Viral Video: ಅರೆರೇ, ಇದೇನಿದು? ಬೆಕ್ಕು ಅಡುಗೆ ಮಾಡುತ್ತದೆಯೇ? ಅಚ್ಚರಿಯ ವಿಡಿಯೊ ಇಲ್ಲಿದೆ

ಬೆಕ್ಕಿನ ತುಂಟಾಟಗಳನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಇಲ್ಲೊಂದು ಮುದ್ದಾದ ಬೆಕ್ಕು, ಅಡುಗೆ ಮಾಡುತ್ತದೆ ಎಂದರೆ ನೀವು ನಂಬಲೇ ಬೇಕು. ಈ ಬಾಣಸಿಗ ಬೆಕ್ಕಿನ ವಿಡಿಯೊಗಳು ಇಲ್ಲಿವೆ.

Viral Video: ಅರೆರೇ, ಇದೇನಿದು? ಬೆಕ್ಕು ಅಡುಗೆ ಮಾಡುತ್ತದೆಯೇ? ಅಚ್ಚರಿಯ ವಿಡಿಯೊ ಇಲ್ಲಿದೆ
ವಿಡಿಯೊದಿಂದ ಸೆರೆಹಿಡಿಯಲಾದ ಚಿತ್ರ (Credits: Thatlittlepuff/ Instagram)
Edited By:

Updated on: Oct 02, 2021 | 5:49 PM

ಸಾಮಾಜಿಕ ಜಾಲತಾಣಗಳು ಮತ್ತು ಯೂಟ್ಯೂಬ್ ಚಾನೆಲ್ ಎಲ್ಲರಿಗೂ ಲಭ್ಯವಾದ ನಂತರ ವೈವಿಧ್ಯಮಯ ವಿಡಿಯೊಗಳು ವೀಕ್ಷಕರಿಗೆ ಲಭ್ಯವಾಗುತ್ತಿವೆ. ಜನರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನ ಜನರ ಅಂಗೈಗೆ ತಲುಪಿಸುವ ಮಾಧ್ಯಮಗಳಾಗಿ ಅವರು ಬದಲಾಗಿವೆ. ಅಂಥವುಗಳಲ್ಲಿ ಕೆಲವು ವಿಡಿಯೋಗಳು ಚಿಂತನೆಗೆ ಹಚ್ಚುವಂತಿದ್ದರೆ ಮತ್ತೆ ಕೆಲವು ತಮಾಷೆಯಾಗಿರುತ್ತವೆ. ಇದೇ ವೇಳೆ ಜನರು ತಾವು ಸಾಕಿರುವ ನೆಚ್ಚಿನ ಪ್ರಾಣಿಗಳ ವಿಡಿಯೋಗಳನ್ನೂ ಹಂಚಿಕೊಳ್ಳುತ್ತಾರೆ. ಅವುಗಳಲ್ಲಿನ ವಿಶೇಷ ಪ್ರತಿಭೆ, ತುಂಟತನ ಇವುಗಳು ನೆಟ್ಟಿಗರಿಗೂ ಸಾಮಾನ್ಯವಾಗಿ ಪ್ರಿಯವಾಗುತ್ತವೆ. ಅಂಥದ್ದೇ ಒಂದು ವಿಡಿಯೊ ಇಲ್ಲಿದ್ದು, ಬೆಕ್ಕು ಅಡುಗೆ ಮನೆ ಸೇರಿ ತನಗೆ ಬೇಕಾದ ಜ್ಯೂಸ್ ತಯಾರಿಸಿಕೊಳ್ಳುತ್ತಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ಬಾಣಸಿಗನಾಗಿ ಅಡುಗೆ ಮನೆ ಹೊಕ್ಕಿರುವ ಬೆಕ್ಕು, ತಾನು ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ಬಾಯಲ್ಲಿ ನೀರೂರಿಸುವ ಪದಾರ್ಥಗಳನ್ನು ತಯಾರಿಸಿದೆ. ತನಗೆ ಬೇಕಾದ ಜ್ಯೂಸ್, ತಿಂಡಿಗಳನ್ನು ಮಾಡುವ ಅದು ಎಲ್ಲರ ಗಮನ ಸೆಳೆದಿದೆ. ಕೇವಲ ಪದಾರ್ಥ ತಯಾರಿಸುವುದಲ್ಲದೇ, ದೊಡ್ಡ ಪಂಚತಾರಾ ಹೋಟೆಲ್​ಗಳಲ್ಲಿ ಅದನ್ನು ಅಲಂಕರಿಸಿ ಟೇಬಲ್ ಮೇಲೆ ಇಡುವುದೂ ಈ ಬೆಕ್ಕಿಗೆ ಗೊತ್ತು. ಸದ್ಯ ವೈರಲ್ ಆಗಿರುವ ಈ ವಿಡಿಯೊಗಳನ್ನು ನೋಡಿ.

ಹಲವು ಜನರಿಗೆ ಬೆಕ್ಕಿನ ಅಡುಗೆ ತಯಾರಿಯಯ ವಿಡಿಯೋಗಳನ್ನು ನೋಡಿದ ಮೇಲೆ ಅದರ ಅಸಲಿಯತ್ತಿನ ಬಗ್ಗೆ ಸಂಶಯ ಬಂದಿರಬಹುದು. ಹೌದು. ನಿಮ್ಮ ಸಂಶಯ ನಿಜ. ಇದು ಬೆಕ್ಕಿನ ಕೈ- ಕಾಲನ್ನು ಬಳಸಿ, ಅದು ತಯಾರಿಸಿದಂತೆ ತೋರಿಸಿರುವ ವಿಡಿಯೊ. ಆದರೆ ಆ ಮುದ್ದಾದ ಬೆಕ್ಕು, ನೀಡಿರುವ ಪೋಸ್​ಗಳು, ತಾನೇ ತಯಾರಿಸಿದಂತೆ ನಟಿಸಿರುವುದು.. ಈ ಎಲ್ಲವೂ ನೋಡುಗರಿಗೆ ಇಷ್ಟವಾಗಿದೆ. ಆದ್ದರಿಂದಲೇ ನೆಟ್ಟಿಗರು ಈ ಬೆಕ್ಕಿನ ಚಾಣಾಕ್ಷತೆಗೆ ಶಹಬ್ಬಾಸ್ ಎಂದಿದ್ದಾರೆ.

ಇದನ್ನೂ ಓದಿ:

ಮದುವೆಯಲ್ಲಿ ಒಂದು ಪೀಸ್ ಜಾಸ್ತಿ ಕೇಕ್ ತಿಂದ ವ್ಯಕ್ತಿಯ ಬಳಿ ಹಣ ಕೇಳಿದ ಜೋಡಿ; ಏನಿದು ಪ್ರಕರಣ?

ಅಬ್ಬಬ್ಬಾ.. ಕಾರಿನ ಮೇಲೆ ಹರಿದು ಬಂತು ಹಾವು! ವಿಡಿಯೋ ವೈರಲ್

ಬೆಂಗಳೂರಿಗೆ ನಾನೇ ಡಾನ್ ಆಗುತ್ತೇನೆ..! ವೈರಲ್ ಆಯ್ತು ಆಡಿಯೋ