ಬಾಲಕ ಮೊಬೈಲ್​​​​ನಲ್ಲಿ ಗೇಮ್ ಆಡುತ್ತಿದ್ದಂತೆ ಕಚೇರಿಯೊಳಗೆ ನುಗ್ಗಿದ ಚಿರತೆ

|

Updated on: Mar 06, 2024 | 3:24 PM

ಮಂಟಪದ ಬುಕಿಂಗ್ ಕಚೇರಿಯ ಪ್ರವೇಶ ದ್ವಾರದ ಬಳಿಯ ಬಾಲಕ ಕುಳಿತು ಮೊಬೈಲ್​​ನಲ್ಲಿ ಆಟವಾಡುತ್ತಿರುವುದನ್ನು ಸಿಸಿಟಿವಿಯಲ್ಲಿ ಕಾಣಬಹುದು. ಸ್ವಲ್ಪ ಹೊತ್ತಿನಲ್ಲಿ ಚಿರತೆ ಕಚೇರಿಯ ಒಳಗೆ ಬರುತ್ತಿರುವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿ ಎದೆ ನಡುಕ ಹುಟ್ಟಿಸುವುದಂತೂ ಖಂಡಿತಾ.

ಬಾಲಕ ಮೊಬೈಲ್​​​​ನಲ್ಲಿ ಗೇಮ್ ಆಡುತ್ತಿದ್ದಂತೆ ಕಚೇರಿಯೊಳಗೆ ನುಗ್ಗಿದ ಚಿರತೆ
Follow us on

ಮಹಾರಾಷ್ಟ್ರದ ಮಾಲೆಗಾಂವ್‌ನ ಸಾಯಿ ಸೆಲೆಬ್ರೇಷನ್ ಮದುವೆ ಮಂಟಪದ ಬುಕಿಂಗ್ ಕಚೇರಿಯೊಳಗೆ ಏಕಾಏಕಿ ಚಿರತೆ ನುಗ್ಗಿದ್ದು, ಅಲ್ಲೇ ಪಕ್ಕದಲ್ಲಿ ಕುಳಿತು ಮೊಬೈನಲ್ಲಿ ಗೇಮ್ ಆಡುತ್ತಿದ್ದ ಬಾಲಕ ಮೋಹಿತ್ ಅಹಿರೆ (12) ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿರತೆ ರಾಜಾರೋಷವಾಗಿ ಕಚೇರಿಯೊಳಗೆ ಪ್ರವೇಶಿಸುತ್ತಿರುವುದು ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿರತೆ ಒಳಗಡೆ ಪ್ರವೇಶಿಸುತ್ತಿದ್ದಂತೆ ಬಾಲಕ ತಕ್ಷಣ ಹೊರಗೆ ಧಾವಿಸಿ ಬಾಗಿಲು ಹಾಕಿಕೊಂಡಿದ್ದಾನೆ. ಬಾಲಕನ ಧೈರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಲೆಗಾಂವ್-ನಂಪುರ್ ರಸ್ತೆಯಲ್ಲಿರುವ ಸಾಯಿ ಸೆಲೆಬ್ರೇಷನ್ ಮದುವೆ ಮಂಟಪದಲ್ಲಿ ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ. ಆ ಸಮಯದಲ್ಲಿ, ಮಂಟಪದ ಬುಕಿಂಗ್ ಕಚೇರಿಯ ಪ್ರವೇಶ ದ್ವಾರದ ಬಳಿಯ ಬಾಲಕ ಕುಳಿತು ಮೊಬೈಲ್​​ನಲ್ಲಿ ಆಟವಾಡುತ್ತಿರುವುದನ್ನು ಸಿಸಿಟಿವಿಯಲ್ಲಿ ಕಾಣಬಹುದು. ಸ್ವಲ್ಪ ಹೊತ್ತಿನಲ್ಲಿ ಚಿರತೆ ಕಚೇರಿಯ ಒಳಗೆ ಬರುತ್ತಿರುವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿ ಎದೆ ನಡುಕ ಹುಟ್ಟಿಸುವುದಂತೂ ಖಂಡಿತಾ.

ಇದನ್ನೂ ಓದಿ: Mental Abuse: ಫಸ್ಟ್ ನೈಟ್‌ ದಿನದಿಂದಲೇ ಗಂಡು ಮಗು ಹೆರುವಂತೆ ಅತ್ತೆ ಮಾವನಿಂದ ಕಿರುಕುಳ; ಕೋರ್ಟ್​​​ ಮೆಟ್ಟಿಲೇರಿದ ಯುವತಿ

“ಚಿರತೆ ತುಂಬಾ ಹತ್ತಿರದಲ್ಲಿತ್ತು. ನನ್ನ ಮುಂದೆಯೇ ಕ್ಯಾಬಿನ್‌ಗೆ ಕಾಲಿಟ್ಟಿದ್ದನ್ನು ಕಂಡು ನನಗೆ ಭಯವಾಯಿತು, ಆದರೆ ನಾನು ಸದ್ದಿಲ್ಲದೆ ಬೆಂಚ್‌ನಿಂದ ಇಳಿದು ಹೊರಗೆ ಓಡಿ ಬಾಗಿಲು ಮುಚ್ಚಿದೆ” ಎಂದು ಅಹಿರೆ ಕೇಳಿಕೊಂಡಿರುವುದು ವರದಿಯಾಗಿದೆ. ನಂತರ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆಯ ತಂಡ ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಪ್ರಜ್ಞೆ ತಪ್ಪಿಸಿ ನಂತರ ಎಚ್ಚರಿಕೆಯಿಂದ ಚಿರತೆಯನ್ನು ರಕ್ಷಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ