Viral Video: ತಾಯಿಯಿಂದ ಬೇರ್ಪಟ್ಟ ಕೋತಿ ಮರಿಯನ್ನು ತನ್ನ ಮಡಿಲಲ್ಲಿ ಹೊತ್ತೊಯ್ದ ಬೆಕ್ಕು… ಇಲ್ಲಿದೆ ನೋಡಿ ಹೃದಯಸ್ಪರ್ಶಿ ವಿಡಿಯೋ

ಕೋತಿಗಳು ಮತ್ತು ಬೆಕ್ಕುಗಳ ಕುರಿತ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಬಹುತೇಕ ಹೆಚ್ಚಿನ ವಿಡಿಯೋಗಳಲ್ಲಿ ಈ ಎರಡು ಪ್ರಾಣಿಗಳು ಜಗಳವಾಡುವ ಹಾಸ್ಯಮಯ ದೃಶ್ಯಗಳನ್ನೇ ಕಾಣಬಹುದು. ಆದರೆ ಈ ಪ್ರಾಣಿಗಳ ನಡುವೆಯೂ ಒಂದೊಳ್ಳೆ ಭಾಂದವ್ಯವಿದೆ. ಅದಕ್ಕೆ ಉದಾಹರಣೆಯೆಂಬಂತೆ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ತಾಯಿಯಿಂದ ಬೇರ್ಪಟ್ಟ ಕೋತಿ ಮರಿಯಲ್ಲಿ ಬೆಕ್ಕೊಂದು ತನ್ನ ಮಡಿಲಿನಲ್ಲಿ ಹೊತ್ತು ತಿರುಗಿದೆ. ಮುಗ್ಧ ಪ್ರಾಣಿಗಳ ಎಳ್ಳಷ್ಟು ಕಲ್ಮಷವಿಲ್ಲದ ಈ ಪ್ರೀತಿಯನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.

Viral Video: ತಾಯಿಯಿಂದ ಬೇರ್ಪಟ್ಟ ಕೋತಿ ಮರಿಯನ್ನು ತನ್ನ ಮಡಿಲಲ್ಲಿ ಹೊತ್ತೊಯ್ದ ಬೆಕ್ಕು… ಇಲ್ಲಿದೆ ನೋಡಿ ಹೃದಯಸ್ಪರ್ಶಿ ವಿಡಿಯೋ
Cat carrying a baby monkey
Image Credit source: Twitter
Updated By: ಅಕ್ಷತಾ ವರ್ಕಾಡಿ

Updated on: Nov 24, 2023 | 10:09 AM

ವಿಭಿನ್ನ ಜಾತಿಗಳಿಗೆ ಸೇರಿದ ಪ್ರಾಣಿಗಳು ಸಾಮಾನ್ಯವಾಗಿ ಒಂದಕ್ಕೊಂದು ಹೊಂದಿಕೊಳ್ಳುವುದು ತೀರಾ ವಿರಳ. ಹೆಚ್ಚಾಗಿ ನಾಯಿ ಬೆಕ್ಕುಗಳು ಪರಸ್ಪರ ಜಗಳವಾಡುತ್ತವೆ. ಕೋತಿಗಳು ಕೂಡಾ ನಾಯಿ, ಬೆಕ್ಕು ಸೇರಿದಂತೆ ಇತರ ಪ್ರಾಣಿಗಳಿಗೆ ತರ್ಲೆ ಮಾಡುತ್ತಿರುತ್ತವೆ. ಹೀಗೆ ಎಲ್ಲಾ ಪ್ರಾಣಿಗಳು ಒಂದಕ್ಕೊಂದು ಹೊಂದಿಕೊಳ್ಳುವುದಕ್ಕಿಂತ ಜಗಳವಾಡುವಂತಹದ್ದು ಅಥವಾ ಪರಸ್ಪರ ದಾಳಿ ಮಾಡುವಂತಹದ್ದೇ ಹೆಚ್ಚು. ಹೀಗಿದ್ದರೂ ಕೆಲವೊಮ್ಮೆ ಈ ಪ್ರಾಣಿಗಳ ನಡುವೆ ಒಂದೊಳ್ಳೆ ಸ್ನೇಹ ಭಾಂದವ್ಯ ಅನ್ನೊದು ಇರುತ್ತೆ. ಪ್ರಾಣಿಗಳ ನಡುವಿನ ಈ ಸ್ನೇಹ ಬಾಂಧವ್ಯದ ವಿಡಿಯೋಗಳನ್ನು ನಾವೆಲ್ಲರೂ ನೋಡಿರುತ್ತೇವೆ. ಇದೇ ಕಾರಣಕ್ಕೆ ಮನುಷ್ಯರಿಗಿಂತ ಪ್ರಾಣಿಗಳೆ ಎಷ್ಟೋ ಮೇಲು, ಪ್ರಾಣಿಗಳಿಂದ ಮನುಷ್ಯರು ಕಲಿಯಬೇಕಾದ ಜೀವನಪಾಠಗಳು ಸಾಕಷ್ಟಿವಿವೆ ಎಂದು ಹೇಳುವ ಮಾತಿದೆ. ಇದು ನಿಜ ಅಲ್ವಾ… ಪ್ರಾಣಿಗಳಲ್ಲಿರುವ ಮಾನವೀಯ ಮೌಲ್ಯಗಳು, ಮನುಷ್ಯರಲ್ಲಿ ಕಾಣಸಿಗುವುದು ತೀರಾ ವಿರಳ. ಪ್ರಾಣಿಗಳು ಮನುಷ್ಯರಿಗೆ ಸಹಾಯ ಮಾಡುವಂತಹ ಅಥವಾ ಒಂದು ಪ್ರಾಣಿ ಇನ್ನೊಂದು ಪ್ರಾಣಿಯ ಕಷ್ಟಕ್ಕೆ ಸ್ಪಂದಿಸುವಂತ ಅನೇಕ ಉದಾಹರಣೆಗಳನ್ನು ನಾವು ನೋಡಿರುತ್ತೇವೆ. ಈಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ತಾಯಿಯಿಂದ ಬೇರ್ಪಟ್ಟ ಪುಟ್ಟ ಕೋತಿಮರಿಯನ್ನು ಬೆಕ್ಕೊಂದು ತನ್ನ ಮಡಿಲಿನಲ್ಲಿ ಹೊತ್ತಿಕೊಂಡು ತಿರುಗಿದೆ. ಮುಗ್ಧ ಪ್ರಾಣಿಗಳ ಈ ನಿಷ್ಕಲ್ಮಷ ಪ್ರೀತಿಗೆ ಭಾರಿ ಮೆಚ್ಚುಗೆ ದೊರಕಿದೆ.

ಈ ವೀಡಿಯೋವನ್ನು Nature is Amazing ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಕೋತಿಮರಿಯನ್ನು ಬೆಕ್ಕೊಂದು ತನ್ನ ಮಡಿಲಲ್ಲಿ ಹೊತ್ತುಕೊಂಡು ತಿರುಗಾಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಈ ಪ್ರಾಣಿ ಅಕ್ರಮವಾಗಿ ಮರ ಕಡಿಯುತ್ತಿದೆ, ಮೂರ್ತಿ ಚಿಕ್ಕದಾದರೂ, ಶಕ್ತಿ ದೊಡ್ಡದು

ವೈರಲ್ ವಿಡಿಯೋದಲ್ಲಿ ಬಿಳಿ ಮತ್ತು ಕಪ್ಪು ಮಿಶ್ರಿತ ಬಣ್ಣದ ಬೆಕ್ಕೊಂದು, ಮಾನವೀಯ ದೃಷ್ಟಿಯಿಂದ ತಾಯಿಯಿಂದ ಬೇರ್ಪಟ್ಟಿರುವ ಪುಟ್ಟ ಕೋತಿಮರಿಯನ್ನು ತನ್ನ ಸ್ವಂತ ಮಗುವಿನಂತೆಯೇ ಮಡಿಲಿನಲ್ಲಿ ಹೊತ್ತುಕೊಂಡು ತಿರುಗಿದೆ. ಆ ಕೋತಿ ಮರಿ ಬೆಕ್ಕನ್ನೇ ತನ್ನ ತಾಯಿಯೆಂದು ಭಾವಿಸಿ ಬೆಕ್ಕನ್ನು ಗಟ್ಟಿಯಗಿ ತಬ್ಬಿಕೊಂಡಿರುವುದನ್ನು ಕಾಣಬಹುದು. ಈ ಎರಡು ಪ್ರಾಣಿಗಳ ಸುಂದರ ಬಾಂಧವ್ಯದ ವಿಡಿಯೋಗೆ ಸಾಮಾಜಿಕ ಜಲತಾಣದಲ್ಲಿ ಮೆಚ್ಚುಗೆ ದೊರಕಿದೆ.

ಸಾಮಾಜಿಕ ಮಾಧ್ಯಮ ಫ್ಲಾಟ್ಫಾರ್ಮ್ X ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ 13.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರೂ ʼಎಲ್ಲಾ ಮನುಷ್ಯರೂ ಹೀಗೆ ಪ್ರಾಣಿಗಳಲ್ಲಿರು ಸಹಾನುಭೂತಿಯನ್ನು ಅಳವಡಿಸಿಕೊಳ್ಳಬಹುದಲ್ಲವೇʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ಮಾನವೀಯವಾಗಿ ಹೇಗೆ ವರ್ತಿಸುತ್ತವೆ ಎಂಬುದು ನನಗೆ ಆಶ್ಚರ್ಯವನ್ನು ಉಂಟುಮಾಡುತ್ತಿದೆʼ ಎಂದು ಕಮೆಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: