ನು ಬುಕ್ ಮಾಡಿದ್ದರು. ಅದೇ ಕಾರಣಕ್ಕಾಗಿ ಈಗ ಮನ್ನೊಬ್ಬ ವ್ಯಕ್ತಿ ಸಹ ಅದೇ ರೀತಿಯ ಸಾಹಸ ಮಾಡಿದ್ದಾರೆ. ಭುವನ್ ಎಂಬ ವ್ಯಕ್ತಿ ತನ್ನ ಮದುವೆಗೆ ಪ್ರಯಾಣಿಸಲು ಕುಟುಂಬದವರಿಗಾಗಿ ಸಂಪೂರ್ಣ ವಿಮಾನವನ್ನು ಬುಕ್ ಮಾಡಿದ್ದಾನೆ. ಅವರು ತಮ್ಮ ಸಂಬಂಧಿಕರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕ್ಲಿಪ್ ಅನ್ನು ಸಹ ಹಂಚಿಕೊಂಡಿದ್ದಾರೆ ಮತ್ತು ಅದು ಆನ್‌ಲೈನ್‌ನಲ್ಲಿ ವೈರಲ್ (Viral Video) ಆಗಿದೆ.
ಈಗ ವೈರಲ್ ಆಗಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ದಿ ಶುಭ್ ವೆಡ್ಡಿಂಗ್ ಎಂಬ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಆ ಪುಟ್ಟ ಕ್ಲಿಪ್‌ನಲ್ಲಿ, ಭುವನ್ ಅವರ ಕುಟುಂಬ ಮತ್ತು ಸಂಬಂಧಿಕರು ಕ್ಯಾಮೆರಾಗೆ ಉತ್ಸಾಹದಿಂದ ಕೈ ಬೀಸುತ್ತಿರುವುದನ್ನು ಕಾಣಬಹುದಾಗಿದೆ. “ಶಗುನ್ ಮನೆಗೆ ಹೋಗಲು ಶೂಬ ಪ್ರಯಾಣ ಮಾಡಿ,” ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ವಿಡಿಯೋ ಕ್ಲಿಪ್‌ನಲ್ಲಿ ಭುವನ್ ಅವರ ಕೈಯಲ್ಲಿ ಮೆಹೆಂದಿಯನ್ನು ಸಹ ಕಾಣಬಹುದಾಗಿದೆ. ಅವರು ತುಂಬಾ ಉತ್ಸಾಹದಿಂದ ಕಾಣುತ್ತಿದ್ದರು.
View this post on Instagram