AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಬ್ಬಾ.. ಕಾರಿನ ಮೇಲೆ ಹರಿದು ಬಂತು ಹಾವು! ವಿಡಿಯೋ ವೈರಲ್

ಕಾರಿನಲ್ಲಿ ಹೋಗುತ್ತಿದ್ದಾಗ ದೊಡ್ಡ ಗಾತ್ರದ ಹಾವೊಂದು ಕಾರಿನ ಮೇಲೆ ಬರುತ್ತದೆ. ಕಾರಿನ ಮುಂಭಾಗದ ಗ್ಲಾಸ್ ಮೇಲೆ ಹಾವು ಹತ್ತುತ್ತದೆ. ಹಾವನ್ನು ನೋಡಿದ ಕಾರಿನ ಚಾಲಕ ತಕ್ಷಣ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸುತ್ತಾರೆ.

ಅಬ್ಬಬ್ಬಾ.. ಕಾರಿನ ಮೇಲೆ ಹರಿದು ಬಂತು ಹಾವು! ವಿಡಿಯೋ ವೈರಲ್
ಕಾರಿನ ಮೇಲೆ ಬಂದ ಹಾವು
TV9 Web
| Edited By: sandhya thejappa|

Updated on: Oct 02, 2021 | 4:08 PM

Share

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೆ ಹತ್ತಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲ ವಿಡಿಯೋಗಳು ತಮಾಷೆಯಿಂದ ಕೂಡಿರುತ್ತವೆ. ಇನ್ನು ಕೆಲವು ಆಶ್ಚರ್ಯವನ್ನುಂಟು ಮಾಡುತ್ತದೆ. ಮಾತ್ರವಲ್ಲದೇ ವೈರಲ್ ಆದ ಕೆಲ ವಿಡಿಯೋಗಳು ಭಯವನ್ನೂ ಹುಟ್ಟಿಸುತ್ತವೆ. ಸದ್ಯಕ್ಕೆ ಹಾವಿನ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾವು ಅಂದರೆ ಒಂದು ಎದೆ ಬಡಿತ ಹೆಚ್ಚಾಗುತ್ತದೆ. ಕೈ ಕಾಲುಗಳು ನಡುಗುತ್ತವೆ. ಹೀಗಿರುವಾಗ ಇದ್ದಕ್ಕಿದ್ದಂತೆ ಹಾವು ಕಣ್ಣಿನ ಮುಂದೆ ಬಂದರೆ ದಿಕ್ಕು ತೋಚದಂತಾಗುತ್ತದೆ.

ಕಾರಿನಲ್ಲಿ ಹೋಗುತ್ತಿದ್ದಾಗ ದೊಡ್ಡ ಗಾತ್ರದ ಹಾವೊಂದು ಕಾರಿನ ಮೇಲೆ ಬರುತ್ತದೆ. ಕಾರಿನ ಮುಂಭಾಗದ ಗ್ಲಾಸ್ ಮೇಲೆ ಹಾವು ಹತ್ತುತ್ತದೆ. ಹಾವನ್ನು ನೋಡಿದ ಕಾರಿನ ಚಾಲಕ ತಕ್ಷಣ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸುತ್ತಾರೆ. ಕಾರು ನಿಲ್ಲಿಸಿದ ಬಳಿಕ ಹಾವು ಕಾರಿನ ಮೇಲೆ ಹರಿದು ಹೋಗುತ್ತದೆ. ಈ ಎಲ್ಲಾ ದೃಶ್ಯಗಳನ್ನು ಕಾರಿನಲ್ಲಿ ಕುಳಿತಿದ್ದವರು ಸೆರೆ ಹಿಡಿದಿದ್ದಾರೆ. 22 ಸೆಕೆಂಡ್ ಇರುವ ವಿಡಿಯೋ ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಲಾಗಿದೆ.

ಕಾರಿನೊಳಗೆ ಕುಳಿತಿದ್ದವರು ಹಾವಿನ ದೃಶ್ಯವನ್ನು ಸೆರೆಹಿಡಿದಿದ್ದು, 4,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಹಾವು ಕಾರಿನ ಬಾನೆಟ್ನಲ್ಲಿ ಜಾರುತ್ತಿರುವುದು ಮತ್ತು ಕಾರಿನ ವಿಂಡೋ ಸ್ಕ್ರೀನ್ ಬಳಿ ಹರಿದು ಬರುತ್ತಿರುವುದನ್ನು ಕಂಡು ಕಾರಿನಲ್ಲಿದ್ದವರು ಗಾಂಬರಿಗೊಂಡಿದ್ದರು. ಆದರೆ ಹಾವನ್ನು ಕಂಡು ಭಯದಿಂದ ಕಾರಿನ ಕೇಳಗೆ ಇಳಿದಿರುವ ಬಗ್ಗೆ ವಿಡಿಯೋದಲ್ಲಿ ತಿಳಿದುಬಂದಿಲ್ಲ.

ಈ ವಿಡಿಯೋಗೆ ಹಲವರು ಕಾಮೆಂಟ್ ಕೂಡಾ ಮಾಡಿದ್ದಾರೆ. ಇದೇ ಪರಿಸ್ಥಿತಿಯಲ್ಲಿ ತಾವಿದ್ದರೆ ಏನು ಮಾಡುತ್ತಿದ್ದೇವು ಅಂತ ಹೇಳಿದ್ದಾರೆ. ಇನ್ನು ಕೆಲವರು ಹಾವಿನ ಜಾತಿಯ ಬಗ್ಗೆ ಯೋಚಿಸಿದ್ದಾರೆ.

ಇದನ್ನೂ ಓದಿ

Viral Video: ಹಾವು ನೋಡಿ ಕಂಗಾಲಾಗಿ ಕಿರುಚುತ್ತಾ ಓಡಿದ ಯುವತಿ ವಿಡಿಯೋ ವೈರಲ್

Viral Video: ಜೆಸಿಬಿ ಏರಿ ಸವಾರಿ ಹೊರಟ ಜೋಡಿ; ನೆಟ್ಟಿಗರ ಮನಗೆದ್ದ ಈ ವಿಡಿಯೊ ನೋಡಿ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್