Viral Video: 3 ವರ್ಷದ ಪುಟ್ಟ ಬಾಲಕ 7.50 ಕೋಟಿ ರೂ. ಫೆರಾರಿ ಕಾರು ಚಲಾಯಿಸುವ ವಿಡಿಯೋ ಸಖತ್ ವೈರಲ್

14 ದಶಲಕ್ಷಕ್ಕೂ (Million) ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿರೋ ಈ ವೀಡಿಯೊದಲ್ಲಿ 3 ವರ್ಷದ ಝೈನ್ ಸೊಫುಗ್ಲು ಫೆರಾರಿ SF90 ಸ್ಟ್ರಾಡೇಲ್ ಸ್ಪೋರ್ಟ್ಸ್ ಕಾರನ್ನು ಓಡಿಸುತ್ತಿದಾನೆ. ಈ ಕಾರಿನಲ್ಲಿ V8 ಎಂಜಿನ್‌ ಇದೆ, ಅಲ್ಲದೇ 2.5 ಸೆಕೆಂಡುಗಳಲ್ಲಿ 0-100 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

Viral Video: 3 ವರ್ಷದ ಪುಟ್ಟ ಬಾಲಕ 7.50 ಕೋಟಿ ರೂ. ಫೆರಾರಿ ಕಾರು ಚಲಾಯಿಸುವ ವಿಡಿಯೋ ಸಖತ್ ವೈರಲ್
ಫೆರಾರಿ SF90Image Credit source: Instagram
Follow us
| Updated By: Digi Tech Desk

Updated on: Feb 12, 2023 | 3:32 PM

Viral News: ಕಾರು ಓಡಿಸುವ ಕ್ರೇಜ್ ಯುವಕರಲ್ಲಿ ಸಾಮಾನ್ಯವಾಗಿರುತ್ತದೆ. ಅದರಲ್ಲೂ ದುಬಾರಿ ಕಾರು, ಸ್ಪೋರ್ಟ್ಸ್ ಕಾರುಗಳನ್ನ ಚಲಿಸಲು ಯುವಕರು ಹಾತೊರೆಯುತ್ತಾರೆ. ಹೊಸ ಕಾರುಗಳ ಮಾಡೆಲ್​ನಿಂದ ಎಂಜಿನ್ ಪವರ್, ಸ್ಪೀಡ್, ಟಾರ್ಕ್ ಹೀಗೆ ಇಂಚಿಂಚು ಮಾಹಿತಿಯನ್ನು ತಿಳಿದುಕೊಂಡಿರುತ್ತಾರೆ. ಆದರೆ ಇಲ್ಲೊಬ್ಬ 3 ವರ್ಷದ ಬಾಲಕ ಫೆರಾರಿ ಕಾರನ್ನು ಓಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಹೌದು.. ಅಚ್ಚರಿ ಅನ್ನಿಸಿದರೂ ಸತ್ಯ. ಟರ್ಕಿ ಮೂಲದ ಝೈನ್ ಸೊಫುಗ್ಲು (Zayn Sofuoglu) ಎನ್ನುವ ಪುಟ್ಟ ಬಾಲಕ ಫೆರಾರಿ SF90 ಸ್ಟ್ರಾಡೇಲ್ (Ferrari SF90 S stradale) ಸ್ಪೋರ್ಟ್ಸ್ ಕಾರನ್ನು ಚಲಾಯಿಸಿ ಗಮನಸೆಳೆದಿದ್ದಾನೆ.

V8 ಎಂಜಿನ್‌ ಹೊಂದಿರುವ ಈ ಕಾರು 2.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ. ಕಾರಿನ ಬಗ್ಗೆ ಎಷ್ಟೇ ಆಸಕ್ತಿ ಇದ್ದರು ಭಾರತದಲ್ಲಿ 16 ರಿಂದ 18 ವರ್ಷ ತುಂಬುವಾಗ ಮಕ್ಕಳು ಕಾರನ್ನು ಕಲಿಯುವ ಪ್ರಾರಂಭಿಸುತ್ತಾರೆ. ಇನ್ನು ಕಾರು ಓಡಿಸುವ ಕನಿಷ್ಟ ವಯೋಮಿತಿ 18 ವರ್ಷ. ಆದ್ರೆ ಇಲ್ಲೊಂದು ವಿಡಿಯೋ ನೆಟ್ಟಿಗರನ್ನು ಮುಖಸ್ಥಬ್ಧಗೊಳಿಸಿದೆ.

ಈ ವಿಡಿಯೋದಲ್ಲಿ, ಮೂರು ವರ್ಷದ ಹುಡುಗ ಸಂಪೂರ್ಣವಾಗಿ ಕುಶಲತೆಯಿಂದ 769-ಎಚ್‌ಪಿ ಫೆರಾರಿ SF90 ಸ್ಟ್ರಾಡೇಲ್‌ ಸ್ಪೋರ್ಟ್ಸ್ ಕಾರನ್ನು ಓಡಿಸಿದ್ದಾನೆ. ಫೆರಾರಿ SF90 ಸ್ಟ್ರಾಡೇಲ್‌ನ ಭಾರತದಲ್ಲಿ 7.50 ಕೋಟಿ ರೂ. ಬೆಲೆ ಬಾಳುತ್ತದೆ.

ಪವರ್-ಪ್ಯಾಕ್ಡ್ ಸ್ಪೋರ್ಟ್ಸ್ ಕಾರನ್ನು ಚಾಲನೆ ಮಾಡುವುದರ ಜೊತೆಗೆ, ಝೈನ್ ಗೇರ್‌ಲೆಸ್ ದ್ವಿಚಕ್ರ ವಾಹನಗಳು, ATVಗಳು, ಸ್ಟೀಮರ್‌ಗಳು ಮತ್ತು ಹಲವಾರು ವಾಹನಗಳನ್ನು ಓಡಿಸುತ್ತಾನೆ. ಇಂತಹ ಒಂದು ಅದ್ಬುತ ಪ್ರತಿಭೆ ಈ ಪುಟ್ಟ ಚಾಲಕನಿಗೆ ರಕ್ತದಲ್ಲೇ ಬಂದಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಝೈನ್ ಸೊಫುಗ್ಲು ಮೋಟಾರ್‌ಸೈಕಲ್ ಸೂಪರ್ ಸ್ಪೋರ್ಟ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಐದು ಬಾರಿ ವಿಜೇತರಾದ ಕೆನಾನ್ ಸೊಫುಗ್ಲು ಅವರ ಮಗ.

ಇದನ್ನೂ ಓದಿ: ಮೂರು ಕೊಂಬುಗಳನ್ನು ಹೊಂದಿರುವ ಹಸುವನ್ನು ಎಂದಾದರೂ ನೋಡಿದ್ದೀರಾ! ವಿಡಿಯೋ ವೈರಲ್

ಫೆರಾರಿ ಸ್ಪೋರ್ಟ್ಸ್ ಕಾರನ್ನು ಚಲಾಯಿಸುತ್ತಿರುವ ವಿಡಿಯೋವನ್ನು ಝೈನ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಝಯ್ ತನ್ನ ಪಾದಗಳನ್ನು ಆಕ್ಸಿಲೇಟರ್‌ ಮತ್ತು ಬ್ರೇಕ್ ಮೇಲೆ ಇಡಲು ಸಾಧ್ಯವಾಗುತ್ತಿಲ್ಲ ಎಂಬುದು ಸುಲಭವಾಗಿ ಗೋಚರಿಸುತ್ತದೆ. ಅದಲ್ಲದೆ, 3 ವರ್ಷದ ಮಗುವಿಗೆ ಕಾರಿನ ಡ್ಯಾಶ್‌ಬೋರ್ಡ್‌ನ ಮೇಲೆ ಏನನ್ನೂ ನೋಡಲಾಗುವುದಿಲ್ಲ. ಎಲ್ಲಿಗೆ ಚಾಲನೆ ಮಾಡುತ್ತಿದ್ದಾನೆ ಎಂಬುದೂ ಸಹ ಈ ಬಾಲಕನಿಗೆ ಕಾಣುವುದಿಲ್ಲ. ಆದರೆ ತನ್ನ ಕಾರು ಯಾವ ಕಡೆ ಸಾಗುತ್ತಿದೆ ಎಂದು ನೋಡಲು ಈ ಪುಟ್ಟ ಬಾಲಕ ಕಾರಿನ ಟಾಪ್​ ಮೇಲೆ ಇರಿಸಲಾದ ಕ್ಯಾಮರಾ ಸೆರೆ ಹಿಡಿಯುವ ದೃಶ್ಯದ ಫೀಡ್ ಅನ್ನು ತೋರಿಸುವ ಮಾನಿಟರ್ ಅನ್ನು ತನ್ನ ಬಳಿ ಇರಿಸಿಕೊಂಡು ಕಾರನ್ನು ಚಲಾಯಿಸುತ್ತಾನೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ