Viral News: ತನ್ನ 112 ನೇ ಇಳಿವಯಸ್ಸಿನಲ್ಲೂ 8ನೇ ಮದುವೆಯಾಗಲು ಸಿದ್ಧವಾದ ಅಜ್ಜಿ

112 ವರ್ಷದ ಮುದುಕಿಯೊಬ್ಬಳು ತನ್ನ ಈ ಇಳಿವಯಸ್ಸಿನಲ್ಲೂ ಯಾರಾದರೂ ಪ್ರಪೋಸ್ ಮಾಡಿದರೆ ಮತ್ತೆ ಮದುವೆಯಾಗಲು ಸಿದ್ಧವಿರುವೆ ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ಏಳುಬಾರಿ ಮದುವೆಯಾಗಿ 5 ಮಕ್ಕಳು, 19 ಮೊಮ್ಮಕ್ಕಳು ಮತ್ತು 30 ಮರಿ ಮೊಮ್ಮಕ್ಕಳನ್ನು ಹೊಂದಿದ್ದಾರೆ.

Viral News: ತನ್ನ 112 ನೇ ಇಳಿವಯಸ್ಸಿನಲ್ಲೂ 8ನೇ ಮದುವೆಯಾಗಲು ಸಿದ್ಧವಾದ ಅಜ್ಜಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Jan 12, 2024 | 6:50 PM

ಮಲೇಷಿಯಾದ ಸಿತಿ ಹವಾ(112) ತನಗೆ ಯಾರಾದರೂ ಪ್ರಪೋಸ್ ಮಾಡಿದರೆ ಮರುಮದುವೆಯಾಗಲು ಸಿದ್ಧವಿರುವೆ ಎಂದು ಹೇಳಿಕೊಂಡಿದ್ದಾರೆ. ಈ ಇಳಿವಯಸ್ಸಿನಲ್ಲೂ ತನ್ನ ದೈನಂದಿನ ಕೆಲಸಕಾರ್ಯಗಳಲ್ಲಿ ಸಕ್ರಿಯವಾಗಿರುವ ಇವರು ದಿನಕ್ಕೆ ಐದು ಬಾರಿ ಪ್ರಾರ್ಥನೆಯನ್ನು ಮಾಡುತ್ತಾರೆ. ಆರೋಗ್ಯಕರ ಜೀವನ ನಡೆಸುವ ಈ ಮಹಿಳೆ ತನ್ನ 7 ಪತಿಯರಿಂದ ವಿಚ್ಛೇದನ ಪಡೆದು ಇದೀಗಾ 8 ಮದುವೆಯಾಗಲು ರೆಡಿಯಾಗಿದ್ದಾರೆ. ಬಹುತೇಕ ಒಡಹುಟ್ಟಿದವರು ಮತ್ತು ಸ್ನೇಹಿತರು ನಿಧನರಾಗಿದ್ದು ತಾನಿನ್ನೂ ಯಾರದೇ ನೆರವಿಲ್ಲದೇ ಆರೋಗ್ಯಕರ ಜೀವನ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿಕೊಂಡಿದ್ದಾರೆ.

ಚೀನಾ ಕೊಸ್ಮೊ ಪ್ರೆಸ್ ವರದಿಯ ಪ್ರಕಾರ, ಸಿತಿ ಹವಾ ಅವರು ತಮ್ಮ ಏಳು ಮದುವೆಗಳಿಂದ 58 ಮತ್ತು 65 ರ ನಡುವಿನ ಐದು ಮಕ್ಕಳನ್ನು ಹೊಂದಿದ್ದಾರೆ. ಅವರ ಮಕ್ಕಳ ಮೂಲಕ, ಅವರು 19 ಮೊಮ್ಮಕ್ಕಳು ಮತ್ತುಮರಿ ಮೊಮ್ಮಕ್ಕಳನ್ನು ಹೊಂದಿದ್ದಾರೆ. ಪ್ರಸ್ತುತ ತನ್ನ ಕಿರಿಯ ಮಗ ಮತ್ತು ಸೊಸೆಯೊಂದಿಗೆ ವಾಸಿಸುತ್ತಿರುವ ಸಿತಿ ಹವಾ, ಯಾರಾದರೂ ತನಗೆ ಪ್ರಪೋಸ್ ಮಾಡಿದರೆ ಮರುಮದುವೆಯಾಗುವ ಸಿದ್ಧನಿದ್ದೇನೆ ಎಂದು ಹಾಸ್ಯಮಯವಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಆಟವಾಡುತ್ತಾ ನಿಂಬೆಹಣ್ಣು ನುಂಗಿದ 9 ತಿಂಗಳ ಮಗು ಸಾವು

ತನ್ನ 112 ನೇ ವಯಸ್ಸಿನಲ್ಲೂ ಯಾರ ಸಹಾಯವಿಲ್ಲದೇ ಆರಾಮವಾಗಿ ಓಡಾಡುತ್ತಾರೆ. ಆದರೆ ವಯೋಸಹಜವಾದ ಸ್ವಲ್ಪ ಶ್ರವಣ ದೋಷ ಮತ್ತು ದೃಷ್ಟಿದೋಷದ ಸಮಸ್ಯೆಯಿದೆ. ಆದರೆ ಶತಾಯುಷಿಯು ತನ್ನ ದೀರ್ಘಾಯುಷ್ಯದ ಬಗ್ಗೆ ಯಾವುದೇ ರಹಸ್ಯವನ್ನು ಹೇಳಿಕೊಂಡಿಲ್ಲ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us