102 ಮಕ್ಕಳಾದ ನಂತರ ತನ್ನ 12 ಹೆಂಡತಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಲು ನಿರ್ಧರಿಸಿದ ವ್ಯಕ್ತಿ

| Updated By: ಅಕ್ಷತಾ ವರ್ಕಾಡಿ

Updated on: Jun 09, 2023 | 3:54 PM

102 ಮಕ್ಕಳು, 578 ಮೊಮ್ಮಕ್ಕಳು ಹಾಗೂ 12 ಹೆಂಡತಿಯರೊಂದಿಗೆ ಸಂಸಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಇನ್ನೂ ಮುಂದಕ್ಕೆ ಮಕ್ಕಳಾಗದಿರಲು ತನ್ನ 12 ಮಡದಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಲು ಮುಂದಾಗಿದ್ದಾರೆ.

102 ಮಕ್ಕಳಾದ ನಂತರ ತನ್ನ 12 ಹೆಂಡತಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಲು ನಿರ್ಧರಿಸಿದ ವ್ಯಕ್ತಿ
102 ಮಕ್ಕಳು, 12 ಹೆಂಡತಿಯರು, 578 ಮೊಮ್ಮಕ್ಕಳು
Image Credit source: Twitter/@historyinmemes
Follow us on

ಉಗಾಂಡಾದ ಲುಸಾಕಾದ 68 ವರ್ಷದ ಮೂಸಾ ಹಸಹ್ಯಾ ಕಸೆರಾ ಎಂಬ ಹೆಸರಿನ ವ್ಯಕ್ತಿಗೆ 12 ಪತ್ನಿಯರು ಸೇರಿದಂತೆ 102 ಮಕ್ಕಳು ಹಾಗೂ 578 ಮೊಮ್ಮಕ್ಕಳಿದ್ದಾರೆ. ಇಷ್ಟು ಮಕ್ಕಳ ತಂದೆಯಾದ ಬಳಿಕ ಇನ್ನು ಮುಂದಕ್ಕೆ ಮಕ್ಕಳಾಗದಿರಲು ತನ್ನ 12 ಮಡದಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಲು ಮುಂದಾಗಿದ್ದಾರೆ. “ಸವಾಲು ಏನೆಂದರೆ ನಾನು ನನ್ನ ಮೊದಲ ಮತ್ತು ಕೊನೆಯ ಒಂದು ಹತ್ತು ಮಕ್ಕಳ ಹೆಸರನ್ನು ಮಾತ್ರ ನೆನಪಿಸಿಕೊಳ್ಳಬಲ್ಲೆ ಆದರೆ ಕೆಲವು ಮಕ್ಕಳ ಹೆಸರೇ ನೆನಪಿಲ್ಲ ಎಂದು ಮೂಸಾ ಹೇಳಿದ್ದು, ಟೈಮ್ಸ್ ನೌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ನಡು ರಸ್ತೆಯಲ್ಲಿ ಕಾರಿನ ಮೇಲೆ ಹತ್ತಿ ಮಹಿಳೆಯ ವಿಚಿತ್ರ ವರ್ತನೆ; ವಿಡಿಯೋ ಇಲ್ಲಿದೆ ನೋಡಿ

ಎ ಎಫ್​ ಪಿಯಲ್ಲಿನ ವರದಿಯ ಪ್ರಕಾರ, 1972 ರಲ್ಲಿ ತಮ್ಮ ಮೊದಲ ಹೆಂಡತಿಯನ್ನು ಮದುವೆಯಾದಾಗ ಮೂಸಾ ಅವರಿಗೆ ಕೇವಲ 17 ವರ್ಷ ವಯಸ್ಸು. ಇದಾದ ಬಳಿಕ ಅವರ ಕುಟುಂಬ ಮತ್ತು ಸಂಬಂಧಿಕರು ಹೆಚ್ಚಿನ ಮಹಿಳೆಯರನ್ನು ಮದುವೆಯಾಗಲು ಮತ್ತು ಅವರ ಕುಟುಂಬವನ್ನು ವಿಸ್ತರಿಸಲು ಸಲಹೆ ನೀಡಿದ್ದರು. ಅದಕ್ಕಾಗಿ ಅವರು 12 ಮಹಿಳೆಯರನ್ನು ವಿವಾಹವಾಗಿ 102 ಮಕ್ಕಳಿಗೆ ತಂದೆಯಾಗಿದ್ದೇನೆ. ಆದರೆ, ಈಗ ತನ್ನ ಕುಟುಂಬದ ಊಟ, ಶಿಕ್ಷಣ, ಬಟ್ಟೆ ಭರಿಸಲು ಸಾಧ್ಯವಾಗದೆ ಆರ್ಧಿಕವಾಗಿ ಕುಸಿದ್ದಿದ್ದೇನೆ. ಜೊತೆಗೆ ಇಬ್ಬರು ಹೆಂಡತಿಯರು ಈಗಾಗಲೇ ನನ್ನನ್ನು ತೊರೆದಿದ್ದಾರೆ ಎಂದು ಮೂಸಾ ಹೇಳಿಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:25 pm, Fri, 9 June 23