ಉಕ್ರೇನ್​ ಸೇನೆ ಸೇರಲು ಸರತಿ ಸಾಲಿನಲ್ಲಿ ನಿಂತ 80 ವರ್ಷದ ವೃದ್ಧ: ಫೋಟೋ ವೈರಲ್​

| Updated By: Pavitra Bhat Jigalemane

Updated on: Feb 26, 2022 | 9:46 AM

ದೇಶ ಉಳಸಿಕೊಳ್ಳಲು ಉಕ್ರೇನ್​ ಸರ್ಕಾರ ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿ ಯುದ್ಧಕ್ಕೆ ಕಳುಹಿಸುತ್ತಿದೆ. ಈ ನಡುವೆ 80 ವರ್ಷದ ವೃದ್ಧರೋಬ್ಬರು ಬ್ಯಾಗ್​ ಹಿಡಿದು ಸೇನೆ ಸೇರಲು ಹೋದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಉಕ್ರೇನ್​ ಸೇನೆ ಸೇರಲು ಸರತಿ ಸಾಲಿನಲ್ಲಿ ನಿಂತ 80 ವರ್ಷದ ವೃದ್ಧ: ಫೋಟೋ ವೈರಲ್​
ವೈರಲ್​ ಫೋಟೋ
Follow us on

ರಷ್ಯಾ (Russia)  ಸೇನೆಯ ದಾಳಿಗೆ ನಲುಗಿದ ಉಕ್ರೇನ್ (Ukraine)​ ಸ್ಥಿತಿ ಹೇಳತೀರದಾಗಿದೆ.  ನಾಗರಿಕರ, ಸೈನಿಕರ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಈಗಾಗಲೇ ಉಕ್ರೇನ್​ ರಾಜಧಾನಿಯನ್ನು ವಶಪಡಿಸಿಕೊಳ್ಳುವತ್ತ ರಷ್ಯಾ ಸೇನೆ ಮುನ್ನುಗ್ಗುತ್ತಿದೆ. ಈ ನಡುವೆ ಒಂದಷ್ಟು ಮನಕಲಕುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಕೊಳ್ಳುತ್ತಿದ್ದು, ಉಕ್ರೇನ್​ನ ಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ. ಈಗಾಗಲೇ ಪ್ರೀತಿ ಪಾತ್ರರನ್ನು ಕಳೆದುಕೊಂಡ, ಕಳೆದುಕೊಳ್ಳವ ಆತಂಕದಲ್ಲಿರುವ ಭಯಹುಟ್ಟಿಸುವ ಫೋಟೋಗಳು, ಯುದ್ಧಕ್ಕೆ ಹೋಗುವ ಮುಂಚೆ ಮಗಳನ್ನು ಮುದ್ದಾಡಿದ ತಂದೆಯ ವಿಡಿಯೋ, ಅನ್ನ, ನೀರಿಲ್ಲದೆ ಹಸಿವೆಯಿಂದ ಬಳಲುತ್ತಿರುವ ಜನರ ಫೋಟೊಗಳು ವೈರಲ್​ ಆಗಿವೆ. ದೇಶ ಉಳಸಿಕೊಳ್ಳಲು ಉಕ್ರೇನ್​ ಸರ್ಕಾರ ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿ ಯುದ್ಧಕ್ಕೆ ಕಳುಹಿಸತ್ತಿದೆ. ಈ ನಡುವೆ 80 ವರ್ಷದ ವೃದ್ಧರೋಬ್ಬರು ಬ್ಯಾಗ್​ ಹಿಡಿದು ಸೇನೆ ಸೇರಲು ಸರತಿ ಸಾಲಿನಲ್ಲಿ ನಿಂತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಟ್ವಿಟರ್​ನಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ. 80 ವೃರ್ಷದ ವೃದ್ಧ ಕೈಲ್ಲೊಂದು ಬ್ಯಾಗ್​ ಹಿಡಿದು ಸೇನೆಗೆ ಸೇರಲು ಸರತಿ ಸಾಲಿನಲ್ಲಿ ನಿಂತಿರುವುದನ್ನು ಫೋಟೋದಲ್ಲಿ ಕಾಣಬಹುದು. ಈ ಬಗ್ಗೆ ಇಂಡಿಯಾ ಟುಡೆ ಮಾಹಿತಿ ಹಂಚಿಕೊಂಡಿದೆ, ವೃದ್ಧನ ಬ್ಯಾಗ್​ನಲ್ಲಿ 2 ಟೀ ಶರ್ಟ್​, ಪ್ಯಾಂಟ್ಸ್​, ಟೂತ್​​ಬ್ರಶ್​,  ಹಾಗೂ ಸ್ವಲ್ಪ ತಿಂಡಿಯಿದೆ. ನೀವೇಕೆ ಬಂದಿದ್ದೀರಿ ಎಂದರೆ, ನನ್ನ ಮೊಮ್ಮಕ್ಕಳನ್ನು ಉಳಿಸಿಕೊಳ್ಳಬೇಕು ಅದಕ್ಕಾಗಿಯೇ ಯುದ್ಧಮಾಡಬೇಕು ಎಂದಿದ್ದಾರೆ ಎಂದು ವರದಿ ತಿಳಿಸಿದೆ. ಸದ್ಯ ಈ ಫೋಟೋ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್​ ಗಳಿಸಿದ್ದು, ನೆಟ್ಟಿಗರು ವೃದ್ಧನ ಧೈರ್ಯವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

ರಷ್ಯಾ-ಉಕ್ರೇನ್​ ಯುದ್ಧ: ದೇಶದ ಪರವಾಗಿ ನಿಂತು ಮಗಳಿಗೆ ಕಣ್ಣೀರಿನ ವಿದಾಯ ಹೇಳಿದ ತಂದೆ: ವಿಡಿಯೋ ವೈರಲ್​

Published On - 9:45 am, Sat, 26 February 22