ಸೀರೆಯುಟ್ಟು ಸೊಸೆಯೊಂದಿಗೆ ವರ್ಕೌಟ್​ ಮಾಡುವ 56 ವರ್ಷದ ಅತ್ತೆ

| Updated By: ಶ್ರೀದೇವಿ ಕಳಸದ

Updated on: Nov 21, 2022 | 4:43 PM

Workout : ಮೊಣಕಾಲು ನೋವಿಗೆ ವ್ಯಾಯಾಮವೊಂದೇ ಪರಿಹಾರವೆನ್ನಿಸಿ ಸೊಸೆಯೊಂದಿಗೆ ಜಿಮ್​ಗೆ ಹೋಗಲಾರಂಭಿಸಿದರು ಈ ಅತ್ತೆ. ಪವರ್​ ಲಿಫ್ಟಿಂಗ್​, ಪುಷಪ್ಸ್​ನ್ನು ಆರಾಮದಾಯಕವಾಗಿ ಮಾಡುತ್ತಾರೆ. ನೋಡಿ ವಿಡಿಯೋ.

ಸೀರೆಯುಟ್ಟು ಸೊಸೆಯೊಂದಿಗೆ ವರ್ಕೌಟ್​ ಮಾಡುವ 56 ವರ್ಷದ ಅತ್ತೆ
56 ವರ್ಷದ ಅತ್ತೆ ಮತ್ತು ಸೊಸೆಯ ವರ್ಕೌಟ್​
Follow us on

Viral Video : ವಯಸ್ಸಿಗೂ ಕಲಿಕೆಗೂ ಸಂಬಂಧವೇ ಇಲ್ಲ. ಅದರಲ್ಲಿಯೂ ನಿಮ್ಮ ಆಸಕ್ತಿ ದೇಹಕ್ಕೆ ಸಂಬಂಧಿಸಿದ್ದು, ಅದಕ್ಕೆ ಪೂರಕವಾದ ಕಲಿಕೆ, ಹವ್ಯಾಸ, ಅಭ್ಯಾಸದಿಂದ ನಿಮ್ಮಲ್ಲಿ ಚೈತನ್ಯವಿದೆ ಎಂತಾದರೆ ಮುಲಾಜೇ ಬೇಡ. ಇಂಥ ಮುಲಾಜನ್ನು ಇಟ್ಟುಕೊಳ್ಳದೆ ಸೀರೆಯುಟ್ಟೇ ದಿನವೂ ಸೊಸೆಯೊಂದಿಗೆ ಜಿಮ್​ ವರ್ಕೌಟ್ ಮಾಡುತ್ತಾರೆ 56 ವರ್ಷದ ಈ ಅತ್ತೆ. ಇದೀಗ ಈ ಅತ್ತೆ ಸೊಸೆಯ ವಿಡಿಯೋ ವೈರಲ್ ಆಗಿದೆ.

ಇನ್​ಸ್ಟಾಗ್ರಾಂನ ಹ್ಯೂಮನ್ಸ್​ ಆಫ್​ ಮದ್ರಾಸ್​ನ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 56 ವರ್ಷದ ಈ ಮಹಿಳೆ ಮೊದಲಿನಿಂದಲೂ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಆಗ ಇವರ ಮಗ ವ್ಯಾಯಾಮವೇ ಇದಕ್ಕೆ ಮದ್ದು ಎಂದು ತಿಳಿಸಿದ.  52 ವಯಸ್ಸಿಗೆ ಜಿಮ್​ ಮದ್ರಾಸ್​ ಬಾರ್ಬೆಲ್ಸ್​ಗೆ ಸೇರಿದಳು. ತನ್ನ ಸೊಸೆಯೊಂದಿಗೆ ಪವರ್​ ಲಿಫ್ಟ್​, ಸ್ಕ್ವಾಟ್​ ಮುಂತಾದ ಚಟುವಟಿಕೆಗಳಲ್ಲಿ ಭಾಗಿಯಾಗತೊಡಗಿದರು. ಎಷ್ಟೇ ಕಷ್ಟಕರವಾದ ವ್ಯಾಯಾಮದಲ್ಲಿ ತೊಡಗಿಕೊಂಡರೂ ಈತನಕವೂ ಅವರು ಸೀರೆ ಬಿಟ್ಟು ಬೇರೆ ಆರಾಮದಾಯಕ ಉಡುಪನ್ನು ಧರಿಸಿದ್ದೇ ಇಲ್ಲ.

ಪವರ್ ಲಿಫ್ಟಿಂಗ್​, ಪುಷಪ್ಸ್​ನ್ನು ಈ ವಯಸ್ಸಿನಲ್ಲಿಯೂ ನಿರಾಯಾಸವಾಗಿ ಮಾಡುತ್ತಾರೆ ಈಕೆ. ನೆಟ್ಟಿಗರು ಇವರ ಈ ರೀತಿಗೆ ಬೆರಗಾಗಿ ಸ್ಫೂರ್ತಿಗೊಂಡಿದ್ದಾರೆ. ಈ ವಿಡಿಯೋ ಮಿಲಿಯನ್​ಗಿಂತಲೂ ಹೆಚ್ಚು ಜನರನ್ನು ತಲುಪಿದೆ.

ಮಹಿಳೆಯರೆಂದರೆ ಹೀಗೇ ಇರಬೇಕು ಎನ್ನುವ ನಿಶ್ಚಿತ ಚೌಕಟ್ಟನ್ನು ಈ ವಿಡಿಯೋ ಮುರಿದಿದೆ. ಒಳ್ಳೆಯ ವಿಷಯ ಇದು ಎಂದಿದ್ದಾರೆ ಕೆಲವರು. ನಿಜಕ್ಕೂ ಇದು ಸ್ಫೂರ್ತಿದಾಯಕ ವಿಡಿಯೋ ಎಂದಿದ್ದಾರೆ ಮತ್ತೊಬ್ಬರು.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 2:29 pm, Mon, 21 November 22