ಮಧ್ಯಪ್ರದೇಶ: 24 ವರ್ಷದ ವಿವಾಹಿತ ಮಹಿಳೆ ತನ್ನ ಗಂಡನನೊಂದಿಗೆ ಲೈಂಗಿಕ ಸಂಪರ್ಕದಿಂದ ದೂರ ಉಳಿದು,ಗಂಡನ ಸಹೋದರಿಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಆಕರ್ಷಣೆಗೆ ಒಳಗಾಗಿ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಮರು ಮದುವೆಯಾಗಿದ್ದಾಳೆ. ಇದಲ್ಲದೇ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಈ ಯುವತಿ ಲೈಂಗಿಕ ದೌರ್ಜನ್ಯ ವೆಸಗಿದ್ದು, ಇದೀಗ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆಯ ವೇಳೆ ತಾನೊಬ್ಬಳು ಸಲಿಂಗಿ ಎಂದು ಹೇಳಿಕೊಂಡಿದ್ದಾಳೆ. ಈ ಘಟನೆ ಮಧ್ಯಪ್ರದೇಶದ ಖಾರ್ಗೋನ್ನಲ್ಲಿ ನಡೆದಿದೆ.
ವರ್ಷಗಳ ಹಿಂದೆಯಷ್ಟೇ ಖಾರ್ಗೋನ್ನ ಯುವಕನೊಂದಿಗೆ ಮದುವೆಯಾಗಿದ್ದ ಈ ಯುವತಿ ಸಾಕಷ್ಟು ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದಳು. ಇದಲ್ಲದೇ ಗಂಡನೊಂದಿಗೆ ಲೈಂಗಿಕ ಸಂಬಂಧದಿಂದ ದೂರ ಉಳಿದು ಗಂಡನ ಸಹೋದರಿಯ 16 ವರ್ಷದ ಮಗಳೊಂದಿಗೆ ಪ್ರೀತಿಯಿಂದ ವರ್ತಿಸುತ್ತಿದ್ದಳು. ಇದಲ್ಲದೇ ಅಪ್ರಾಪ್ತ ಯುವತಿಯೊಂದಿಗೆ ಮನೆಯಲ್ಲೇ ಯಾರಿಗೂ ಅನುಮಾನ ಬಾರದಂತೆ ಲೈಂಗಿಕ ಸಂಪರ್ಕ ಬೆಳೆಸಿದ್ದಳು ಎಂದು ಸ್ಥಳೀಯ ವರದಿಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್! ಮಹಿಳೆಯರಲ್ಲಿ ಆತಂಕ ಸೃಷ್ಟಿಸಿರುವ ಈ ಸೀರೆ ಕ್ಯಾನ್ಸರ್ ಎಂದರೇನು?
ವಾರಗಳ ಹಿಂದೆಯಷ್ಟೇ ಸೋದರಿಯ ಮಗಳು ಮತ್ತು ಪತ್ನಿ ಕಾಣೆಯಾಗಿರುವುದನ್ನು ಕಂಡು ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ದೂರಿನ ಮೇರೆಗೆ ಪೊಲೀಸರು ಇಬ್ಬರನ್ನೂ ಪತ್ತೆ ಹಚ್ಚಲಾಗಿದ್ದು, ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ. ಈ ವೇಳೆ ಈಕೆ ಸಲಿಂಗಿ ಎಂದು ತಿಳಿದುಬಂದಿದೆ. ಇದಲ್ಲದೇ ಮದುವೆಯ ಬಳಿಕವೂ ಕೂಡ ಕನಿಷ್ಠ ಎಂಟರಿಂದ ಹತ್ತು ಮಹಿಳೆಯರೊಂದಿಗೆ ಸಂಬಂಧ ಬೆಳೆಸಿರುವುದು ಬೆಳಕಿಗೆ ಬಂದಿವೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Thu, 4 April 24