Happy Anniversary: ಸಂಬಂಧಗಳ ಸಂಭ್ರಮ, 50 ವಸಂತಗಳ ಪೂರೈಸಿದ 30 ಜೋಡಿಗಳು ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಪರಿ ಇದು
ವೈವಾಹಿಕ ಜೀವನದಲ್ಲಿ 50 ವಸಂತಗಳನ್ನು ಪೂರೈಸಿದ 30 ಜೋಡಿಗಳು ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಪರಿ ತುಂಬಾ ವಿರಳವಾಗಿತ್ತು. ಕೇವಲ ಒಂದೇ ಧರ್ಮದವರಲ್ಲ ಹಲವು ಧರ್ಮದ ಜೋಡಿಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಪಶ್ಚಿಮ ಬಂಗಾಳದ ಕತ್ವಾದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದನ್ನು ಬಿಯಾಂಡ್ 50 ಎಂದು ಕರೆಯಲಾಗುತ್ತದೆ. ಈ ಸಮಾರಂಭದಲ್ಲಿ ಭಾಗವಹಿಸುವ ದಂಪತಿ ತಮ್ಮ ವೈವಾಹಿಕ ಜೀವನದ ಐವತ್ತು ವರ್ಷಗಳನ್ನು ದಾಟಿದ್ದಾರೆ. ಸಮಾರಂಭದಲ್ಲಿ ಸನಾಯ್ ಅವರ ಸಂಗೀತ ವಿಭಿನ್ನ ವಾತಾವರಣವನ್ನು ಸೃಷ್ಟಿಸಿತು. ಪೂರ್ವ ಬುರ್ದ್ವಾನ್‌ನ ಕತ್ವಾ ನಗರದ ನಜ್ರುಲ್ ಮುಕ್ತಾ ಮಂಚ್‌ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸುತ್ತಮುತ್ತಲಿ ಪ್ರದೇಶಗಳನ್ನು ಹೂವುಗಳಿಂದ ಸಜ್ಜುಗೊಳಿಸಲಾಗಿತ್ತು. ಮದುವೆಯ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಯೊಂದು ದಂಪತಿ ತಮ್ಮ ಮದುವೆಯ ದಿನವನ್ನು ಮೆಲುಕು ಹಾಕಿದರು.
ಮತ್ತಷ್ಟು ಓದಿ: Telangana: ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಕುಸಿದು ಬಿದ್ದು ಯುವಕ ಸಾವು
ಹಿರಿಯ ಯೋಧ ದುಲಾಲ್ ಕುಮಾರ್ ಮುಖೋಪಾಧ್ಯಾಯ ಮಾತನಾಡಿ, ನಾನು ಮತ್ತು ನನ್ನ ಪತ್ನಿ ಒಂದೇ ಜೀವ ಎರಡು ಆತ್ಮ, ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಗಾಜಿನ ವಸ್ತುಗಳಂತೆ ಒಡೆಯುತ್ತಿವೆ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Mon, 4 December 23