ಸೀರೆಯುಟ್ಟು ಸೊಸೆಯೊಂದಿಗೆ ವರ್ಕೌಟ್ ಮಾಡುವ 56 ವರ್ಷದ ಅತ್ತೆ
Workout : ಮೊಣಕಾಲು ನೋವಿಗೆ ವ್ಯಾಯಾಮವೊಂದೇ ಪರಿಹಾರವೆನ್ನಿಸಿ ಸೊಸೆಯೊಂದಿಗೆ ಜಿಮ್ಗೆ ಹೋಗಲಾರಂಭಿಸಿದರು ಈ ಅತ್ತೆ. ಪವರ್ ಲಿಫ್ಟಿಂಗ್, ಪುಷಪ್ಸ್ನ್ನು ಆರಾಮದಾಯಕವಾಗಿ ಮಾಡುತ್ತಾರೆ. ನೋಡಿ ವಿಡಿಯೋ.
Viral Video : ವಯಸ್ಸಿಗೂ ಕಲಿಕೆಗೂ ಸಂಬಂಧವೇ ಇಲ್ಲ. ಅದರಲ್ಲಿಯೂ ನಿಮ್ಮ ಆಸಕ್ತಿ ದೇಹಕ್ಕೆ ಸಂಬಂಧಿಸಿದ್ದು, ಅದಕ್ಕೆ ಪೂರಕವಾದ ಕಲಿಕೆ, ಹವ್ಯಾಸ, ಅಭ್ಯಾಸದಿಂದ ನಿಮ್ಮಲ್ಲಿ ಚೈತನ್ಯವಿದೆ ಎಂತಾದರೆ ಮುಲಾಜೇ ಬೇಡ. ಇಂಥ ಮುಲಾಜನ್ನು ಇಟ್ಟುಕೊಳ್ಳದೆ ಸೀರೆಯುಟ್ಟೇ ದಿನವೂ ಸೊಸೆಯೊಂದಿಗೆ ಜಿಮ್ ವರ್ಕೌಟ್ ಮಾಡುತ್ತಾರೆ 56 ವರ್ಷದ ಈ ಅತ್ತೆ. ಇದೀಗ ಈ ಅತ್ತೆ ಸೊಸೆಯ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿView this post on Instagram
ಇನ್ಸ್ಟಾಗ್ರಾಂನ ಹ್ಯೂಮನ್ಸ್ ಆಫ್ ಮದ್ರಾಸ್ನ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 56 ವರ್ಷದ ಈ ಮಹಿಳೆ ಮೊದಲಿನಿಂದಲೂ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಆಗ ಇವರ ಮಗ ವ್ಯಾಯಾಮವೇ ಇದಕ್ಕೆ ಮದ್ದು ಎಂದು ತಿಳಿಸಿದ. 52 ವಯಸ್ಸಿಗೆ ಜಿಮ್ ಮದ್ರಾಸ್ ಬಾರ್ಬೆಲ್ಸ್ಗೆ ಸೇರಿದಳು. ತನ್ನ ಸೊಸೆಯೊಂದಿಗೆ ಪವರ್ ಲಿಫ್ಟ್, ಸ್ಕ್ವಾಟ್ ಮುಂತಾದ ಚಟುವಟಿಕೆಗಳಲ್ಲಿ ಭಾಗಿಯಾಗತೊಡಗಿದರು. ಎಷ್ಟೇ ಕಷ್ಟಕರವಾದ ವ್ಯಾಯಾಮದಲ್ಲಿ ತೊಡಗಿಕೊಂಡರೂ ಈತನಕವೂ ಅವರು ಸೀರೆ ಬಿಟ್ಟು ಬೇರೆ ಆರಾಮದಾಯಕ ಉಡುಪನ್ನು ಧರಿಸಿದ್ದೇ ಇಲ್ಲ.
ಪವರ್ ಲಿಫ್ಟಿಂಗ್, ಪುಷಪ್ಸ್ನ್ನು ಈ ವಯಸ್ಸಿನಲ್ಲಿಯೂ ನಿರಾಯಾಸವಾಗಿ ಮಾಡುತ್ತಾರೆ ಈಕೆ. ನೆಟ್ಟಿಗರು ಇವರ ಈ ರೀತಿಗೆ ಬೆರಗಾಗಿ ಸ್ಫೂರ್ತಿಗೊಂಡಿದ್ದಾರೆ. ಈ ವಿಡಿಯೋ ಮಿಲಿಯನ್ಗಿಂತಲೂ ಹೆಚ್ಚು ಜನರನ್ನು ತಲುಪಿದೆ.
ಮಹಿಳೆಯರೆಂದರೆ ಹೀಗೇ ಇರಬೇಕು ಎನ್ನುವ ನಿಶ್ಚಿತ ಚೌಕಟ್ಟನ್ನು ಈ ವಿಡಿಯೋ ಮುರಿದಿದೆ. ಒಳ್ಳೆಯ ವಿಷಯ ಇದು ಎಂದಿದ್ದಾರೆ ಕೆಲವರು. ನಿಜಕ್ಕೂ ಇದು ಸ್ಫೂರ್ತಿದಾಯಕ ವಿಡಿಯೋ ಎಂದಿದ್ದಾರೆ ಮತ್ತೊಬ್ಬರು.
ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:29 pm, Mon, 21 November 22