ಬೆಂಗಳೂರು: ಮದುವೆ ಆನಿವರ್ಸರಿಗೆ ಗಿಫ್ಟ್ ನೀಡಿಲ್ಲ ಎಂದು ಮಲಗಿದ್ದ ಗಂಡನನ್ನು ಚಾಕುವಿನಿಂದ ಇರಿದ ಪತ್ನಿ
ಮದುವೆ ಆ್ಯನಿವರ್ಸರಿ ದಿನ ಪತಿ ಗಿಫ್ಟ್ ನೀಡಿಲ್ಲ ಎಂಬ ಕಾರಣಕ್ಕೆ, ಆತ ಮಲಗಿರುವ ಹೋಗಿ ಪತ್ನಿ ಅಡುಗೆ ಮನೆಯ ಬಳಸುವ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ವೇಳೆ ಪತಿಯ ದೇಹದಲ್ಲಿ ಹಲವೆಡೆ ಇರಿದ ಗಾಯಗಳಾಗಿವೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಮದುವೆ ವಾರ್ಷಿಕೋತ್ಸವ(Wedding Anniversary)ದ ದಿನ ಸಂಭ್ರಮದಲ್ಲಿದ್ದ ಮಹಿಳೆ ತನ್ನ ಪತಿ ಬರುವಾಗ ಸರ್ಪ್ರೈಸ್ ಗಿಫ್ಟ್ ತರಬಹುದು ಎಂದು ಕಾದು ಕುಳಿತಿದ್ದಳು. ಆದರೆ ಕೆಲಸದ ಒತ್ತಡದಲ್ಲಿ ಇದನ್ನೆಲ್ಲಾ ಮರೆತಿದ್ದ ಪತಿ, ಮನೆಗೆ ಬಂದ ತಕ್ಷಣ ಹೋಗಿ ಮಲಗಿದ್ದಾನೆ. ಕೋಪಗೊಂಡ ಪತ್ನಿ ಮಲಗಿದ್ದ ಗಂಡನನ್ನು ಚಾಕುವಿನಿಂದ ಇರಿದಿದ್ದಾಳೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಎಫ್‌ಐಆರ್ ಪ್ರಕಾರ, ಫೆಬ್ರವರಿ 27 ರಂದು ಬೆಂಗಳೂರಿನ ಪಾರ್ಥ ಪ್ರತಿಮ್ (37) ಅವರನ್ನು ಪತ್ನಿ ರಿಯಾ ಘೋಷ್ (35) ಅಡುಗೆಮನೆಯ ಚಾಕುವಿನಿಂದ ಇರಿದಿದ್ದಾಳೆ. ಸಂತ್ರಸ್ತೆಯ ದೂರಿನ ನಂತರ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: Mental Abuse: ಫಸ್ಟ್ ನೈಟ್ ದಿನದಿಂದಲೇ ಗಂಡು ಮಗು ಹೆರುವಂತೆ ಅತ್ತೆ ಮಾವನಿಂದ ಕಿರುಕುಳ; ಕೋರ್ಟ್ ಮೆಟ್ಟಿಲೇರಿದ ಯುವತಿ
ತೀವ್ರ ಗಾಯಗೊಂಡಿದ್ದ ಪ್ರತಿಮ್ ಪತ್ನಿಯನ್ನು ದೂರ ದೂಡಿದ್ದಾನೆ. ಬಳಿಕ ನೆರೆ ಹೊರೆಯವರ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ವೇಳೆ ಪ್ರತಿಮ್ ಅವರ ದೇಹದಲ್ಲಿ ಹಲವೆಡೆ ಗಾಯಗಳಾಗಿವೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Wed, 6 March 24