ದುಬೈ ಬೀದಿಯಲ್ಲಿ ಕಾಣಿಸಿಕೊಂಡ 50 ನಮಿಲುಗಳು; ವಿಡಿಯೋ ವೈರಲ್

ದುಬೈನ ರಸ್ತೆಯೊಂದರಲ್ಲಿ ಒಂದಲ್ಲ ಎರಡಲ್ಲ ಸುಮಾರು 50 ಗಂಡು ಮತ್ತು ಹೆಣ್ಣು ನವಿಲುಗಳು ತಿರುಗಾಡಿರುವ ವಿಡಿಯೋವನ್ನು ನಟಿ ಮಿನಿ ಮಾಥುರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ದುಬೈ ಬೀದಿಯಲ್ಲಿ ಕಾಣಿಸಿಕೊಂಡ 50 ನಮಿಲುಗಳು; ವಿಡಿಯೋ ವೈರಲ್
ನವಿಲು
Updated By: ಗಂಗಾಧರ​ ಬ. ಸಾಬೋಜಿ

Updated on: Jan 24, 2022 | 1:24 PM

“ಇನ್‌ಕ್ರೆಡಿಬಲ್” ಎಂಬ ಪದವನ್ನು ಈ ವೀಡಿಯೊವನ್ನು ನೋಡಿದ ನಂತರ ನೀವು ಕೂಡ ಬಳಸುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ದುಬೈನ ರಸ್ತೆಯೊಂದರಲ್ಲಿ ಒಂದಲ್ಲ ಎರಡಲ್ಲ ಸುಮಾರು 50 ಗಂಡು ಮತ್ತು ಹೆಣ್ಣು ನವಿಲುಗಳು ತಿರುಗಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋವನ್ನು ಭಾರತೀಯ ದೂರದರ್ಶನ ನಿರೂಪಕಿ, ನಟಿ ಮತ್ತು ರೂಪದರ್ಶಿಯಾಗಿರುವ ಮಿನಿ ಮಾಥುರ್ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. 

ನಾನು ಇತರೇ ದಿನಗಳಲ್ಲಿ ನೋಡಲಾದರ ವೈಭವವನ್ನು ಇಂದು ನೋಡಿದೆ. ಅದನ್ನು ಇಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಸುಮಾರು 50 ಗಂಡು ಮತ್ತು ಹೆಣ್ಣು ನವಿಲುಗಳು ದುಬೈನ ಬೀದಿಯಲ್ಲಿ ಅಡ್ಡಾಡುತ್ತಿವೆ. ಇದನ್ನು ನೋಡಿ ನನಗೆ ತುಂಬಾನೆ ಸಂತೋಷವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.  ಪಿಂಕ್ ಮತ್ತು ವಿಲೋ ಸೇಜ್ ಹಾರ್ಟ್ ಅವರ ಕವರ್ ಮಿ ಇನ್ ಸನ್‌ಶೈನ್‌ ಎನ್ನುವ ಹಿನ್ನೆಲೆ ಸ್ಕೋರ್‌ಗೆ ಈ ವಿಡಿಯೋವನ್ನು ಸೇರಸಲಾಗಿದೆ. ಕ್ಲಿಪ್‌ನ ಒಂದು ಹಂತದಲ್ಲಿ, ನವಿಲುಗಳಲ್ಲೊಂದು ತನ್ನ ಅದ್ಭುತವಾದ ಗರಿ ಬಿಚ್ಚಿ ಪ್ರದರ್ಶಿಸುತ್ತಿರುವುದನ್ನು ಕಾಣಬಹುದಾಗುದೆ.

ಈ ವಿಡಿಯೋ ಸುಮಾರು 1,500 ಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದುಕೊಂಡಿದೆ. ಜೊತೆಗೆ ನೆಟ್ಟಿಗರಿಂದ ಮೆಸ್ಮರೈಸಿಂಗ್, ವಾವ್ ಮತ್ತು ಭವ್ಯವಾದ ದೃಶ್ಯ ಎಂದು ಸಾಕಷ್ಟು ಕಮೆಂಟ್ಸ್ ಮತ್ತು ಪ್ರಶಂಸೆಗಳು ಬರುತ್ತಿವೆ.

ಇದನ್ನೂ ಓದಿ;

ಒಂಟೆ ಏರಿ ಹವಾಮಾನ ವರದಿ ಮಾಡಿದ ಪಾಕಿಸ್ತಾನ ಪತ್ರಕರ್ತ ಚಾಂದ್ ನವಾಬ್; ವಿಡಿಯೋ ವೈರಲ್

Video: ಎಲ್ಲೆಲ್ಲೂ ಹಿಮ, ಕೊರೆವ ಚಳಿ; ಕೇವಲ 40 ಸೆಕೆಂಡ್​ಗಳಲ್ಲಿ 47 ಪುಶ್​ ಅಪ್ಸ್​ ತೆಗೆದ ಬಿಎಸ್​ಎಫ್ ಯೋಧ-ಸೆಲ್ಯೂಟ್​ ಹೊಡೆದ ನೆಟ್ಟಿಗರು