ಯುವಕರೇ ನಾಚಿ ನೀರಾಗುವಂತೆ ಜಿಮ್​​ನಲ್ಲಿ ಫಿಟ್ನೆಸ್​​ ಮೆಂಟೇನ್​​​​ ಮಾಡುತ್ತಿರುವ 103ರ ವಯಸ್ಸಿನ ಅಜ್ಜಿ

ಕ್ಯಾಲಿಫೋರ್ನಿಯಾದ 103 ವಯಸ್ಸಿನ ತೆರೇಸಾ ಮೂರ್ ಈಗಲೂ ಕೂಡ ವಾರದಲ್ಲಿ ಮೂರರಿಂದ ನಾಲ್ಕು ದಿನ ಜಿಮ್​​ನಲ್ಲಿ ವರ್ಕ್​ಟ್​​​​ ಮಾಡಿ ಫಿಟ್ನೆಸ್​​ ಮೆಂಟೇನ್​​​​​ ಮಾಡುತ್ತಿದ್ದಾರೆ. ಇದೀಗಾ ಅವರು ಜಿಮ್​​ನಲ್ಲಿ ವರ್ಕ್​ಟ್ ಮಾಡುತ್ತಿದ್ದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಯುವಕರೇ ನಾಚಿ ನೀರಾಗುವಂತೆ ಜಿಮ್​​ನಲ್ಲಿ ಫಿಟ್ನೆಸ್​​ ಮೆಂಟೇನ್​​​​   ಮಾಡುತ್ತಿರುವ 103ರ ವಯಸ್ಸಿನ ಅಜ್ಜಿ
103 ವಯಸ್ಸಿನ ತೆರೇಸಾ ಮೂರ್
Image Credit source: Fox News

Updated on: Mar 14, 2023 | 10:52 AM

ಇತ್ತೀಚಿನ ದಿನಗಳಲ್ಲಿ 40 ವರ್ಷ ಕಳೆಯುತ್ತಿದ್ದಂತೆ ಅಯ್ಯೋ ವಯಸ್ಸಾಯಿತು ಅನ್ನುವವರೇ ಹೆಚ್ಚು. ಜೊತೆಗೆ ಸೊಂಟ ನೋವು, ಮಂಡಿ ನೋವು ಹೀಗೆ ಸಾಕಷ್ಟು ಸಮಸ್ಯೆಗಳನ್ನು ಕಾಣಬಹುದು. ಆದರೆ ಇಲ್ಲೊಬ್ಬರು ಯುವಕರನ್ನೇ ನಾಚಿಸುವಂತೆ ಜಿಮ್​​ನಲ್ಲಿ ವರ್ಕ್​ಟ್​​​​ ಮಾಡಿ ಫಿಟ್ನೆಸ್​​​​ ಮೆಂಟೇನ್​​   ಮಾಡುತ್ತಿದ್ದಾರೆ​​. ಇವರ ವಯಸ್ಸು ಕೇಳಿದ್ರೆ ನೀವು ದಂಗಾಗುವುದಂತೂ ಖಂಡಿತಾ. ಹೌದು ಕ್ಯಾಲಿಫೋರ್ನಿಯಾದ 103 ವಯಸ್ಸಿನ ತೆರೇಸಾ ಮೂರ್ ಎಂಬ ಅಜ್ಜಿ ಈಗಲೂ ಕೂಡ ವಾರದಲ್ಲಿ ಮೂರರಿಂದ ನಾಲ್ಕು ದಿನ ಜಿಮ್​​ನಲ್ಲಿ ವರ್ಕ್​ಟ್​​​​ ಮಾಡಿ ಫಿಟ್ನೆಸ್​​ ಮೈಟೇನ್ ಮಾಡುತ್ತಿದ್ದಾರೆ. ಇದೀಗಾ ಅವರು ಜಿಮ್​​ನಲ್ಲಿ ವರ್ಕ್​ಟ್ ಮಾಡುತ್ತಿದ್ದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಟ್ವಿಟರ್​​​ನಲ್ಲಿ ಹಂಚಿಕೊಂಡ ಪೋಸ್ಟ್​​​​​​ ಇಲ್ಲಿದೆ ನೋಡಿ.

ಇತ್ತೀಚೆಗಷ್ಟೇ (ಮಾ.12) ಟ್ವಿಟರ್​​ನಲ್ಲಿ 103 ವಯಸ್ಸಿನ ಅಜ್ಜಿ ವರ್ಕ್​ಟ್ ಮಾಡುತ್ತಿರುವ ಪೋಟೋವನ್ನು @Pubity ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೆಲವೇ ಕ್ಷಣಗಳಲ್ಲಿ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಮತ್ತು ಲೈಕ್‌ಗಳು ಕೂಡ ಹರಿದು ಬರುತ್ತಿವೆ.

ಇದನ್ನೂ ಓದಿ: ತಾಳಿ ಕಟ್ಟುವ ಶುಭ ವೇಳೆ, ಹಸೆಮಣೆ ಮೇಲೆ ಕುಳಿತ ವಧು ಮದುವೆ ಮಂಟಪದಲ್ಲಿ ಏನು ಮಾಡಿದಳು ನೋಡಿ! ವೈರಲ್ ವಿಡಿಯೋ ಇಲ್ಲಿದೆ

ಈಗಷ್ಟೇ 18 ವಯಸ್ಸು ತುಂಬಿದ ಹೆಣ್ಣಿನಂತೆ ಮೇಕ್​​ಅಪ್​​ ಮಾಡಿಕೊಂಡು ಜಿಮ್​​​ಗೆ ಬರುತ್ತಾರೆ. ಜೊತೆಗೆ ಈ ಇಳಿ ವಯಸ್ಸಿನಲ್ಲಿಯೂ ಕೂಡ ತನ್ನ ಸೌಂದರ್ಯದ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತಾರೆ. ಜೊತೆಗೆ ತನ್ನ ಸ್ನೇಹಿತರೊಂದಿಗೆ ಪಾರ್ಟಿಗಳಲ್ಲಿ ಸಮಯ ಕಳೆಯುತ್ತಾರೆ. ಈ ವಯಸ್ಸಿನಲ್ಲಿ ಹಾಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ ಎಂದು ಮಗಳು ಶೀಲಾ ಮೂರ್ ಮಾಧ್ಯಮಗಳೊಂದಿಗೆ ಖುಷಿಯನ್ನು ಹಂಚಿಕೊಂಡಿದ್ದಾರೆ.

ತೆರೇಸಾ ಇಟಲಿಯಲ್ಲಿ ಜನಿಸಿದರು. 1946 ರಲ್ಲಿ, ಅವರು ಸೇನಾ ಅಧಿಕಾರಿಯನ್ನು ವಿವಾಹವಾದರು. ಅಂದಿನಿಂದ ಪ್ರಪಂಚದ ಅನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ. ತನ್ನ ಮಗಳು ನನಗೆ ಸಾಕಷ್ಟು ಬೆಂಬಲ ನೀಡುತ್ತಾಳೆ ಎಂದು 103ನೇ ವಯಸ್ಸಿನ ಅಜ್ಜಿ ಹೇಳಿರುವುದು ನ್ಯೂಯಾರ್ಕ್ ಪೋಸ್ಟ್ ವರದಿಂದ ತಿಳಿದುಬಂದಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 10:45 am, Tue, 14 March 23

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us