AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟನಾ ತರಬೇತಿ ಮುಗಿದರೂ ಮಗಳನ್ನು ಸಿನಿಮಾ ರಂಗಕ್ಕೆ ಲಾಂಚ್ ಮಾಡಲ್ಲ ಖುಷ್ಬೂ

ಖುಷ್ಬೂ ಹಾಗೂ ಸುಂದರ್ 2000ರಲ್ಲಿ ಮದುವೆ ಆದರು. ಅವರಿಗೆ ಇಬ್ಬರು ಮಕ್ಕಳು. ಅವಂತಿಕಾ ಹಾಗೂ ಆನಂದಿತಾ ಎಂದು ಹೆಸರು ಇಟ್ಟಿದ್ದಾರೆ. ಕಿರಿಯ ಮಗಳು ಆನಂದಿತಾ ಅವರು ‘ಅನ್ಮೋಲ್​’ ಹೆಸರಿನ ಮೇಕಪ್ ಬ್ರ್ಯಾಂಡ್ ಲಾಂಚ್ ಮಾಡಿದ್ದಾರೆ.

ನಟನಾ ತರಬೇತಿ ಮುಗಿದರೂ ಮಗಳನ್ನು ಸಿನಿಮಾ ರಂಗಕ್ಕೆ ಲಾಂಚ್ ಮಾಡಲ್ಲ ಖುಷ್ಬೂ
ಖುಷ್ಬೂ-ಅವಂತಿಕಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Mar 29, 2024 | 7:15 AM

Share

ನಟಿ ಖುಷ್ಬೂ ಸುಂದರ್ (Kushboo Sundar) ಅವರಿಗೆ ಇಂದು (ಮಾರ್ಚ್ 29) ಜನ್ಮದಿನ. ಅವರು ರಾಜಕೀಯ ಹಾಗೂ ಸಿನಿಮಾ ರಂಗ ಎರಡರಲ್ಲೂ ಬ್ಯುಸಿ ಇದ್ದಾರೆ. ಹೀಗಾಗಿ ಅವರಿಗೆ ಎರಡೂ ಕ್ಷೇತ್ರದ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಅಭಿಮಾನಿಗಳು ಕೂಡ ಖುಷ್ಬೂ ಸುಂದರ್ ಫೋಟೋ ಶೇರ್ ಮಾಡಿಕೊಂಡು ವಿಶ್ ಮಾಡುತ್ತಿದ್ದಾರೆ. ಖುಷ್ಬೂ ಜೊತಗೆ ಅವರ ಅವರ ಮಗಳು ಅವಂತಿಕಾ ಆಗಾಗ ಚರ್ಚೆಯಲ್ಲಿ ಇರುತ್ತಾರೆ. ಅವರು ಈಗಾಗಲೇ ನಟನಾ ತರಬೇತಿ ಪೂರ್ಣಗೊಳಿಸಿದ್ದಾರೆ. ಅವರನ್ನು ಲಾಂಚ್ ಮಾಡಲು ಖುಷ್ಬೂ ಸುಂದರ್ ಆಸಕ್ತಿ ತೋರಿಸಿಲ್ಲ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.

ಖುಷ್ಬೂ ಸುಂದರ್ ಅವರ ಮಗಳ ಹೆಸರು ಅವಂತಿಕಾ ಸುಂದರ್. ಅವರು ಸಿನಿಮಾ ರಂಗಕ್ಕೆ ಇನ್ನೂ ಎಂಟ್ರಿ ಕೊಟ್ಟಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋ ಪೋಸ್ಟ್ ಮಾಡುತ್ತಾ ಇರುತ್ತಾರೆ. ಅವಂತಿಕಾ ಸ್ಕರ್ಟ್​ನಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ. ಮೈ ಮೇಲೆ ಅವರು ಹಚ್ಚೆ ಹಾಕಿಕೊಂಡಿದ್ದೂ ಇದೆ. ಇದಕ್ಕೆ ಫ್ಯಾನ್ಸ್ ಅನೇಕ ಬಾರಿ ಕೆಟ್ಟದಾಗಿ ಕಮೆಂಟ್ ಮಾಡಿದ್ದೂ ಇದೆ. ‘ಒಳ ಉಡುಪು ಹಾಕದೇ ಬಟ್ಟೆ ಹಾಕಿದ್ದೀರಾ’ ಎಂದು ಹಲವು ಬಾರಿ ಟೀಕೆ ಎದುರಿಸಿದ್ದು ಇದೆ.

ಖುಷ್ಬೂ ಹಾಗೂ ಸುಂದರ್ 2000ರಲ್ಲಿ ಮದುವೆ ಆದರು. ಅವರಿಗೆ ಇಬ್ಬರು ಮಕ್ಕಳು. ಅವಂತಿಕಾ ಹಾಗೂ ಆನಂದಿತಾ ಎಂದು ಹೆಸರು ಇಟ್ಟಿದ್ದಾರೆ. ಕಿರಿಯ ಮಗಳು ಆನಂದಿತಾ ಅವರು ‘ಅನ್ಮೋಲ್​’ ಹೆಸರಿನ ಮೇಕಪ್ ಬ್ರ್ಯಾಂಡ್ ಲಾಂಚ್ ಮಾಡಿದ್ದಾರೆ. ಇದರಲ್ಲಿ ಸ್ಕಿನ್ ಕೇರ್ ವಸ್ತುಗಳು ಕೂಡ ಇದೆ. ಖುಷ್ಬೂ ಅವರು ಖ್ಯಾತ ನಟಿ. ಅವರ ಪತಿ ಸುಂದರ್ ಸಿ ತಮಿಳಿನ ಖ್ಯಾತ ನಿರ್ದೇಶಕರು. ಅವರು ಚಿತ್ರರಂಗದಲ್ಲಿ ಮೂರು ದಶಕ ಕಳೆದಿದ್ದಾರೆ.

ಅವಂತಿಕಾ ಅವರು 2022ರಲ್ಲಿ ನಟನಾ ತರಬೇತಿ ಪಡೆದು ಬಂದಿದ್ದಾರೆ. ಈ ಬಗ್ಗೆ ಈ ಮೊದಲು ಖುಷ್ಬೂ ಅವರು ಮಾಹಿತಿ ತಿಳಿಸಿದ್ದರು. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಲು ಸಾಕಷ್ಟು ಆಸಕ್ತಿ ತೋರಿಸುತ್ತಾರೆ. ಆದರೆ, ಖುಷ್ಬೂ ಆ ರೀತಿ ಅಲ್ಲ. ಅವರ ಕಾಲಮೇಲೆ ಅವರೇ ನಿಲ್ಲಬೇಕು ಎನ್ನುವ ಥಿಯರಿ ಖುಷ್ಬೂ ಅವರದ್ದು. ‘ನನ್ನ ಹಿರಿಯ ಮಗಳು ನಟನಾ ತರಬೇತಿ ಪೂರ್ಣಗೊಳಿಸಿದ್ದಾಳೆ. ಅವಳು ಲಂಡನ್ ಖ್ಯಾತ ನಟನಾ ಶಾಲೆಯಲ್ಲಿ ತರಬೇತಿ ಪಡೆದಿದ್ದಾಳೆ. ಅವಳ ಸ್ಟ್ರಗಲ್ ಈಗ ಪ್ರಾರಂಭ. ಎಲ್ಲವನ್ನೂ ಅವಳಾಗೆ ಪಡೆದುಕೊಳ್ಳಬೇಕು. ಹೀಗಾಗಿ ನಾವು ಅವಳನ್ನು ಲಾಂಚ್ ಮಾಡಲ್ಲ ಅಥವಾ ಅವಳ ಹೆಸರನ್ನು ಎಲ್ಲಿಯೂ ಶಿಫಾರಸ್ಸು ಮಾಡಲ್ಲ. ಅವಳಿಗೆ ನಿಮ್ಮ ಆಶೀರ್ವಾದ ಬೇಕು’ ಎಂದು ಖುಷ್ಬೂ ಹೇಳಿದ್ದರು.

ಖುಷ್ಬೂ ಸುಂದರ್ ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ‘ದಿ ಬರ್ನಿಂಗ್ ಟ್ರೇನ್’ ಅವರ ನಟನೆಯ ಮೊದಲ ಸಿನಿಮಾ. ನಂತರ ಹಲವು ಸಿನಿಮಾಗಳಲ್ಲಿ ನಾಯಕಿ ಆಗಿ ನಟಿಸಿದರು. ಖಷ್ಬೂ ಅವರು ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದರು.

ಇದನ್ನೂ ಓದಿ: ‘ತಂದೆಯಿಂದಲೇ ಲೈಂಗಿಕ ಕಿರುಕುಳ ಅನುಭವಿಸಿದೆ, ಅಮ್ಮನಿಗೆ ಪತಿಯೇ ದೇವರಾಗಿದ್ದರು’; ನಟಿ ಖುಷ್ಬೂ ಸುಂದರ್

1988ರಲ್ಲಿ ಬಿಡುಗಡೆ ಆದ ಕನ್ನಡದ ಸೂಪರ್ ಹಿಟ್ ಸಿನಿಮಾ ‘ರಣಧೀರ’ ಚಿತ್ರದಲ್ಲಿ ಅವರು ನಟಿಸಿದರು. ಈ ಮೂಲಕ ಕನ್ನಡಕ್ಕೆ ಕಾಲಿಟ್ಟರು. ರವಿಚಂದ್ರನ್ ಹಾಗು ಅವರ ಕಾಂಬಿನೇಷನ್ ಪ್ರೇಕ್ಷಕರಿಗೆ ಸಖತ್ ಇಷ್ಟ ಆಯಿತು. ನಂತರ ‘ಅಂಜದ ಗಂಡು’ ಚಿತ್ರದಲ್ಲಿ ನಟಿಸಿದರು. ವಿಷ್ಣುವರ್ಧನ್ ನಟನೆಯ ‘ಜೀವನದಿ’ ಸಿನಿಮಾದಲ್ಲಿ ಕಾವೇರಿ ಹೆಸರಿನ ಪಾತ್ರ ಮಾಡಿದ್ದರು. ಕನ್ನಡದಲ್ಲಿ ಅವರು ಇತ್ತೀಚಿನ ವರ್ಷಗಳಲ್ಲಿ ಬಣ್ಣ ಹಚ್ಚಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:15 am, Fri, 29 March 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ