ಪ್ರೀತಿ ಅಲ್ಲ, ಕಾಮ; ಖುಷ್ಬೂಗೆ ತಂದೆಯಿಂದಲೇ ಆಗಿತ್ತು ಲೈಂಗಿಕ ದೌರ್ಜನ್ಯ
ಖುಷ್ಬೂ ಸುಂದರ್ ಅವರ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಆಗಿತ್ತು. ಆಗ ಅವರಿಗೆ 8 ವರ್ಷ ವಯಸ್ಸು. ವರ್ಷಗಳು ಕಳೆದಂತೆ ಖುಷ್ಬೂಗೆ ಇದೆಲ್ಲ ತಪ್ಪು ಎಂಬುದು ಅರಿವಾಗಲು ಆರಂಭ ಆಯಿತು. 15 ವರ್ಷ ಆಗುತ್ತಿದ್ದಂತೆ ಬಳಿಕ ತಂದೆಯ ವಿರುದ್ಧ ಮಾತನಾಡುವುದನ್ನು ಅವರು ಕಲಿತರು.
ನಟಿ, ರಾಜಕಾರಣಿ ಖುಷ್ಬೂ ಸುಂದರ್ (Kushboo Sundar) ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರದಲ್ಲಿ ಯಶಸ್ಸು ಸಿಕ್ಕಿದೆ. ಇಂದು (ಮಾರ್ಚ್ 29) ಹುಟ್ಟುಹಬ್ಬ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಅವರು ಕಳೆದ ವರ್ಷ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನೇಮಕಗೊಂಡಿದ್ದಾರೆ. ಇದರ ಸದಸ್ಯೆ ಆಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಆ ಬಳಿಕ ಮಹಿಳೆಯ ಬಗ್ಗೆ ಮಾತನಾಡುವಾಗ ಒಂದು ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದರು. ಬಹುತೇಕ ತಂದೆಯರಿಗೆ ಮಕ್ಕಳ ಮೇಲೆ ಪ್ರೀತಿ ಇರುತ್ತದೆ. ಆದರೆ, ಖಷ್ಬೂ ತಂದೆಗೆ ಮಗಳ ಮೇಲೆ ಇದ್ದಿದ್ದು ಕಾಮ. ಈ ವಿಚಾರವನ್ನು ಅವರು ರಿವೀಲ್ ಮಾಡಿದ್ದರು.
‘ಸಣ್ಣ ವಯಸ್ಸಿನಲ್ಲಿದ್ದಾಗ ಮಗುವಿನ ಮೇಲೆ ದೌರ್ಜನ್ಯ ನಡೆದರೆ ಆ ಕಹಿ ನೆನಪು ಕೊನೆಯವರೆಗೂ ಇರುತ್ತದೆ. ಅದು ಹುಡುಗನೇ ಆಗಿರಬಹುದು, ಹುಡುಗಿಯೇ ಆಗಿರಬಹುದು. ನನ್ನ ತಂದೆಯಿಂದ ನಾನು ಸಾಕಷ್ಟು ಕಿರುಕುಳ ಅನುಭವಿಸಿದ್ದೇನೆ. ಆತ ನನ್ನ ತಾಯಿಗೆ ಸಾಕಷ್ಟು ಹೊಡೆಯುತ್ತಿದ್ದ. ಹೆಂಡತಿಗೆ ಹಾಗೂ ಮಕ್ಕಳಿಗೆ ಹೊಡೆಯೋದು, ಮಗಳಿಗೆ ಲೈಂಗಿಕ ಕಿರುಕುಳ ನೀಡೋದು ಆತನ ಕೆಲಸ ಆಗಿತ್ತು. ಅದನ್ನು ಅವನು ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದ’ ಎಂದು ಖುಷ್ಬೂ ಸುಂದರ್ ಹೇಳಿಕೊಂಡಿದ್ದರು.
ಖುಷ್ಬೂ ಸುಂದರ್ ಅವರ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಆಗಿತ್ತು. ಆಗ ಅವರಿಗೆ 8 ವರ್ಷ ವಯಸ್ಸು. ವರ್ಷಗಳು ಕಳೆದಂತೆ ಖುಷ್ಬೂಗೆ ಇದೆಲ್ಲ ತಪ್ಪು ಎಂಬುದು ಅರಿವಾಗಲು ಆರಂಭ ಆಯಿತು. 15 ವರ್ಷ ಆಗುತ್ತಿದ್ದಂತೆ ಬಳಿಕ ತಂದೆಯ ವಿರುದ್ಧ ಮಾತನಾಡುವುದನ್ನು ಅವರು ಕಲಿತರು. ಈ ಮೂಲಕ ಎಲ್ಲವನ್ನೂ ಎದುರಿಸಿ ನಿಂತರು.
ಆಗ ಖುಷ್ಬೂ ಸುಂದರ್ ಪರಿಸ್ಥಿತಿ ತುಂಬಾನೇ ಕಷ್ಟದಲ್ಲಿ ಇತ್ತು. ಒಂದೊಮ್ಮೆ ಈ ವಿಚಾರವನ್ನು ಅವರು ಹೇಳಿದ್ದರೆ ಕುಟುಂಬದ ಇತರ ಸದಸ್ಯರು ನಿಂದನೆಗೆ ಒಳಗಾಗಬಹುದು ಎನ್ನುವ ಭಯ ಇತ್ತು. ಇನ್ನು ತಾಯಿ ಗಂಡನೇ ಪರದೈವ ಎಂದು ನಂಬಿದವರು. ಹೀಗಾಗಿ, ಖುಷ್ಬೂ ಈ ವಿಚಾರವನ್ನು ಹೇಳಿದ್ದರೂ ತಾಯಿ ಅದನ್ನು ನಂಬುತ್ತಿರಲಿಲ್ಲ. ಹೀಗಾಗಿ ಅವರೇ ತಂದೆಯ ವಿರುದ್ಧ ತಿರುಗಿಬಿದ್ದರು. ತಪ್ಪಿನ ವಿರುದ್ಧ ಅವರು ಸಿಡಿದೆದ್ದರು.
ಇದನ್ನೂ ಓದಿ: ನಟನಾ ತರಬೇತಿ ಮುಗಿದರೂ ಮಗಳನ್ನು ಸಿನಿಮಾ ರಂಗಕ್ಕೆ ಲಾಂಚ್ ಮಾಡಲ್ಲ ಖುಷ್ಬೂ
ಖುಷ್ಬೂ ಅವರು ಕನ್ನಡದಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ. ‘ರಣಧೀರ’ ಅವರ ನಟನೆಯ ಮೊದಲ ಕನ್ನಡ ಸಿನಿಮಾ. ರವಿಚಂದ್ರನ್ ಜೊತೆ ನಟಿಸಿ ಅವರು ಫೇಮಸ್ ಆದರು. ಕನ್ನಡ ಮಾತ್ರವಲ್ಲದೆ, ತಮಿಳು, ಹಿಂದಿ ಮೊದಲಾದ ಭಾಷೆಗಳಲ್ಲಿ ನಟಿಸಿದ್ದಾರೆ. 2010ರಲ್ಲಿ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ಸು ಪಡೆದರು. ಕನ್ನಡದ ಮೇಲೆ, ಕನ್ನಡ ಚಿತ್ರರಂಗದ ಬಗ್ಗೆ ಅವರಿಗೆ ಈಗಲೂ ಪ್ರೀತಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:06 am, Fri, 29 March 24