ಟಿಂಡರ್ ಡೇಟ್​ನ ನಂತರ ಜೈಲುಪಾಲಾದ ವ್ಯಕ್ತಿ

Capitol Riot : ಡೇಟ್​ ಮುಗಿದ ಮರುದಿನ ಅಮೆರಿಕದ ಸಂಸತ್ತಿನೆದುರು ಗಲಭೆ ಎದ್ದಿದ್ದನ್ನು ಟಿವಿಯಲ್ಲಿ ನೋಡಿದ ಈತ ಉಬರ್​ನಲ್ಲಿ ಪ್ರಯಾಣಿಸಿ ಆ ಗುಂಪಿಗೆ ಸೇರಿಕೊಂಡ. ಇದೀಗ ಪೊಲೀಸರು ಈ ವ್ಯಕ್ತಿಗೆ 30 ದಿನಗಳ ಜೈಲುಶಿಕ್ಷೆ ನೀಡಿದ್ದಾರೆ.

ಟಿಂಡರ್ ಡೇಟ್​ನ ನಂತರ ಜೈಲುಪಾಲಾದ ವ್ಯಕ್ತಿ
A man was arrested for participating in Capital Riot after a tinder date
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 21, 2022 | 3:59 PM

Viral Video : 2022ರ ಜನವರಿ 6 ರಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಸ್ಟಾಪ್ ದಿ ಸ್ಟೀಲ್’ ರ್ಯಾಲಿಯ ಮುನ್ನಾದಿನದಂದು ಡೆಲ್​ವೇರ್​ನ ಉದ್ಯಮಿ ಸ್ಕೇಫರ್ ಟಿಂಡರ್ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಪರಿಚಯವಾದ ಮಹಿಳೆಯೊಂದಿಗೆ ರಾತ್ರಿ ಕಳೆಯಲು ಡೆಲವೇರ್‌ನಿಂದ ವರ್ಜೀನಿಯಾಕ್ಕೆ ಪ್ರಯಾಣಿಸಿದ. ಡೇಟ್​ ಮುಗಿದ ಮರುದಿನ ಅಮೆರಿಕದ ಸಂಸತ್ತಿನೆದುರು ಗಲಭೆ ಎದ್ದಿದ್ದನ್ನು ಟಿವಿಯಲ್ಲಿ ನೋಡಿದ ಈತ ಉಬರ್​ನಲ್ಲಿ ಪ್ರಯಾಣಿಸಿ ಆ ಗುಂಪಿಗೆ ಸೇರಿಕೊಂಡ. ಇದೀಗ ಪೊಲೀಸರು ಈ ವ್ಯಕ್ತಿಗೆ 30 ದಿನಗಳ ಜೈಲುಶಿಕ್ಷೆ ನೀಡಿದ್ದಾರೆ. ಗಲಭೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ 2,000 ಡಾಲರ್​ ದಂಡ ವಿಧಿಸಿದ್ದಾರೆ. ಅಮೆರಿಕದ ಜಿಲ್ಲಾ ನ್ಯಾಯಾಧೀಶ ಥಾಮಸ್​ ಹೊಗನ್ ಈ ಕುರಿತು​ ಶುಕ್ರವಾರ ಆದೇಶಿಸಿದ್ದಾರೆ.

ಸ್ಕೇಫರ್ ಸೆನೆಟ್ ವಿಂಗ್​ನ ಬಾಗಿಲುಗಳ ಬಳಿ ಇರುವ ಮುರಿದ ಕಿಟಕಿಯ ಮೂಲಕ ಸಂಸತ್ತನ್ನು ಪ್ರವೇಶಿಸಿ ಗಲಭೆ ನಡೆಸುತ್ತಿದ್ದ ಗುಂಪಿನೊಂದಿಗೆ ಸ್ಕೇಫರ್​ ಸೇರಿಸಿಕೊಂಡಿದ್ದಾನೆ. ಸುಮಾರು 28 ನಿಮಿಷಗಳ ಕಾಲ ಗಲಭೆಗೆ ಈತ ಸಾಕ್ಷಿಯಾಗಿದ್ದಾನೆ. ಈ ಕುರಿತು ಎಲ್ಲ ಸಾಕ್ಷ್ಯಾಧಾರಗಳನ್ನು ಸಾಬೀತುಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ 36 ವರ್ಷದ ಸ್ಕೇಫರ್​ನನ್ನು ಅಪರಾಧಿ ಎಂದು ಪರಿಗಣಿಸಬೇಕೆಂದು 2022ರ ಜನವರಿಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ  : ಮೆನ್ಸ್​ ಡೇ ಪಂಚಾಂಗದಾಗೂ ಇಲ್ಲ ಮತ್ತ ಗೂಗಲ್​ ಡೂಡಲ್​ದಾಗೂ ಇಲ್ಲ; ಸೋನು ವೇಣುಗೋಪಾಲ

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಅಧ್ಯಕ್ಷ ಜೋ ಬೈಡನ್​ ಅವರ 2020 ರ ಚುನಾವಣಾ ಫಲಿತಾಂಶದ ಸಂದರ್ಭದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಯಾವುದೇ ರೀತಿಯ ಹಿಂಸಾಚಾರದಲ್ಲಿ ಸ್ಕೇಫರ್ ತೊಡಗಿಕೊಂಡಿಲ್ಲ ಎಂದು ಸ್ಕೇಫರ್​ ಪರ ವಕೀಲ ಜೋಶುವಾ ವಾದಿಸಿದ್ದರೂ ನ್ಯಾಯಾಲಯ ಇವರ ವಾದವನ್ನು ತಳ್ಳಿಹಾಕಿತು. ನಂತರ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:58 pm, Mon, 21 November 22

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ