ಹೆದ್ದಾರಿ ಡಿವೈಡರ್ ಮೇಲೆ ಈ ವಿಶೇಷ ಹೂವಿನ ಗಿಡ ಮಾತ್ರ ನೆಡಲಾಗುತ್ತದೆ ಯಾಕೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ 

Oleander Plants On Highway: ಸಾಮಾನ್ಯವಾಗಿ ನಾವು ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ರಸ್ತೆಯ ಡಿವೈಡರ್ ಗಳಲ್ಲಿ   ಸೊಂಪಾಗಿ ಬೆಳೆದು ನಿಂತಿರುವಂತಹ ಗುಲಾಬಿ ಬಣ್ಣದ ಸುಂದರ ಹೂವುಗಳನ್ನು ಬಿಡುವಂತಹ ಕಣಗಿಲೆ (ಓಲಿಯಾಂಡರ್) ಗಿಡಗಳನ್ನು  ನೋಡಿರುತ್ತೇವೆ ಅಲ್ವಾ.  ಅಲ್ಲಾ ಪ್ರತಿಯೊಂದು ಹೆದ್ದಾರಿಗಳ ಡಿವೈಡರ್  ಗಳಲ್ಲೂ ಈ ಒಂದು ಗಿಡವನ್ನೇ ಏಕೆ ನೆಡುತ್ತಾರೆ, ಇದರ ಹಿಂದೆ ಏನಾದ್ರೂ ಕಾರಣ ಇರ್ಬೋದಾ ಅನ್ನೋ ಯೋಚನೆ ನಿಮಗೂ ಬಂದಿದ್ಯಾ?  ಹೌದು ಇದರ ಹಿಂದೆಯೂ ಒಂದು ಕಾರಣವಿದೆಯಂತೆ, ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೆದ್ದಾರಿ ಡಿವೈಡರ್ ಮೇಲೆ ಈ ವಿಶೇಷ ಹೂವಿನ ಗಿಡ ಮಾತ್ರ ನೆಡಲಾಗುತ್ತದೆ ಯಾಕೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 06, 2024 | 6:06 PM

ನೀವೆಲ್ಲರೂ ಪ್ರಯಾಣಿಸುವ ಸಂದರ್ಭದಲ್ಲಿ ಹೆದ್ದಾರಿಗಳ ಮಧ್ಯಭಾಗದಲ್ಲಿರುವ ಡಿವೈಡರ್ಗಳಲ್ಲಿ ಸುಂದರವಾದ  ಗುಲಾಬಿ ಬಣ್ಣದ ಹೂವುಗಳನ್ನು ಬಿಡುವಂತಹ ಸಸ್ಯಗಳನ್ನು ನೆಟ್ಟಿರುವುದನ್ನು ಗಮನಿಸಿರಬಹುದಲ್ವಾ. ಈ ಗಿಡದ ಹೆಸರು ಕಣಗಿಲೆ (ಒಲಿಯಾಂಡರ್). ಈ ಗಿಡದ  ಹೂವುಗಳು ನೋಡಲು ತುಂಬಾ ಸುಂದರವಾಗಿದ್ದು, ರಸ್ತೆಯ ಸೌಂದರ್ವನ್ನು ಹೆಚ್ಚಿಸಲೆಂದೇ  ಎಲ್ಲಾ ಹೆದ್ದಾರಿಗಳ ಮಧ್ಯಭಾಗದಲ್ಲೂ ಈ ಸಸ್ಯವನ್ನೇ  ನೆಟ್ಟಿರಬಹುದು ಎಂದು ಹಲವರು ಭಾವಿಸುತ್ತಾರೆ. ಅಲ್ಲಾ ಎಲ್ಲಾ ಹೆದ್ದಾರಿಗಳ ಮಧ್ಯಭಾಗದಲ್ಲಿ ಈ ಒಂದು ವಿಶೇಷ ಗಿಡವನ್ನೇ ಏಕೆ ಬೆಳೆಸಲಾಗುತ್ತದೆ, ಬೇರೆ ಗಿಡಗಳನ್ನು ನೆಡಬಹುದಲ್ವಾ ಅನ್ನೋ ಯೋಚನೆ ನಿಮಗೂ ಬಂದಿದ್ಯಾ?  ಹೆದ್ದಾರಿಗಳ ಡಿವೈಡರ್ಗಳಲ್ಲಿ  ಕೇವಲ ಕಣಗಿಲೆ ಗಿಡವನ್ನು ಮಾತ್ರ ನೆಡುವುದರ ಹಿಂದೆ ಇಂಟರೆಸ್ಟಿಂಗ್ ಕಾರಣವಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಹೆದ್ದಾರಿಗಳ ಡಿವೈಡರ್ ಗಳಲ್ಲಿ  ಕಣಗಿಲೆ ಗಿಡಗಳನ್ನು ಏಕೆ ಬೆಳೆಸಲಾಗುತ್ತದೆ?

ಹೆದ್ದಾರಿಗಳ ಮಧ್ಯ ಭಾಗದಲ್ಲಿರುವ ಡಿವೈಡರ್ಗಳಲ್ಲಿ  ಕೇವಲ ಗುಲಾಬಿ ಬಣ್ಣದ ಹೂವುಗಳನ್ನು ಬಿಡುವಂತಹ ಕಣಗಿಲೆ ಸಸ್ಯವನ್ನೇ ನೆಡಲಾಗುತ್ತದೆ, ಏಕೆಂದರೆ  ನಗರಗಳಲ್ಲಿನ ಹೆದ್ದಾರಿಗಳಲ್ಲಿ ಪ್ರತಿಕ್ಷಣವೂ ವಾಹನಗಳೂ ಓಡಾಡುತ್ತಲೇ ಇರುತ್ತವೆ. ಈ ವಾಹನಗಳಿಂದ ಹೊರಸೂಸುವ ಹೊಗೆಯು ಬಹಳಷ್ಟು ಇಂಗಾಲದ ಡೈ ಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತವೆ. ಈ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿ ಶುದ್ಧವಾದ ಆಮ್ಲಜನಕವನ್ನು ನೀಡುವ ಸಾಮರ್ಥ್ಯ ಈ ಸಸ್ಯಕ್ಕಿದೆ. ಹೌದು ಈ ಸಸ್ಯದ ಎಲೆಗಳು ಮತ್ತು ಹೂವುಗಳು ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುವುದಲ್ಲದೆ ವಾಯುವಿನ ಮಾಲೀನ್ಯಕಾರಕಗಳನ್ನು ತೆಗೆದುಹಾಕುವ ಮೂಲಕ ಶುದ್ಧ ಗಾಳಿಯನ್ನು ನೀಡುತ್ತದೆ. ಇದರಿಂದ  ಹೆದ್ದಾರಿಯಲ್ಲಿ ಪ್ರಯಾಣಿಸುವರು ಶುದ್ಧ ಗಾಳಿಯನ್ನು ಉಸಿರಾಡಬಹುದು. ಇದೇ ಕಾರಣಕ್ಕೆ ಹೆದ್ದಾರಿಗಳಲ್ಲಿ ಈ ಸಸ್ಯವನ್ನೇ ಹೆಚ್ಚಾಗಿ ನೆಡಲಾಗುತ್ತದೆ.

ಇದನ್ನೂ ಓದಿ: ಕೈಯಿಲ್ಲ ಎಂದು ಸುಳ್ಳು ಹೇಳಿ ಭಿಕ್ಷಾಟನೆ ಮಾಡುತ್ತಿದ್ದ ಬಾಲಕನಿಗೆ ಬೈಕ್​​​ ಸವಾರ ಮಾಡಿದ್ದೇನು? ನೋಡಿ

ಅಷ್ಟೇ ಅಲ್ಲದೆ ಒಣ ಪ್ರದೇಶದಲ್ಲೂ ಸೊಂಪಾಗಿ ಬೆಳೆಯುವ ಈ ಸಸ್ಯಗಳಿಗೆ ಅಷ್ಟಾಗಿ ನೀರು, ಗೊಬ್ಬರ ಇತ್ಯಾದಿ  ನಿರ್ವಹಣೆಯ ಅಗತ್ಯವಿಲ್ಲ. ಹೀಗಾಗಿ ಸುಲಭ  ನಿರ್ವಹಣೆಯ ಕಾರಣಕ್ಕಾಗಿಯೂ ಈ ಸಸ್ಯಗಳನ್ನು ಬೆಳೆಸಲಾಗುತ್ತದೆ. ಜೊತೆಗೆ ಓಲಿಯಾಂಡರ್ ಸಸ್ಯಗಳು ಮಣ್ಣಿನ ಸವಕಳಿಯನ್ನು ತಡೆಯುತ್ತದೆ ಮತ್ತು ಶಬ್ದ ಮಾಲೀನ್ಯವನ್ನು ಕಡಿಮೆ ಮಾಡುವ ಶಕ್ತಿಯೂ ಈ ಸಸ್ಯಕ್ಕಿದೆ.  ಈ ಎಲ್ಲಾ ಕಾರಣಕ್ಕಾಗಿ ಇದೇ ಸಸ್ಯವನ್ನು ಹೆದ್ದಾರಿಯ ಮಧ್ಯೆ ಭಾಗದಲ್ಲಿ ನೆಡಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ