Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಜೋರಾಂನಲ್ಲಿ ಸರ್ಕಾರ ರಚಿಸಲಿದೆ ZPM; 9 ಸೀಟು ಗೆದ್ದ ಎಂಎನ್ಎಫ್, ಬಿಜೆಪಿಗೆ 2

Mizoram Election Result 2023: ಚುನಾವಣಾ ಆಯೋಗ ಮಾಹಿತಿ ಪ್ರಕಾರ ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM) 27 ಸ್ಥಾನಗಳನ್ನು ಗೆದ್ದಿದೆ. ಅದೇ ವೇಳೆ ಮಿಜೋ ನ್ಯಾಷನಲ್ ಫ್ರಂಟ್ 9 ಸ್ಥಾನ ಮತ್ತು ಬಿಜೆಪಿ ಎರಡು ಸೀಟು ಗೆದ್ದಿದೆ. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರು ಸೋಮವಾರ ಸಂಜೆ ರಾಜ್ಯಪಾಲ ಹರಿಬಾಬು ಕಂಬಂಪತಿ ಅವರನ್ನು ಭೇಟಿಯಾಗಿ ರಾಜೀನಾಮೆಯನ್ನು ಸಲ್ಲಿಸುವ ನಿರೀಕ್ಷೆಯಿದೆ.

ಮಿಜೋರಾಂನಲ್ಲಿ ಸರ್ಕಾರ ರಚಿಸಲಿದೆ ZPM; 9 ಸೀಟು ಗೆದ್ದ ಎಂಎನ್ಎಫ್, ಬಿಜೆಪಿಗೆ 2
ZPM ನಾಯಕ ಲಾಲ್ದುಹೋಮ
Follow us
ರಶ್ಮಿ ಕಲ್ಲಕಟ್ಟ
|

Updated on: Dec 04, 2023 | 7:22 PM

ದೆಹಲಿ ಡಿಸೆಂಬರ್ 04:  ಮಿಜೋರಾಂ ವಿಧಾನಸಭಾ ಚುನಾವಣೆ ಫಲಿತಾಂಶ (Mizoram Election Result)ಪ್ರಕಟವಾಗಿದ್ದು, ಈವರೆಗಿನ ಮಾಹಿತಿ ಪ್ರಕಾರ ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM) 27 ಸ್ಥಾನಗಳನ್ನು ಗೆದ್ದಿದೆ. ಅದೇ ವೇಳೆ ಮಿಜೋ ನ್ಯಾಷನಲ್ ಫ್ರಂಟ್ (MNF) 9 ಸ್ಥಾನ ಮತ್ತು ಬಿಜೆಪಿ ಎರಡು ಸೀಟು ಗೆದ್ದಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಮುಖ್ಯಮಂತ್ರಿ ಝೋರಂತಂಗ ಅವರು ಐಜ್ವಾಲ್ ಪೂರ್ವ-1 ಸ್ಥಾನದಲ್ಲಿ ಝೆಡ್ ಪಿಎಂPM ಅಭ್ಯರ್ಥಿ ಲಾಲ್ತನ್ಸಂಗ ವಿರುದ್ಧ ಸೋತಿದ್ದಾರೆ. ಕಾಂಗ್ರೆಸ್ ಒಂದು ಸ್ಥಾನ ಗೆದ್ದಿದೆ.

ಯಾರು ಅಧಿಕಾರದಲ್ಲಿದ್ದರೂ ನಾವು ಭಾರತ ಸರ್ಕಾರದೊಂದಿಗೆ ಸಕಾರಾತ್ಮಕ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ ಎಂದು ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ನಂತರ ZPM ನಾಯಕ ಲಾಲ್ದುಹೋಮ ಹೇಳಿದ್ದಾರೆ. ದಂಪಾ ಕ್ಷೇತ್ರದಲ್ಲಿ ಮಿಜೋ ನ್ಯಾಷನಲ್ ಫ್ರಂಟ್‌ನ ಲಾಲ್ರಿಂಟ್ಲುವಾಂಗಾ ಸೈಲೋ ಅವರು ಒಟ್ಟು 5926 ಮತಗಳನ್ನು ಗಳಿಸಿದ ಜೋರಾಮ್ ಪೀಪಲ್ಸ್ ಮೂವ್‌ಮೆಂಟ್‌ನ ವನ್ಲಾಲ್ಸೈಲೋವಾ ವಿರುದ್ಧ 292 ಮತಗಳ ಅಂತರದಿಂದ ಗೆದ್ದಿದ್ದಾರೆ.

ಒಟ್ಟು 40 ಸ್ಥಾನಗಳನ್ನು ಹೊಂದಿರುವ ಮಿಜೋರಾಂನ ವಿಧಾನಸಭಾ ಚುನಾವಣೆಯಲ್ಲಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ 27 ಸ್ಥಾನಗಳನ್ನು ಗೆದ್ದುಕೊಂಡಿದ್ದು ಹಾಲಿ ಮಿಜೋ ನ್ಯಾಷನಲ್ ಫ್ರಂಟ್ 9 ಸ್ಥಾನಗಳನ್ನು ಗೆದ್ದು 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನವನ್ನು ಗೆದ್ದಿವೆ. ಲಾಂಗ್ಟ್ಲೈ ವೆಸ್ಟ್ ಕ್ಷೇತ್ರದಲ್ಲಿ, ಕಾಂಗ್ರೆಸ್‌ನ ಸಿ. ನ್ಗುನ್ಲಿಯಾನ್‌ಚುಂಗಾ ಅವರು ಎಂಎನ್‌ಎಫ್‌ನ ವಿ ಜಿರ್‌ಸಂಗ ವಿರುದ್ಧ 432 ಮತಗಳ ಅಂತರದಿಂದ ಗೆದ್ದಿದ್ದಾರೆ.

ಮಿಜೋ ನ್ಯಾಷನಲ್ ಫ್ರಂಟ್ ಪಕ್ಷ ಹಚೆಕ್ ಮತ್ತು ತುಯ್ಚಾಂಗ್ ಸೀಟುಗಳನ್ನು ಗೆದ್ದುಕೊಂಡಿದೆ.ಹಚೆಕ್ ಸೀಟಿನಲ್ಲಿ ಎಂಎನ್‌ಎಫ್‌ನ ರಾಬರ್ಟ್ ರೊಮಾವಿಯಾ ರಾಯ್ಟ್ ಅವರು ಜೊರಾಮ್ ಪೀಪಲ್ಸ್ ಮೂವ್‌ಮೆಂಟ್‌ನ ಕೆಜೆ ಲಾಲ್ಬಿಯಾಕಂಘೆಟಾ ವಿರುದ್ಧ 306 ಮತಗಳಿಂದ ಗೆದ್ದಿದ್ದಾರೆ. ಎಂಎನ್‌ಎಫ್‌ನ ರಸಿಕ್ ಮೋಹನ್ ಚಕ್ಮಾ ಅವರು ಟುಯಿಚಾಂಗ್ ಕ್ಷೇತ್ರದಲ್ಲಿ ಬಿಜೆಪಿಯ ದುರ್ಜ್ಯಾ ಧನ್ ಚಕ್ಮಾ ವಿರುದ್ಧ 651 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸಿಎಂ ಝೋರಂತಂಗ ರಾಜ್ಯಪಾಲರನ್ನು ಭೇಟಿ ಮಾಡುವ ನಿರೀಕ್ಷೆ

ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರು ಸೋಮವಾರ ಸಂಜೆ ರಾಜ್ಯಪಾಲ ಹರಿಬಾಬು ಕಂಬಂಪತಿ ಅವರನ್ನು ಭೇಟಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಸೋತ ನಂತರ ರಾಜೀನಾಮೆಯನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಪಿಟಿಐ ವರದಿ ಮಾಡಿದೆ.

ಸೈಹಾ ಮತ್ತು ಪಾಲಕ್ ಗೆದ್ದ ಬಿಜೆಪಿ

ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಪಾಲಕ್ ಕ್ಷೇತ್ರದಲ್ಲಿ ಬಿಜೆಪಿಯ ಕೆ ಹ್ರಾಮೋ ಅವರು ಮಿಜೋ ನ್ಯಾಷನಲ್ ಫ್ರಂಟ್‌ನ ಕೆಟಿ ರೋಖಾ ವಿರುದ್ಧ 1241 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸೈಹಾದಲ್ಲಿ ಡಾ.ಕೆ.ಬೀಚುವಾ ಅವರು ಮಿಜೋ ನ್ಯಾಷನಲ್ ಫ್ರಂಟ್‌ನ ಎಚ್‌ಸಿ ಲಾಲ್ಮಲ್ಸಾವ್ಮಾ ಝಸಾಯಿ ವಿರುದ್ಧ 616 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 2018ರ ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನು ಗೆದ್ದಿತ್ತು.

ಇದನ್ನೂ ಓದಿ: Mizoram Election Result 2023: ಮಿಜೋರಾಂನಲ್ಲಿ 11 ಸ್ಥಾನಗಳಲ್ಲಿ ZPMಗೆ ಆರಂಭಿಕ ಮುನ್ನಡೆ

ZPM ಕಚೇರಿಯಲ್ಲಿ ಸಂಭ್ರಮಾಚರಣೆ

ಐಜ್ವಾಲ್‌ನಲ್ಲಿರುವ ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM) ಕಚೇರಿಯಲ್ಲಿ ಸಂಭ್ರಮಾಚರಣೆಗಳು ಮುಂದುವರೆದಿದ್ದು, ಪಕ್ಷವು ರಾಜ್ಯದಲ್ಲಿ ಸರ್ಕಾರ ರಚಿಸಲು ಸಜ್ಜಾಗುತ್ತಿದೆ. ನಾಳೆ ಅಥವಾ ನಾಡಿದ್ದು ನಾನು ರಾಜ್ಯಪಾಲರನ್ನು ಭೇಟಿ ಮಾಡುತ್ತೇನೆ. ಈ ತಿಂಗಳೊಳಗೆ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ ಎಂದು ZPM ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಹೇಳಿದ್ದಾರೆ.

ಮಿಜೋರಾಂ ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಎಂಎನ್‌ಎಫ್ ಅಭ್ಯರ್ಥಿ ಲರುತ್ಕಿಮಾ ಅವರು ಐಜ್ವಾಲ್ ವೆಸ್ಟ್ II ಅಸೆಂಬ್ಲಿ ಕ್ಷೇತ್ರದಲ್ಲಿ ZPM ನಾಮನಿರ್ದೇಶಿತ ಲಾಲ್‌ಂಗಿಂಗ್ಲೋವಾ ಹ್ಮಾರ್ ವಿರುದ್ಧ ಸೋತಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಜೋರಾಮ್ ಪೀಪಲ್ಸ್ ಮೂವ್‌ಮೆಂಟ್‌ನ ಹ್ಮಾರ್ 10,398 ಗಳಿಸಿದರೆ, ಮಿಜೋ ನ್ಯಾಷನಲ್ ಫ್ರಂಟ್‌ನ ಲಾಲ್ರುತ್ಕಿಮಾ 5,579 ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ನ್ಗುರ್ಡಿಂಗ್ಲಿಯಾನಾ 1,528 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಲಾಲ್ಡಿಂಗ್ಲಿಯಾನ ಕೇವಲ 99 ಮತಗಳನ್ನು ಪಡೆದಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?